Advertisement

ಒಡಿಶಾದಲ್ಲಿ ಟ್ರಕ್‌ ಮಗುಚಿ ಬಿದ್ದು 8 ಸಾವು; 25 ಮಂದಿಗೆ ಗಂಭೀರ ಗಾಯ

09:47 AM Jan 22, 2019 | Team Udayavani |

ಕಂಧಮಾಲ್‌ : ಒಡಿಶಾದ ಕಂಧಮಾಲ್‌ ಜಿಲ್ಲೆಯಲ್ಲಿ ಟ್ರಕ್‌ ಮಗುಚಿ ಬಿದ್ದ ದುರಂತದಲ್ಲಿ  ಎಂಟು ಮಂದಿ ಮಡಿದು ಇತರ 25ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. 

Advertisement

ಕಂಧಮಾಲ್‌ ಜಿಲ್ಲೆಯ ಬಲಿಗುಡ ಸಮೀಪದ ಪೋಯಿಗುಡ ಎಂಬಲ್ಲಿ ಈ ದುರ್ಘ‌ಟನೆ ನಿನ್ನೆ ಸೋಮವಾರ ನಡೆಯಿತೆಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳನ್ನು ಬ್ರಹ್ಮಣಿಗಾನ್‌ ಮತ್ತು ಬೆರಾಂಪುರ ದಲ್ಲಿನ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಈಗಲೂ ಮುಂದುವರಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next