ಕುಂಬಳೆ: ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದ ವಾರ್ಷಿಕ ಜಾತ್ರೆಯ ನಾಲ್ಕನೇ ದಿನವಾದ ಜ. 17 ರಂದು ಬೆಳಗ್ಗೆ ಉತ್ಸವ ಶ್ರೀಭೂತಬಲಿ, ಭಜನೆ, ತುಲಾಭಾರ ಸೇವೆ, ಅಪರಾಹ್ನ ಮಹಾಪೂಜೆಯ ಬಳಿಕ ಮಡ್ವ ಚಂದ್ರಹಾಸ ಭಂಡಾರಿ ಮತ್ತು ಮನೆಯವರ ಹಾಗೂ ಕುಂಡಾಪು ಮೋಹನ ಶೆಟ್ಟಿ ಮುಂಬಯಿ ಇವರಿಂದ ಅನ್ನಸಂತರ್ಪಣೆ ನಡೆಯಿತು.
ಸಂಜೆ ನಡೆ ತೆರೆದ ಬಳಿಕ ತಾಯಂಬಕ, ದೀಪಾರಾಧನೆ, ರಾತ್ರಿ ಶ್ರೀಬಲಿ ಉತ್ಸವ, ವಿಶೇಷ ಬೆಡಿ ಪ್ರದರ್ಶನ, ಶಯನ, ಕವಾಟ ಬಂಧನ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ನಾಟ್ಯವಿದ್ಯಾಲಯದ ವಿದುಷಿ ವಿದ್ಯಾಲಕ್ಷ್ಮಿ ಕುಂಬಳೆ ಅವರ ಶಿಷ್ಯ ವೃಂದದಿಂದ ನೃತ್ಯ ಸಂಭ್ರಮ ರಂಜಿಸಿತು.
ಜ. 18ರಂದು ಬೆಳಗ್ಗೆ 6ರಿಂದ ಕವಾ ಟೋದ್ಘಾಟನೆ, 9.30ರಿಂದ ಭಜನೆ, 10.30ರಿಂದ ತುಲಾಭಾರ ಸೇವೆ, 12.30 ಕ್ಕೆ ಮಹಾಪೂಜೆ, ಸಂಜೆ 4.30 ರಿಂದ ಯಕ್ಷಗಾನ ವೈಭವ, ರಾತ್ರಿ 8.30 ರಿಂದ ಉತ್ಸವ ಬಲಿ, ಘೋಷಯಾತ್ರೆ,ಶೇಡಿಗುಮ್ಮೆಯಲ್ಲಿ ಅವಭೃಥ ಸ್ನಾನ, 10 ರಿಂದ ಶ್ರೀದೇವಿ ಮಹಾತೆ¾ ಯಕ್ಷಗಾನ ಬಯ ಲಾಟ, ರಾತ್ರಿ 12.30ರಿಂದ ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವತರಣ ನಡೆಯಲಿದೆ.
ಜ. 19ರಂದು ಬೆಳಗ್ಗೆ 10ರಿಂದ ಪಂಚಾಮೃತ ಮತ್ತು ಎಳನೀರು ಅಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ, ಶ್ರೀಬಲಿ, ಅನ್ನದಾನ, ಸಂಜೆ 6.30 ಕ್ಕೆ ದೀಪಾರಾಧನೆ, 7ರಿಂದ ಭಜನೆ, ರಾತ್ರಿ 8ರಿಂದ ಮಹಾಪೂಜೆ, ಶ್ರೀಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.