Advertisement

ದರ್ಶನ್ ಜೊತೆ ನಟಿಸೋದು ಈ ನಟಿಯ ಲೈಫ್ ಟೈಮ್ ಡ್ರೀಮ್ ಅಂತೆ

02:13 PM Jun 04, 2021 | Team Udayavani |

ಬೆಂಗಳೂರು: ಚಂದನವನದ ಯಜಮಾನ ನಟ ದರ್ಶನ್ ತುಂಬಾ ಬ್ಯುಝಿ ಇರುವ ನಾಯಕ ನಟ. ಈ ಆರಡಿ ಕಟೌಟ್ ಜೊತೆ ತೆರೆ ಹಂಚಿಕೊಳ್ಳಬೇಕೆಂಬುದು ಸಾಕಷ್ಟು ನಟಿಯರ ಕನಸು. ಇದೀಗ ಕನ್ನಡದ ನಟಿಮಣಿಯೋರ್ವಳು ದಚ್ಚು ಜೊತೆ ಆಕ್ಟ್ ಮಾಡುವ ತನ್ನ ಬಯಕೆಯನ್ನು ಹೊರ ಹಾಕಿದ್ದಾರೆ.

Advertisement

ಹೌದು, ಕನ್ನಡದ ಹಲವು ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿ, ರಿಯಾಲಿಟಿ ಶೋನಲ್ಲೂ ತನ್ನ ಪವರ್ ತೋರಿಸಿ, ಇದೀಗ ಸ್ಯಾಂಡಲ್ವುಡ್ ಗೆ ನಾಯಕಿ ನಟಿಯಾಗಿ ಗುರುತಿಸಿಕೊಂಡಿರುವ ಮೇಘನಾ , ಡಿ ಬಾಸ್ ಜೊತೆ ನಾನು ಸಿನಿಮಾ ಮಾಡಬೇಕು ಎಂದಿದ್ದಾರೆ.

‘ ನನ್ನದೊಂದು ಆಸೆ ಇದೆ, ಅದು ದರ್ಶನ್ ಸರ್ ಜೊತೆ ಸಿನಿಮಾವೊಂದರಲ್ಲಿ ನಟಿಸಿ ತೆರೆಮೇಲೆ ನೋಡಿ ಖುಷಿ ಪಡಬೇಕು ..ಅಲ್ಲಿಯವರೆಗೂ ನಾನು ಲೈಫಲ್ಲಿ ಸೆಟ್ಲ್ ಆಗೋಲ್ಲ ” ಹೀಗೆ ಹೇಳಿಕೊಂಡಿದ್ದಾರೆ ಮೇಘನಾ. ಇದು ಮೇಘನಾಳ ಲೈಫ್ ಟೈಮ್ ಆಸೆ.

ಇನ್ನು ನಟಿ ಮೇಘನಾ ಅವರ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ.. ‘ಅಲ್ಪವಿರಾಮ” ಒಂದು ಚೂರು ಕೆಲಸ ಬಾಕಿ ಇದೆ ಸಿನಿಮಾಗಳಲ್ಲಿ ಈಕೆ ನಾಯಕಿ ನಟಿಯಾಗಿ ನಟಿಸುತ್ತಿದ್ದಾರೆ.

Advertisement

ಲಾಕ್ ಡೌನಿಂದಾಗಿ ಈ ಎಲ್ಲಾ ಸಿನಿಮಾಗಳ ಶೂಟಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಲಾಕ್ ಡೌನ್ ತೆರವು ಆದ ಬಳಿಕ ಮತ್ತೆ ಶೂಟಿಂಗ್ ನಲ್ಲಿ ಬ್ಯುಸಿಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next