Advertisement

Update: ಕಾಣಿಯೂರು- ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರು ಪತ್ತೆ!: ಇಬ್ಬರು ನಾಪತ್ತೆ

02:20 PM Jul 10, 2022 | Team Udayavani |

ಪುತ್ತೂರು: ಮಂಜೇಶ್ವರ-ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದು ನೀರು ಪಾಲಾಗಿದ್ದು, ಭಾನುವಾರ ಕಾರು ಪತ್ತೆಯಾಗಿದೆ.

Advertisement

ಬೈತಡ್ಕ ಮಸೀದಿಯ ಸಮೀಪವೇ ಇರುವ ಸೇತುವೆಗೆ  ಕಾರೊಂದು  ಢಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಬಿದ್ದಿದೆ. ಈ ಕುರಿತು ಬೈತಡ್ಕ ಮಸೀದಿಯ ಸಿಸಿ ಕೆಮರಾದಲ್ಲಿ ದೃಶ್ಯ ಸೆರೆಯಾಗಿದ್ದು, ಇದನ್ನು ಆಧರಿಸಿ, ಸ್ಥಳೀಯ ಪೊಲೀಸರು, ಸ್ಥಳೀಯ ಸಾರ್ವಜನಿಕರು, ಅಗ್ನಿಶಾಮಕ ದಳ ಮತ್ತು ಸವಣೂರಿನ ನಾಲ್ವರು ಡೈವರ್‌ಗಳಿಂದ ಶೋಧ ಕಾರ್ಯ ನಡೆಸಿ, ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾರನ್ನು ಟ್ರೇಸ್ ಮಾಡಿ 12.30ಕ್ಕೆ ಹೊರ ತೆಗೆಯಲಾಗಿದೆ.

ಇದನ್ನೂ ಓದಿ: ಕಾಣಿಯೂರು: ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರು ಪತ್ತೆ!; ಕಾರ್ಯಾಚರಣೆ ವೇಳೆ ಲಾಠಿಚಾರ್ಜ್

ವಿಚಾರಣೆ ವೇಳೆ ಕಾರು ಕುಂಡಡ್ಕ ನಿವಾಸಿ ಧನುಷ್ (26) ಅವರದ್ದು ಎಂದು ತಿಳಿದುಬಂದಿದೆ. ಇನ್ನೋರ್ವ ಸಹ ಪ್ರಯಾಣಿಕ ಮಂಜೇಶ್ವರದ  ನಿವಾಸಿ ಧನುಷ್ (21), ಕಾರು ಚಲಾಯಿಸುತ್ತಿದ್ದ ಧನುಷ್ ಅವರ ಸೋದರ ಮಾವ ಕಾರಿನಲ್ಲಿದ್ದರು ಎಂದು ತಿಳಿದು ಬಂದಿದೆ.  ನಾಪತ್ತೆಯಾದವರನ್ನು ಪತ್ತೆಹಚ್ಚಲು ಶೋಧ ಕಾರ್ಯ ನಡೆಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next