ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಬಳಿಯ ಜುಮಾ ಮಸೀದಿ ಕಟ್ಟಡದಲ್ಲಿ, ಡಾ| ಅಜಯ್ ಜಿ.ಎಸ್. ಮತ್ತು ಮನೋ ವೈದ್ಯೆ ಡಾ| ಸ್ವಾತಿ ಅಜಯ್ ಅವರ ಕಾಂಚನ ಆಯುರ್ವೇದ ಕ್ಲಿನಿಕ್ ಮತ್ತು ಮೆಡಿಕಲ್ಸ್ ಜು. 12ರಂದು ಆರಂಭಗೊಂಡಿತು.
ನೂತನ ಸಂಸ್ಥೆಯನ್ನು ಉದ್ಘಾಟಿಸಿದ ಉಪ್ಪಿನಂಗಡಿಯ ಹಿರಿಯ ವೈದ್ಯ ರಾಮಚಂದ್ರ ಭಟ್ ಅವರು, ವೈದ್ಯಕೀಯ ಕ್ಷೇತ್ರಕ್ಕೆ ಸಮಾಜದಲ್ಲಿ ಇರುವ ಘನತೆ ಗೌರವವನ್ನು ಉಳಿಸಿ ಬೆಳೆಸುವಲ್ಲಿ ಈ ವೈದ್ಯಾಲಯದ ಯುವ ವೈದ್ಯರಿಂದ ಉತ್ತಮ ಕಾರ್ಯಗಳಾಗಲಿ ಎಂದರು.
ಉಪ್ಪಿನಂಗಡಿ ಕೆ.ಜಿ. ಭಟ್ ಆಸ್ಪತ್ರೆಯ ಡಾ| ಕೆ.ಜಿ. ಭಟ್ ಮಾತನಾಡಿ, ವೈದ್ಯಕೀಯ ಕ್ಷೇತ್ರವೆಂದರೆ ಅದು ದಿನದ 24 ಗಂಟೆಯೂ ಸೇವೆಗೆ ಸಿದ್ಧವಾಗಿರುವ ಕ್ಷೇತ್ರವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಮಾಣಿಕತೆ, ಕಠಿನ ಪರಿಶ್ರಮದ ಜತೆಗೆ ಸೇವಾ ಮನೋಭಾವ ಮಿಳಿತಗೊಂಡರೆ ಸಮಾಜಕ್ಕೆ ಸಂಪತ್ತಾಗಿ ರೂಪುಗೊಳ್ಳಬಹುದೆಂದು ತಿಳಿಸಿದರು.
ಉಪ್ಪಿನಂಗಡಿ ಧೀನರ ಕನ್ಯಾ ಮಾತೆ ದೇವಾಲಯದ ಧರ್ಮಗುರು ರೊನಾಲ್ಡ್ ಪಿಂಟೋ ಮಾತನಾಡಿ, ಚಿಕಿತ್ಸಾಲಯ ಎಂದರೆ ಶ್ರೇಷ್ಠ ವಾದ ಸೇವಾ ಕಾರ್ಯಾಲಯ. ಉಪ್ಪಿನಂಗಡಿಯಲ್ಲಿ ಮೊಟ್ಟಮೊದಲಾಗಿ ಮನೋ ವಿಭಾಗದ ವೈದ್ಯಕೀಯ ಸೇವೆ ಈ ಚಿಕಿತ್ಸಾಲಯದಲ್ಲಿ ದೊರಕುತ್ತಿರುವುದು ಈ ಭಾಗದ ಜನತೆಗೆ ದೊರಕಿದ ಹೆಚ್ಚುವರಿ ಸೌಲಭ್ಯವಾಗಿದೆ ಎಂದು ತಿಳಿಸಿದರು.
ಡಾ| ಅಜಯ್ ಜಿ.ಎಸ್. ಅವರ ತಾಯಿ ಪ್ರೇಮಲತಾ ಕಾಂಚನ ಮತ್ತು ಡಾ| ಸ್ವಾತಿ ಅಜಯ್‌ಯವರ ತಾಯಿ ಶಾಂತಿ ವಿ. ಹೆಗಡೆ ದೀಪ ಪ್ರಜ್ವಲನೆಗೈದರು.ಸಮಾರಂಭದಲ್ಲಿ ರಾಮಕುಂಜ ವಿದ್ಯಾವರ್ದಕ ಸಭಾ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ಡಾ| ಸುಪ್ರಿತ್ ಲೋಬೋ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾದ ಅಜೀಜ್ ಬಸ್ತಿಕ್ಕಾರ್, ಇಸ್ಮಾಯಿಲ್ ಇಕ್ಬಾಲ್, ಅಬೂಬಕ್ಕರ್ ಪುತ್ತು, ಓಸ್ವಾಲ್ಡ್ ಪಿಂಟೋ, ಹರೀಶ್ ನಾಯಕ್, ನಮ್ಮೂರು -ನಮ್ಮವರು ಸಂಸ್ಥೆಯ ಜತೀಂದ್ರ ಶೆಟ್ಟಿ, ಶ್ರೀ ರಾಮ ಶಾಲಾ ಸಂಚಾಲಕ ಯು.ಜಿ. ರಾಧಾ, ಕೈಲಾರ್ ರಾಜ್‌ಗೊàಪಾಲ್, ನಿವೃತ್ತ ಶಿಕ್ಷಕ ರವೀಂದ್ರ ಟಿ., ಸುಬ್ಬಣ್ಣ ಭಟ್, ಉದ್ಯಮಿಗಳಾದ ಸುಧಾಕರ ಶೆಟ್ಟಿ, ರಘುರಾಮ ಉಪ್ಪಂಗಳ, ಕೃಷ್ಣರಾಜ್, ರಾಮಪ್ರಸಾದ್, ಶಶಿಧರ್ ರೈ, ಹೇರಂಭ ಶಾಸ್ತ್ರಿ, ಕೆ.ಡಿ.ಪಿ. ಸದಸ್ಯ ಅಶ್ರಫ್ ಬಸ್ತಿಕ್ಕಾರ್, ಪುಷ್ಪರಾಜ್ ಶೆಟ್ಟಿ, ಹನೀಫ್ ಕೆನರಾ, ಶಿವಪ್ರಸಾದ್, ಪ್ರವೀಣ್ ಗಾಣದಮೂಲೆ, ವಕೀಲ ಅರವಿಂದ ಭಂಡಾರಿ, ಯು. ರಾಮ, ಶ್ರೀಪತಿ ಕೆ, ಉದಯಕುಮಾರ್ ಕೆ., ಗಣೇಶ್ ಭಟ್, ಚಿದಾನಂದ ನಾಯಕ್, ಸದಾಶಿವ, ಮಹೇಂದ್ರ ವರ್ಮ, ಕರುಣಾಕರ ಸುವರ್ಣ, ಸುಂದರೇಶ್ ಅತ್ತಾಜೆ, ಮಾಜಿ ಸದಸ್ಯರಾದ ಧನ್ಯಕುಮಾರ್ ರೈ, ಸುಂದರ ಗೌಡ, ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಕಾರ್ಯದರ್ಶಿ ಅಬ್ದುಲ್ ಶುಕೂರ್ ಹಾಜಿ ಶುಕ್ರಿಯಾ, ಎಚ್. ಯೂಸುಫ್ ಹಾಜಿ, ಸಿ.ಎ. ಬೇಂಕ್ ಅಧ್ಯಕ್ಷ ಯಶವಂತ ಗೌಡ, ನಿವೃತ್ತ ಕಾರ್ಯನಿರ್ವಹಣಾ ಕಾರಿ ಗೋಪಾಲ ಹೆಗ್ಡೆ, ಆಲಂಕಾರು ಸಿ.ಎ. ಬ್ಯಾಂಕ್ ಅಧ್ಯಕ್ಷ ರಮೇಶ್ ಉಪ್ಪಂಗಳ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಯು.ಟಿ. ಮಹಮ್ಮದ್ ತೌಶೀಫ್, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಲಿಮಾರ ರಘುನಾಥ ರೈ, ಸದಸ್ಯರಾದ ಜಿ. ಕೃಷ್ಣ ರಾವ್ ಅರ್ತಿಲ, ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಡಾ| ರಾಜಾರಾಮ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.ವಿ.ಆರ್. ಹೆಗಡೆ ಸ್ವಾಗತಿಸಿದರು. ಶಾಂತಾರಾಮ ಕಾಂಚನ ವಂದಿಸಿದರು.