ಬೆಂಗಳೂರು : ಸ್ಯಾಂಡಲ್ವುಡ್ ನಟಿ ಆಶಿಕಾ ರಂಗನಾಥ್ ತಮ್ಮ ತೋಟದ ಮನೆಯಲ್ಲಿ ಕುಟುಂಬಸ್ಥರು ಹಾಗೂ ಇನ್ನು ಅನೇಕರ ಜೊತೆ ಸಮಯ ಕಳೆಯುತ್ತಿದ್ದಾರೆ. ಮಾವು, ಸೀತಾಫಲ ಹಣ್ಣನ್ನ ಕಿತ್ತು ಬುಟ್ಟಿಯಲ್ಲಿ ಹಾಕಿಕೊಂಡಿದ್ದಾರೆ.
ಕೋವಿಡ್ ಲಾಕ್ಡೌನ್ ನಿಂದಾಗಿ ಸಿನಿಮಾ ಶೂಟಿಂಗ್ ಎಲ್ಲಾ ಬಂದ್ ಆಗಿವೆ. ಬಿಡುವಿನ ಸಮಯದಲ್ಲಿ ನಟ-ನಟಿಯರೆಲ್ಲಾ ಮನೆಯಲ್ಲೆ ವಿವಿಧ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಆಶಿಕಾ ರಂಗನಾಥ್ ತರಕಾರಿಯನ್ನು ಕೀಳುವ ಕಾರ್ಯದಲ್ಲಿ ಮುಳುಗಿದ್ದಾರೆ. ಬೆಂಡೆ ಕಾಯಿ ಕೀಳುತ್ತಿರುವ ಆಶಿಕಾ, ಫುಲ್ ತೋಟದಲ್ಲೆಲ್ಲಾ ಓಡಾಡಿದ್ದಾರೆ.
ಇನ್ನು ಆಶಿಕಾ ರಂಗನಾಥ್ ಸದ್ಯ ಅವತಾರ್ ಪುರುಷ ಸಿನಿಮಾ ಹಾಗೂ ಸೀಕ್ವೇನ್ಸ್ ಕೂಡ ಮುಗಿಸಿದ್ದಾರೆ. ಕೋಟಿಗೊಬ್ಬ 3 ರಿಲೀಸ್ ಗೆ ರೆಡಿ ಇದೆ.
ಜೊತೆಗೆ ಇನ್ನು ಒಂದೆರಡು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರೆ. ಲಾಕ್ಡೌನ್ ಇರುವ ಕಾರಣ ಎಲ್ಲವೂ ಬಂದ್ ಆಗಿದ್ದು, ತೋಟದ ಮನೆಯಲ್ಲೇ ದಿನದೂಡುತ್ತಿದ್ದಾರೆ.