Advertisement
ಏನಿದು “ಮಾಯಾನಗರಿ’ ? ಅಂಥದ್ದೇನಿದೆ ಇದರಲ್ಲಿ?
Related Articles
Advertisement
“ಮಾಯಾನಗರಿ’ಗೆ ನಿಮ್ಮ ಪ್ರವೇಶ ಹೇಗಾಯಿತು?
ಈ ಪಾತ್ರಕ್ಕೆ ಆಡಿಷನ್ ಮೂಲಕ ಆಯ್ಕೆಯಾದೆ. ನಿರ್ದೇಶಕರು ಹೇಳಿದ “ಮಾಯಾನಗರಿ’ ಸಿನಿಮಾದ ಕಥೆ ಮತ್ತು ನನ್ನ ಪಾತ್ರ ಎರಡೂ ತುಂಬ ಇಷ್ಟವಾಯಿತು. ನನ್ನ ಸಿನಿಮಾ ಕೆರಿಯರ್‌ನಲ್ಲೇ ಮೊದಲ ಬಾರಿಗೆ ಇಷ್ಟೊಂದು ವೆರೈಟಿಯಾಗಿರುವಂಥ ಈ ಸಿನಿಮಾದಲ್ಲಿತು. ಹಾಗಾಗಿ ತುಂಬ ಖುಷಿಯಿಂದ ಈ ಸಿನಿಮಾ ಒಪ್ಪಿಕೊಂಡೆ.
ಚಿತ್ರದ ಅನುಭವ, ತಂಡದ ಜೊತೆಗಿನ ಓಡಾಟ ಹೇಗಿತ್ತು?
ತುಂಬ ಚೆನ್ನಾಗಿತ್ತು. ಅದರಲ್ಲೂ ನಿರ್ದೇಶಕರು ಸಿನಿಮಾದ ಪ್ರತಿ ದೃಶ್ಯಗಳನ್ನು ಹೇಳಿ ನನಗೆ ಅರ್ಥ ಮಾಡಿಸಿ ನನ್ನಿಂದ ಅಭಿನಯ ತೆಗೆಸುತ್ತಿದ್ದರು. ಬೆಂಗಳೂರು, ಚಿಕ್ಕಮಗಳೂರು, ಜೋಗ, ಹೊನ್ನಾವರ, ಮಾಗಡಿ, ತುಮಕೂರು ಹೀಗೆ ಹಲವು ಲೊಕೇಶನ್ಸ್‌ನಲ್ಲಿ ಸಿನಿಮಾದ ಶೂಟಿಂಗ್ ನಡೆದಿದೆ. ಎಲ್ಲೂ ರಾಜಿಯಾಗದೇ ಇಡೀ ತಂಡ ಒಟ್ಟಾಗಿ ಒಂದೊಳ್ಳೆಯ ಸಿನಿಮಾಕ್ಕೆ ಎಫರ್ಟ್ ಹಾಕಿದೆ. ನಾವಂದುಕೊಂಡಂತೆ, ಸಿನಿಮಾ ತುಂಬ ಚೆನ್ನಾಗಿ ಬಂದಿದೆ.
“ಮಾಯಾನಗರಿ’ ಮೇಲೆ ಏನು ನಿರೀಕ್ಷೆ ಇಟ್ಟುಕೊಂಡಿದ್ದೀರಿ?
“ಮಾಯಾನಗರಿ’ ಔಟ್ ಹಾರರ್-ಥ್ರಿಲ್ಲರ್ ಶೈಲಿಯ ಸಿನಿಮಾವಾದರೂ ಇದರಲ್ಲಿ ಲವ್, ಕಾಮಿಡಿ, ರೊಮ್ಯಾನ್ಸ್, ಆ್ಯಕ್ಷನ್, ಸಾಂಗ್ಸ್ ಹೀಗೆ ಎಲ್ಲ ಥರದ ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಎಲಿಮೆಂಟ್ಸ್ ಇದೆ. ಹಾಗಾಗಿ ಎಲ್ಲ ಥರದ ಆಡಿಯನ್ಸ್‌ಗೂ ಸಿನಿಮಾ ಇಷ್ಟವಾಗುತ್ತದೆ ಎಂಬ ನಂಬಿಕೆಯಿದೆ. ಈಗಾಗಲೇ ಫಸ್ಟ್‌ಲುಕ್, ಟೀಸರ್, ಟ್ರೇಲರ್, ಸಾಂಗ್ಸ್‌ಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ ಖಂಡಿತವಾಗಿಯೂ ಸಿನಿಮಾ ಥಿಯೇಟರ್‌ನಲ್ಲೂ ಆಡಿಯನ್ಸ್‌ಗೆ ಇಷ್ಟವಾಗುತ್ತದೆ ಎಂಬ ನಿರೀಕ್ಷೆಯಿದೆ.
ತೆರೆಮೇಲೆ ನಿಮ್ಮ ಅನೀಶ್ ಕೆಮಿಸ್ಟ್ರಿ ಬಗ್ಗೆ ಏನಂತೀರಿ?
ಅನೀಶ್ ಈಗಾಗಲೇ ಮಾಸ್ ಸಿನಿಮಾಗಳಲ್ಲಿ ಹೀರೋ ಆಗಿ ಗುರುತಿಸಿಕೊಂಡು ಸಕ್ಸಸ್ ಆದವರು. ಅವರ ಜೊತೆ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿ ಕೊಂಡಿರುವುದಕ್ಕೆ ತುಂಬ ಖುಷಿಯಿದೆ. ಇದರಲ್ಲಿ ನನ್ನ ಮತ್ತು ಅನೀಶ್ ನಡುವೆ ಒಂದು ಎಮೋಶನಲ್ ಲವ್‌ಸ್ಟೋರಿ ಇದೆ. ಅನೀಶ್ ಅವರ ಜೊತೆ ಕೆಮಿಸ್ಟ್ರಿ ತುಂಬ ಚೆನ್ನಾಗಿದೆ. ಸ್ಕ್ರೀನ್ ಮೇಲೂ ನಮ್ಮಿಬ್ಬರ ಕೆಮಿಸ್ಟ್ರಿ ವರ್ಕೌಟ್ ಆಗಲಿದೆ ಎಂಬ ವಿಶ್ವಾಸವಿದೆ.