Advertisement

ಆತಂಕ ಮೂಡಿಸಿದ ಜಯಶ್ರೀ ಫೇಸ್ಬುಕ್ ಪೋಸ್ಟ್‌

02:56 AM Jul 23, 2020 | Hari Prasad |

ಬೆಂಗಳೂರು: ನಟಿ ಹಾಗೂ ಬಿಗ್‌ಬಾಸ್‌-3 ಸ್ಪರ್ಧಿ ಜಯಶ್ರೀ ರಾಮಯ್ಯ ಅವರು ಆತ್ಮಹತ್ಯೆ ಮಾಡಿಕೊಳ್ಳುವ ರೀತಿಯಲ್ಲಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, ಸಂಬಂಧಿಕರು ಮತ್ತು ಸ್ನೇಹಿತರಲ್ಲಿ ಆತಂಕ ಮೂಡಿಸಿತ್ತು.

Advertisement

ಜಯಶ್ರೀ ಖಿನ್ನತೆಗೆ ಒಳಗಾಗಿದ್ದ ಕಾರಣ ಮಂಗಳವಾರ ರಾತ್ರಿ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ತಡರಾತ್ರಿ ಪರಿಚಯಸ್ಥರು ಆಸ್ಪತ್ರೆಗೆ ಬಂದು ಅವರ ಜತೆ ಜಗಳವಾಡಿದ್ದರು ಎನ್ನಲಾಗಿದೆ.

ಅದರಿಂದ ಬೇಸರಗೊಂಡ ಅವರು ಬುಧವಾರ ಬೆಳಗ್ಗೆ ಫೇಸ್‌ಬುಕ್‌ನಲ್ಲಿ ‘ಐ ಕ್ವಿಟ್‌, ಗುಡ್‌ ಬೈ’ ಎಂದು ಪೋಸ್ಟ್‌ ಮಾಡಿದ್ದರು.

ಅದನ್ನು ಕಂಡ ಕೆಲವರು ಕರೆ ಮಾಡಿದರೂ ಆಕೆ ಸ್ವೀಕರಿಸಿಲ್ಲ. ಬಳಿಕ ಪುಟ್ಟೇನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಪೊಲೀಸರು ಆಕೆ ಇರುವ ಸ್ಥಳವನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ಧಾವಿಸಿ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳದಂತೆ ಮನವಿ ಮಾಡಿದ್ದಾರೆ. ಆದರೆ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪೊಲೀಸರು ಹೇಳಿದರು.

Advertisement

ಪೋಸ್ಟ್‌ ಡಿಲೀಟ್: ಸ್ನೇಹಿತರು, ಸಂಬಂಧಿಕರು ಫೋನ್‌ ಕರೆ ಮಾಡುತ್ತಿದ್ದಂತೆ ಜಯಶ್ರೀ ತನ್ನ ಪೋಸ್ಟ್‌ ಡಿಲೀಟ್‌ ಮಾಡಿದ್ದಾರೆ. ಬಳಿಕ ತಾನು ಸುರಕ್ಷಿತವಾಗಿದ್ದೇನೆ ಎಂದು ಮತ್ತೊಂದು ಪೋಸ್ಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next