Advertisement

“ಕೂ” ಖಾತೆ ತೆರೆದ ಕಂಗನಾ ..!

04:42 PM Feb 16, 2021 | Team Udayavani |

ನವ ದೆಹಲಿ : ಬಾಲಿವುಡ್ ಮೋಹಕ ನಟಿ ಕಂಗನಾ ರನೌತ್ ಕೂ ಆ್ಯಫ್ ನಲ್ಲಿ ತಮ್ಮ ಖಾತೆ ತೆರೆದಿದ್ದಾರೆ ಎಂದು ಟ್ವೀಟರ್ ನಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಖಾತೆಯ ಲಿಂಕ್ ನ್ನು ಟ್ವೀಟರ್ ನಲ್ಲಿ ಹಂಚಿಕೊಳ್ಳುವುದರೊಂದಿಗೆ ನೀವು ಕೂಡ ಕೂ ಆ್ಯಪ್ ನಲ್ಲಿ ಖಾತೆ ತೆರೆಯಿರಿ ಎಂದು ತನ್ನ ಅಭಿಮಾನಿಗಳಿಗೆ ಹೇಳಿದ್ದಾರೆ.

Advertisement

ಓದಿ : ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ: ಧೋನಿ ದಾಖಲೆ ಸರಿಗಟ್ಟಿದ ವಿರಾಟ್

“ಇದು ನನ್ನ ಕೂ ಖಾತೆ. ನನ್ನನ್ನು ಇಲ್ಲಿ ನೀವು ಫಾಲೋ ಮಾಡಿ. ಕೂ Kanganarofficial ಮೂಲಕ ಆಸಕ್ತಿದಾಯಕ ವಿಚಾರಗಳನ್ನು ಆಲಿಸಿ. ನೀವು ಕೂ ನಲ್ಲಿ ಖಾತೆ ತೆರೆದ ನಂತರ ಇಲ್ಲಿಯೇ ಸಂದೇಶಗಳನ್ನು ಕಳುಹಿಸುವುದನ್ನು ನಾನು ಬಯಸುತ್ತೇನೆ” ಎಂದು ಅವರು ಬರೆದುಕೊಂಡಿದ್ದಾರೆ. “ಇಂಡಿಯನ್ ಮೈಕ್ರೋಬ್ಲಾಗಿಂಗ್ ನಲ್ಲಿ ಅವರ ಬಯೋಡಾಟ, ದೆಶಭಕ್ತ ಬಿಸಿ ರಕ್ತದ ಕ್ಷತ್ರೀಯ ಮಹಿಳೆ” ಎಂದಿದೆ.

 

Advertisement

ಸದ್ಯ “ಇಪ್ಪತ್ತ ಒಂಬತ್ತು ಸಾವಿರ ಮಂದಿ ಫಾಲೋವರ್ಸ್ ಹೊಂದುವುದರ ಮೂಲಕ ಕಂಗನಾ ಇತ್ತೀಚೆಗೆ “ಕೂ” ಗೆ ಸೇರ್ಪಡೆಗೊಂಡ ಸೆಲೆಬ್ರೆಟಿಯಾಗಿದ್ದಾರೆ.

ಓದಿ : ಹರಪ್ಪನಳ್ಳಿ, ಕುಣಿಗಲ್, ಧಾರವಾಡದಲ್ಲಿ ಹೊಸದಾಗಿ ಕೆಎಸ್ಆರ್ ಪಿ ತುಕಡಿ: ಅಲೋಕ್ ಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next