ಮುಂಬಯಿ: ತನ್ನ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಕೋರಿ ಬಾಲಿವುಡ್ ನಟಿ ಕಂಗನಾ ರಣಾವತ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಗುರುವಾರ (ಸೆಪ್ಟೆಂಬರ್ 09) ವಜಾಗೊಳಿಸಿದೆ.
ಇ
ದನ್ನೂ ಓದಿ:ಸುಮಾರು 200 ಮಂದಿ ಮೂಲ ಅಮೆರಿಕರನ್ನು ತಮ್ಮ ದೇಶಕ್ಕೆ ಕಳುಹಿಸಲು ಅನುಮತಿಸಿದ ಉಗ್ರ ಸರ್ಕಾರ.!?
ಕಳೆದ ವರ್ಷ ನವೆಂಬರ್ ನಲ್ಲಿ ಗೀತ ರಚನೆಕಾರ, ಲೇಖಕ ಜಾವೇದ್ ಅಖ್ತರ್ ಅವರು ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಕಂಗನಾ ರಣಾವತ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಬಾಂಬೆ ಹೈಕೋರ್ಟ್ ನ ಜಸ್ಟೀಸ್ ರೇವತಿ ಮೋಹಿತೆ ಡೆರೆ ಅವರು ಸೆಪ್ಟೆಂಬರ್ 1ರಂದು ಅರ್ಜಿಯ ಆದೇಶವನ್ನು ಕಾಯ್ದಿರಿಸಿದ್ದರು. ಅರ್ಜಿದಾರರ (ಕಂಗನಾ) ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ತೀರ್ಪಿನಲ್ಲಿ ತಿಳಿಸಿರುವುದಾಗಿ ವರದಿ ಹೇಳಿದೆ.
ನನ್ನ ಕಕ್ಷಿದಾರರ ವಿಚಾರಣೆಯನ್ನೇ ನಡೆಸದೇ ಪೊಲೀಸರು ಏಕಪಕ್ಷೀಯವಾಗಿ ತನಿಖೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕಂಗನಾ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ಪ್ರಕ್ರಿಯೆಯನ್ನು ರದ್ದಗೊಳಿಸಬೇಕೆಂದು ಕಂಗನಾ ಪರ ವಕೀಲ ರಿಜ್ವಾನ್ ಸಿದ್ದಿಖಿ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಪತ್ರಕರ್ತ ಅರ್ನಬ್ ಗೋಸ್ವಾಮಿ ನಡೆಸಿದ್ದ ಸಂದರ್ಶನದಲ್ಲಿ ಕಂಗನಾ ರಣಾವತ್, ಅಖ್ತರ್ ವಿರುದ್ಧ ಆಧಾರರಹಿತ ಹಾಗೂ ಮಾನಹಾನಿಕರ ಹೇಳಿಕೆಯನ್ನು ನೀಡಿರುವುದಾಗಿ ಅಖ್ತರ್ ಪರ ವಕೀಲ ಜಯ್ ಭಾರದ್ವಾಜ್ ಕೋರ್ಟ್ ಕಲಾಪದಲ್ಲಿನ ವಾದ, ಪ್ರತಿವಾದದ ವೇಳೆ ತಿಳಿಸಿದ್ದರು.