Advertisement

ಈಗ ತುಂಬ ಹರ್ಷಿಕಾ

06:10 AM Nov 05, 2017 | Harsha Rao |

ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶನದ ರೇ ಚಿತ್ರದ ನಂತರ ಹರ್ಷಿಕಾ ಪೂಣಚ್ಚ ಅವರನ್ನು ತೆರೆಯ ಮೇಲೆ ನೋಡಿದ್ದು ಕಡಿಮೆ ಎಂದರೆ ತಪ್ಪಿಲ್ಲ. ಈ ಸಮಯದಲ್ಲಿ ಅವರು ಚಿಟ್ಟೆ ಮತ್ತು ಉಪೇಂದ್ರ ಮತ್ತೆ ಬಾ ಚಿತ್ರಗಳಲ್ಲಿ ನಟಿಸಿದರಾದರೂ, ಅವಿನ್ನೂ ಬಿಡುಗಡೆಯಾಗಿಲ್ಲ. ಅವೆರಡೂ ಚಿತ್ರಗಳ ಬಿಡುಗಡೆಗೆ ಕಾಯುತ್ತಿರುವ ಹರ್ಷಿಕಾ, ಇದೀಗ ಸದ್ದಿಲ್ಲದೆ ತಮಿಳು ಮತ್ತು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

Advertisement

ಹೌದು, ಮಲಯಾಳ ಮತ್ತು ತಮಿಳಿನ ತಲಾ ಒಂದೊಂದು ಚಿತ್ರಗಳಲ್ಲಿ ಹರ್ಷಿಕಾ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಪೈಕಿ ಮೊದಲಿಗೆ ಮಲಯಾಳ ಚಿತ್ರ ಶುರುವಾಗುತ್ತದಂತೆ. ಈ ಚಿತ್ರಕ್ಕೆ  ಚಾರ್‌ಮಿನಾರ್‌ ಎಂಬ ಹೆಸರನ್ನು ಇಡಲಾಗಿದ್ದು, ಅಜಿತ್‌ ಎನ್ನುವವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ತಮಿಳಿನಲ್ಲಿ ಹಲವು ಚಿತ್ರಗಳಲ್ಲಿ ವಿಲನ್‌ ಆಗಿ ನಟಿಸಿರುವ ಅಶ್ವಿ‌ನ್‌ ಕುಮಾರ್‌, ಈ ಚಿತ್ರದ ಹೀರೋ. ಮಲಯಾಳ ಚಿತ್ರದಲ್ಲಿ ತಮಿಳು ನಟನ ಜೊತೆಗೆ ಪರದೆ ಹಂಚಿಕೊಳ್ಳುತ್ತಿರುವ ಹರ್ಷಿಕಾ, ತಮಿಳಿನಲ್ಲಿ ಮಲಯಾಳ ನಟರೊಬ್ಬರ ಜೊತೆಗೆ ನಟಿಸುತ್ತಿರುವುದು ವಿಶೇಷ. ಮಲಯಾಳದ ಜನಪ್ರಿಯ ನಟ ದುಲ್ಕರ್‌ ಸಲ್ಮಾನ್‌ರ ಕಸಿನ್‌ ಆಗಿರುವ ಮಕೂºಲ್‌ ಸಲ್ಮಾನ್‌ ಅಭಿನಯದ ತಮಿಳು ಚಿತ್ರವಾದ ಉನ್‌ ಕಾದಲ್‌ ಇರಂದಾಲ್‌ ನಲ್ಲಿ ಹರ್ಷಿಕಾ ನಟಿಸುತ್ತಿದ್ದಾರಂತೆ.

ಇದಕ್ಕೂ ಮುನ್ನ ಒಂದೆರೆಡು ತೆಲುಗು ಚಿತ್ರಗಳಲ್ಲಿ ನಟಿಸಿದ ಅನುಭವವಿದ್ದ ಹರ್ಷಿಕಾಗೆ ಈಗ ಒಂದು ತಮಿಳು ಮತ್ತು ಒಂದು ಮಲಯಾಳಂ ಚಿತ್ರವೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಈ ಅವಕಾಶದಿಂದ ಸಾಕಷ್ಟು ಖುಷಿಯಾಗಿರುವ ಅವರು, ಎರಡೂ ಚಿತ್ರಗಳಲ್ಲಿ ನಟಿಸುವುದಕ್ಕೆ ಎದುರು ನೋಡುತ್ತಿದ್ದಾರೆ.

ಎಲ್ಲಾ ಸರಿ ಅವರ್ಯಾಕೆ ಯಾವೊಂದು ಕನ್ನಡ ಚಿತ್ರದಲ್ಲೂ ನಟಿಸುತ್ತಿಲ್ಲ ಎಂಬ ಪ್ರಶ್ನೆ ಸಹಜ. ಹರ್ಷಿಕಾ ನಟಿಸುವುದಕ್ಕೇನೋ ರೆಡಿ. ಆದರೆ, ಕೆಲವು ಆರೋಪಗಳನ್ನು ಕೇಳಿಕೇಳಿ ಸಾಕಾಗಿ ಹೋಗಿದೆಯಂತೆ. ಪ್ರಮುಖವಾಗಿ ಹರ್ಷಿಕಾ ಸಿಕ್ಕಾಪಟ್ಟೆ ಸಂಭಾವನೆ ಕೇಳುತ್ತಾರೆ, ಅವರು ತುಂಬಾ ಚೂÂಸಿಯಾಗಿದ್ದಾರೆ, ಅವರ ಡಿಮ್ಯಾಂಡ್‌ಗಳು ಸಾಕಷ್ಟಿವೆ … ಹೀಗೆ ಹಲವು ಆರೋಪಗಳನ್ನು ತಮ್ಮ ಬಗ್ಗೆಯೇ ತಾವು ಕೇಳಿದ್ದಾರೆ ಹರ್ಷಿಕಾ. ಅಷ್ಟೇ ಅಲ್ಲ, ಅವಕಾಶ ಕೊಡುವುದಕ್ಕೆ ಇಷ್ಟವಿಲ್ಲದಿರುವವರು, ತಮ್ಮ ಮೇಲೆ ಮಾಡುತ್ತಿರುವ ವ್ಯವಸ್ಥಿತ ಪ್ರಚಾರ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಅದೇ ಕಾರಣಕ್ಕೆ ಅವರು ಸುಮ್ಮನಾಗಿಬಿಟ್ಟಿದ್ದಾರೆ. ಹುಡುಕಿ ಬಂದ ಅವಕಾಶಗಳನ್ನು ಒಪ್ಪಬೇಕೆಂದು ತೀರ್ಮಾನಿಸಿ, ಅದಕ್ಕಾಗಿ ಕಾಯುತ್ತಿದ್ದಾರೆ. ಹಾಗೆ ಬಂದ ಅವಕಾಶಗಳೇ ಚಾರ್‌ಮಿನಾರ್‌ ಮತ್ತು ಉನ್‌ ಕಾದಲ್‌ ಇರಂದಾಲ್‌.

ಇನ್ನು ತಾನು ನಟಿಸಿರುವ ಚಿಟ್ಟೆ ಚಿತ್ರದ ಬಗ್ಗೆ ಅವರು ಸಾಕಷ್ಟು ನಂಬಿಕೆ ಇಟ್ಟಿದ್ದಾರೆ. ಅದಕ್ಕೆ ಕಾರಣ ಎಂ. ಎಲ್‌. ಪ್ರಸನ್ನ ಅವರ ನಿರ್ದೇಶನ ಮತ್ತು ತಮ್ಮ ಪಾತ್ರ. “ನನ್ನ ರೋಲ್‌ ಇಲ್ಲಿ ಚಿಟ್ಟೆ ತರಹವೇ ಅಂದರೆ ತಪ್ಪಿಲ್ಲ. ಚಿಟ್ಟೆ ಹೇಗೆ ಒಂದು ಕಡೆ ಕೂರುವುದಿಲ್ಲವೋ, ನಾನು ಸಹ ಅದೇ ತರಹ. ಒಂದು ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಕಷ್ಟಪಡುತ್ತಿರುತ್ತೀನಿ. ನನ್ನ ಪಾತ್ರ ಬಬ್ಲಿ ಎನ್ನುವುದಕ್ಕಿಂತ ಲೈವಿÉ ಎನ್ನುವುದು ಹೆಚ್ಚು ಸೂಕ್ತ. ಈ ಚಿತ್ರ ನನಗೆ ಸಿಕ್ಕಿದ್ದೇ ನನಗೆ ಬಹಳ ಅದೃಷ್ಟ ಎಂದರೆ ತಪ್ಪಿಲ್ಲ. ಚಿತ್ರದ ಮುಹೂರ್ತವಾದಾಗ ನಾನಿರಲಿಲ್ಲ. ಏಕೆಂದರೆ, ನಾನಾಗ ಚಿತ್ರದ ನಾಯಕಿಯಾಗಿರಲಿಲ್ಲ. ಚಿತ್ರದ ಚಿತ್ರೀಕರಣ ಶುರುವಾದಾಗ ನಾನು ನಾಯಕಿಯಾಗಿದ್ದೆ’ ಎನ್ನುತ್ತಾರೆ ಹರ್ಷಿಕಾ.

Advertisement
Advertisement

Udayavani is now on Telegram. Click here to join our channel and stay updated with the latest news.

Next