ಕಾಣಿಯೂರು: ಇಲ್ಲಿನ ಪ್ರಗತಿ ವಿದ್ಯಾ ಸಂಸ್ಥೆಯ ರಜತ ಸಂಭ್ರಮ ಕಾರ್ಯಕ್ರಮ ಡಿ. 5ರಿಂದ 9ರ ವರೆಗೆ ನಡೆಯಲಿದೆ. ಶಾಲೆಯ ಆಡಳಿತ ಸಮಿತಿ ಅಧ್ಯಕ್ಷ ಜಗನ್ನಾಥ ರೈ ಹಾಗೂ ಬೆಳ್ಳಿಹಬ್ಬ ಸಮಿತಿ ಪ್ರಧಾನ ಕಾರ್ಯದರ್ಶಿ ಸುಜಿತ್ ರೈ ಎಣ್ಮೂರು ಗುರುವಾರ ಕಾರ್ಯಕ್ರಮದ ವಿವರ ನೀಡಿ, ಬೆಳ್ಳಿಹಬ್ಬದ ಸವಿನೆನಪಿಗಾಗಿ ಸೋಲಾರ್ ಪಾರ್ಕ್, ಕಿಂಡರ್ ಪಾರ್ಕ್, ಸ್ಮಾರ್ಟ್ ಕ್ಲಾಸ್, ಇ-ಲೈಬ್ರರಿ ಯೋಜನೆಗಳನ್ನು ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂದರು. ಡಿ. 5 ಬುಧವಾರ ಪೂರ್ವಾಹ್ನ 9.30ರಿಂದ ನಗರ ಮೆರವಣಿಗೆ ಹಾಗೂ ಶಾಶ್ವತ ಯೋಜನೆಗಳ ಉದ್ಘಾಟನೆ ನೆರವೇರಲಿದೆ. ಕಾಣಿಯೂರು ಗ್ರಾ.ಪಂ. ಅಧ್ಯಕ್ಷೆ ಸೀತಮ್ಮ ಖಂಡಿಗ ಕಾಣಿಯೂರು ಸರಕಾರಿ ಪದವಿಪೂರ್ವ ಕಾಲೇಜಿನ ಬಳಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬೆಳಂದೂರು ಗ್ರಾ.ಪಂ. ಅಧ್ಯಕ್ಷೆ ಉಮೇಶ್ವರಿ ಅಗಳಿ ಧ್ವಜಾರೋಹಣ ಮಾಡುವರು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆ ವಹಿಸಲಿದ್ದು, ಪುತ್ತೂರು ಶಾಸಕ ಸಂಜೀವ ಮಠಂದೂರು ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಸಂಸದ ನಳಿನ್ ಕುಮಾರ್ ಕಟೀಲು ಕಿಂಡರ್ ಪಾರ್ಕ್, ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಸ್ಮಾರ್ಟ್ ಕ್ಲಾಸ್, ಪುತ್ತೂರು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಸೋಲಾರ್ ಪಾರ್ಕ್ ಉದ್ಘಾಟಿಸಲಿದ್ದಾರೆ ಎಂದು ವಿವರಿಸಿದರು. ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ ಕೆ. ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವರು. ಬೆಳಂದೂರು ಕ್ಷೇತ್ರದ ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ್ ವಸ್ತುಸಂಗ್ರಹ ಉದ್ಘಾಟಿಸುವರು. ತಾ.ಪಂ. ಸದಸ್ಯೆ ಲಲಿತಾ ಈಶ್ವರ್ ಸ್ಟಾಲ್‌ಗಳನ್ನು ಉದ್ಘಾಟಿಸುವರು. ಸಾ.ಶಿ. ಇಲಾಖೆ ಉಪನಿರ್ದೇಶಕ ವೈ. ಶಿವರಾಮಯ್ಯ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಪಾಲ್ಗೊಳ್ಳುವರು.
ಅಪರಾಹ್ನ ಗಂಟೆ 2ರಿಂದ ವಿದುಷಿ ಪಾರ್ವತಿ ಗಣೇಶ್ ಭಟ್ ಹೊಸಮೂಲೆ ಅವರಿಂದ ಸಂಗೀತ, ಸಂಜೆ 6ರಿಂದ ಕ್ರೀಡಾ ಕ್ಷೇತ್ರದ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ. ಬಳಿಕ “ದಾದಂದ್ ಪನೋಡು’ ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಡಿ. 6ರಂದು ಅಪರಾಹ್ನ ವಿದುಷಿ ಸ್ವಸ್ತಿಕಾ ಆರ್. ಶೆಟ್ಟಿ ಕುದ್ಕಾಡಿ ನಿರ್ದೇಶನದಲ್ಲಿ ಭರತನಾಟ್ಯವಿದೆ. ಸಂಜೆ 6 ಗಂಟೆಗೆ ಯೋಧ ನಮನವಿದ್ದು, ಶಿವಪ್ರಸಾದ್ ಪುಂಡಿಕೈ ಪ್ರತ್ಯಕ್ಷ ವರ್ಣಚಿತ್ರ ರಚನೆ ಮಾಡಲಿದ್ದಾರೆ. ಬಳಿಕ ಡಾ| ಶಶಿಧರ ಕೋಟೆ ತಂಡದಿಂದ ಸಂಗೀತ, ಶಾಲೆ ಮಕ್ಕಳಿಂದ ಯಕ್ಷಗಾನ ನೃತ್ಯರೂಪಕವಿದೆ ಎಂದರು.
ಡಿ. 7ರಂದು ಸಂಜೆ ಸಾಧಕರಿಗೆ ಅಭಿನಂದನೆ, ಕಲಾ ಉತ್ಥಾನ ಕಾರ್ಯಕ್ರಮ ನಡೆಯಲಿದೆ. ಸುಳ್ಯ ಶಾಸಕ ಎಸ್. ಅಂಗಾರ ಸಭಾಧ್ಯಕ್ಷತೆ ವಹಿಸಲಿದ್ದು, ಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ, ಸಂಗೀತ ನಿರ್ದೇಶಕ ಗುರುಕಿರಣ್, ಡಾ| ಪುರುಷೋತ್ತಮ ಬಿಳಿಮಲೆ ಪಾಲ್ಗೊಳ್ಳುವರು. ಯಕ್ಷಗಾನ ಭಾಗವತ ಪಟ್ಲ ಸತೀಶ ಶೆಟ್ಟಿ, ಕಲಾವಿದೆ ಬಿಂದಿಯಾ ಶೆಟ್ಟಿ ಸುರತ್ಕಲ್ ಅವರನ್ನು ಅಭಿನಂದಿಸಲಾಗುವುದ. ಬಳಿಕ ಪಟ್ಲ ಸತೀಶ್ ಶೆಟ್ಟಿ, ಭವ್ಯಾ ಮಂಡೆಕೋಲು, ಅಮೃತಾ ಅಡಿಗ ಭಾಗವತಿಕೆಯಲ್ಲಿ ಯಕ್ಷ ನೃತ್ಯ ವೈಭವ ನಡೆಯಲಿದೆ ಎಂದರು.
ಡಿ. 8ರಂದು ಸಂಜೆ ಮಾತೃವಂದನ ಕಾರ್ಯಕ್ರಮದಲ್ಲಿ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬಳಿಕ ನಿಕ್R ಗೊತ್ತುಂಡಾ? ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಡಿ. 9ರಂದು ಸಮ್ಮಾನ ಕಾರ್ಯಕ್ರಮ ಸಂಸದೆ ಶೋಭಾ ಕರಂದ್ಲಾಜೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಪಾಲ್ಗೊಳ್ಳುವರು. ಸಂಜೆ 6 ಗಂಟೆಗೆ ರೈತ ಅಭಿನಂದನ ಕಾರ್ಯಕ್ರಮವಿದೆ ಎಂದು ವಿವರಿಸಿದರು.
ಮುಖ್ಯ ಶಿಕ್ಷಕ ಗಿರಿಶಂಕರ್ ಸುಲಾಯ, ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಆಡಳಿತ ಸಮಿತಿ ಉಪಾಧ್ಯಕ್ಷ ವಿಶ್ವನಾಥ ರೈ ಮಾದೋಡಿ, ರಕ್ಷಕ – ಶಿಕ್ಷಕ ಸಂಘದ ಸ್ಥಾಪಕಾಧ್ಯಕ್ಷ ಪದ್ಮನಾಭ ರೈ ಎಂಜೀರು, ಆಡಳಿತ ಸಮಿತಿ ಕೋಶಾಧಿಕಾರಿ ಉದಯ ರೈ ಮಾದೋಡಿ, ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ರಮೇಶ್ ಬೆಟ್ಟ, ಸಂಸ್ಥೆಯ ಬೆಳ್ಳಿಹಬ್ಬ ಸಮಿತಿ ಕೋಶಾಧಿಕಾರಿಯಾದ ಜನಾರ್ದನ ಆಚಾರ್ಯ ಕಾಣಿಯೂರು, ಕನ್ನಡ ಮಾಧ್ಯಮ ಮುಖ್ಯ ಶಿಕ್ಷಕಿ ಸರಸ್ವತಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸುನೀಲ್ ಕುಮಾರ್ ಅವರು ಉಪಸ್ಥಿತರಿದ್ದರು.