Advertisement

ಕನ್ನಡ ಕಾರ್ಯಕರ್ತ ನರಸಿಂಹಮೂರ್ತಿ ಇನ್ನಿಲ್ಲ

12:02 PM Oct 20, 2017 | |

ಬೆಂಗಳೂರು: ಕನ್ನಡ ಪರ ಹೋರಾಟಗಾರ ಮತ್ತು ಕಾರ್ಯಕರ್ತ ಕೆ.ಎಚ್‌.ನರಸಿಂಹಮೂರ್ತಿ (72) ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ಅವರನ್ನು ಚಾಮರಾಜಪೇಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಪುತ್ರ, ಪುತ್ರಿ ಇದ್ದಾರೆ. 

Advertisement

ಕನ್ನಡ ಚಳವಳಿಯ ಕಟ್ಟಾಳುಗಳಾಗಿದ್ದ ಜೆ.ಪಿ.ರಾಜರತ್ನಂ., ಅ.ನ.ಕೃ ಮತ್ತು ಮ.ರಾಮಮೂರ್ತಿ ಅವರಿಂದ ಪ್ರಭಾವಿತರಾಗಿದ್ದ ನರಸಿಂಹಮೂರ್ತಿಗಳು, ಕನ್ನಡಪರ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್‌ನ ನಗರ ಜಿಲ್ಲಾ ವಿಭಾಗದ ಕಾರ್ಯದರ್ಶಿಯಾಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

“ಸಾಹಿತ್ಯ ಮಲ್ಲ ತ.ರಾ.ಸು’, “ತಾಯಿನಾಡು ಪಿ.ರಾಮಯ್ಯ’, “ಆಲೂರು ವೆಂಕಟರಾಯರು’, “ಡಾ.ರಾಜ್‌ಕುಮಾರ್‌’ ಸೇರಿದಂತೆ ಪ್ರಮುಖರ ಬಗ್ಗೆ ವ್ಯಕ್ತಿ ಚಿತ್ರಣಗಳನ್ನು ಬರೆದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next