Advertisement

ಕಂಡಲೂರು: ಅಕ್ರಮ ಮರಳುಗಾರಿಕೆಯಲ್ಲಿ ಪ್ರಭಾವಿಗಳ ಕೈವಾಡ?

09:09 AM May 22, 2019 | Team Udayavani |

ಕುಂದಾಪುರ: ಕಂಡಲೂರಿನಲ್ಲಿ ಕೆಲವರು ದುಡ್ಡಿನ ಬಲ ಹಾಗೂ ಅಧಿಕಾರದ ಪ್ರಭಾವದಿಂದ ಜಿಲ್ಲಾಡಳಿತಕ್ಕೂ ಸವಾಲೆಸೆದು ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದು, ತಮ್ಮದೇ ಪ್ರತ್ಯೇಕ ಸರಕಾರದಂತೆ ವರ್ತಿಸುತ್ತಿರುವ ಆರೋಪ ಕೇಳಿಬಂದಿದೆ.

Advertisement

ಒಂದುವೇಳೆ ಜಿಲ್ಲಾಡಳಿತ ದಾಳಿ ನಡೆಸಿದರೂ ಒಂದು ದಿನ ಸುಮ್ಮನಿದ್ದು, ಎರಡನೇ ದಿನ ಮತ್ತೆ ತಮ್ಮ ಅಕ್ರಮ ದಂಧೆಯನ್ನು ಮುಂದುವರಿಸುವುದು ಇವರ ಚಾಳಿ. ಇದು ಶನಿವಾರ ಸ್ಥಳಕ್ಕೆ ಭೇಟಿ ನೀಡಿದ “ಉದಯವಾಣಿ’ಯ ಗಮನಕ್ಕೆ ಬಂದಿತು. ಹಲವು ಸ್ಥಳೀಯರೂ ಇದನ್ನು ಖಚಿತಪಡಿಸಿದ್ದಾರೆ.

ಅಕ್ರಮ ಮರಳು ದಂಧೆಯಲ್ಲಿ ತೊಡಗಿದವರನ್ನು ಬಂಧಿಸಿದ್ದಕ್ಕೆ ಕಳೆದ ವಾರವಷ್ಟೇ ಈ ದಂಧೆಕೋರರ ಪ್ರಚೋ ದನೆಯಿಂದ ಕೆಲವರು ಕಂಡೂÉರು ಪೊಲೀಸ್‌ ಠಾಣೆಯ ಮೇಲೆಯೇ ಕಲ್ಲು ತೂರಾಟ ನಡೆಸಿದ್ದರು.

ಸೋಮವಾರವೂ ಆರೋಪಿಗಳ ಶೋಧ ಕಾರ್ಯವನ್ನು ಪೊಲೀಸರು ಮುಂದುವರಿಸಿದ್ದಾರೆ.

ಈ ಮಧ್ಯೆಮೂವರು ಆರೋಪಿ ಗಳನ್ನು ಗೋವಾದಲ್ಲಿ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದ್ದು, ಪೊಲೀಸರು ದೃಢೀಕರಿಸಬೇಕಿದೆ. ಒಟ್ಟು 19 ಮಂದಿ ವಿರುದ್ಧ ಕೇಸು ದಾಖಲಾಗಿದೆ.

Advertisement

ಇದೇ ಮೊದಲಲ್ಲ
ಒಂದು ವರ್ಷದ ಹಿಂದೆ ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಮತ್ತು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರಾಗಿದ್ದ ಶಿಲ್ಪಾ ನಾಗ್‌ ಅವರು ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದವರ ಮೇಲೆ ದಾಳಿ ನಡೆಸಿದಾಗ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಇಷ್ಟೆಲ್ಲ ದಾಳಿಗಳೂ ನಡೆದರೂ ಎರಡೇ ದಿನಗಳಲ್ಲಿ ಮುಚ್ಚಿ ಹೋಗುತ್ತಿವೆ. ಹಾಗಾಗಿ ಪ್ರಭಾವಿಗಳು ಹಾಗೂ ಅಧಿಕಾರಿಗಳ ಕೃಪಾಕಟಾಕ್ಷವಿಲ್ಲದೆ ಇಂಥ ಪ್ರಕರಣ ನಡೆಯದು ಎನ್ನಲಾಗುತ್ತಿದೆ.

ಇದನ್ನು ಪುಷ್ಟೀಕರಿಸುವ ಮಾಹಿತಿ ಸ್ಥಳೀಯರಿಂದ ದೊರೆತಿದ್ದು, ಅಕ್ರಮವಾಗಿ ಮರಳು ತೆಗೆದು ಇಂತಹ ವಾಹನದಲ್ಲಿ ಸಾಗಿಸುತ್ತಿದ್ದಾರೆಂದು ನಾವು ಸಂಬಂಧಪಟ್ಟವರಿಗೆ ದೂರು ನೀಡುತ್ತೇವೆ. ವಿಚಿತ್ರವೆಂದರೆ ದೂರು ಪಡೆದ ವ್ಯಕ್ತಿಗಳಿಂದಲೇ (ಅಧಿಕಾರಿ ವರ್ಗ) ನಮ್ಮ ವಿಳಾಸ ಮತ್ತು ಇನ್ನಿತರ ಮಾಹಿತಿ ಪಡೆದು ದಂಧೆಕೋರರು ನಮಗೆ ಧಮಕಿ ಹಾಕುತ್ತಾರೆ. ಹೀಗಾದರೆ ಅಕ್ರಮವನ್ನು ಹೇಗೆ ತಡೆಗಟ್ಟುವುದು ಎಂದು ಪ್ರಶ್ನಿಸುತ್ತಾರೆ ಹೆಸರು ಹೇಳಲು ಇಚ್ಛಿಸದ ಸ್ಥಳೀಯರೊಬ್ಬರು.

“ಇಂಥ ದಾಳಿಗಳಾದ ಮೇಲೆ ಒಂದು ದಿನ ಮರಳು ತೆಗೆಯುವುದಿಲ್ಲ. ಮರುದಿನ ಎಂದಿನಂತೆ ಇದೇ ಜಾಗಗಳಲ್ಲಿ ಮರಳು ತೆಗೆಯುತ್ತಾರೆ. ಹಿಂದೆ ಡಿಸಿ ಮೇಲೆ ದಾಳಿ ನಡೆದಾಗಲೂ ಸ್ವಲ್ಪ ದಿನ ಮರಳುಗಾರಿಕೆ ಇರಲಿಲ್ಲ. ಆ ಬಳಿಕ ಮತ್ತೆ ರಾತ್ರೋ-ರಾತ್ರಿ ವಾರಾಹಿ ಹೊಳೆಯಿಂದ ಮರಳು ತೆಗೆದು ಸಾಗಿಸುತ್ತಿದ್ದರು’ ಎನ್ನುತ್ತಾರೆ ಸ್ಥಳೀಯರೊಬ್ಬರು.

ಕಂಡೂÉರಿನಲ್ಲಿ ಈ ದಂಧೆ ಸಂಬಂಧ ಯಾವ ರಾಜಕೀಯ ಪಕ್ಷದವರೂ ಲಘುವಾಗಿಯೇ ಪರಿಗಣಿಸಿದಂತಿವೆ. ಯಾಕೆಂದರೆ ಇದನ್ನು ಮಟ್ಟ ಹಾಕಲು ಪ್ರಯತ್ನಿಸಿದವರು ಕಡಿಮೆ. ಈ ಕಾರಣ, ಹಣ ಬಲ, ಅಧಿಕಾರದ ಪ್ರಭಾವ ಬಳಸಿಯೇ ಇಂಥ ದಂಧೆ ನಡೆಸುತ್ತಾರೆಂಬ ವಾದವನ್ನು ಜನ ನಂಬುವಂತಾಗಿದೆ.

ಜತೆಗೆ ಇದರ ಹಿಂದೆ ಪ್ರಭಾವಿ ರಾಜಕೀಯ ಮುಖಂಡರು ಮತ್ತು ಕೆಲವು ಅಧಿಕಾರಿಗಳ ಪ್ರಭಾವವೂ ಇದೆ ಎನ್ನುವ ಸಂಶಯ ಸ್ಥಳೀಯರೊಬ್ಬರು ವ್ಯಕ್ತಪಡಿಸಿದ್ದಾರೆ.

ಪೊಲೀಸ್‌ ನಿಯೋಜನೆ
ಕಂಡೂÉರು ಸೇತುವೆ ಬಳಿ ವಾರಾಹಿ ಹೊಳೆಯಲ್ಲಿ ಅಕ್ರಮವಾಗಿ ಮರಳು ತೆಗೆಯುವ ಪ್ರಮುಖ ಅಡ್ಡೆಯ ಸಮೀಪ ಇಬ್ಬರು ಪೊಲೀಸರನ್ನು ನಿಯೋಜಿಸ ಲಾಗಿದೆ. ಆಯ ಕಟ್ಟಿನ ಪ್ರದೇಶಗಳಲ್ಲಿ 4 ಚೆಕ್‌ಪೋಸ್ಟ್‌ ಗಳನ್ನೂ ತೆರೆಯಲಾಗಿದೆ.

15 ಕ್ಕೂ ಮಿಕ್ಕಿ ದಾಳಿ
2017ರ ಎ. 2ರಂದು ಡಿಸಿ ಮೇಲೆ ಹಲ್ಲೆ ನಡೆದ ಬಳಿಕ ಈವರೆಗೆ 15ಕ್ಕೂ ಮಿಕ್ಕಿ ಪೊಲೀಸ್‌ ದಾಳಿಗಳಾಗಿವೆ. ಇದರಲ್ಲಿ ಈವರೆಗೆ 10-12 ಮಂದಿ ಯನ್ನು ಬಂಧಿಸಿದ್ದಾರೆ. ಮೊದಲು ಪೊಲೀಸರು ದಾಳಿ ನಡೆಸಿ, ಬಳಿಕ ಪ್ರಕರಣವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗುತ್ತಿತ್ತು. ಆದರೆ ಈಗ ಪೊಲೀಸ್‌ ಇಲಾಖೆಗೆ ಕೇಸು ದಾಖಲಿಸುವ ಅಧಿಕಾರವಿದೆ. ಈ ನಿಯಮ ಬಂದ ಬಳಿಕ ಕಂಡೂÉರು ಠಾಣೆಯಲ್ಲಿ 4-5 ಪ್ರಕರಣ ದಾಖಲಾಗಿವೆ ಎನ್ನುವ ಮಾಹಿತಿ ಸುದ್ದಿ ಮೂಲಗಳದ್ದು.

ಅಕ್ರಮ ತಡೆಗೆ ಕ್ರಮ
ಎಲ್ಲಿಯೇ ಅಕ್ರಮ ಮರಳುಗಾರಿಕೆ ನಡೆದರೂ, ಅದಕ್ಕೆ ಕಡಿವಾಣ ಹಾಕಲು ಸೂಕ್ತ ರೀತಿಯಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಎಸ್ಪಿಯವರು ಕೂಡ ಕಠಿನ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಇಂತಹ ಘಟನೆಗಳು ಮರುಕಳುಹಿಸದಂತೆ ಎಚ್ಚರ ವಹಿಸಲಾಗುವುದು.
– ಹೆಫಿÕಬಾ ರಾಣಿ ಕೊರ್ಲಪಾಟಿ, ಉಡುಪಿ ಜಿಲ್ಲಾಧಿಕಾರಿ

ಮಟ್ಟಹಾಕಲು ಗರಿಷ್ಠ ಪ್ರಯತ್ನ
ತುಂಬಾ ದಿನಗಳಿಂದ ಕಂಡೂÉರಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಈಗ ಬಿಗಿ ಭದ್ರತೆ ಸಂಬಂಧ ಎಲ್ಲ ರೀತಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಪೊಲೀಸರನ್ನು ನಿಯೋಜಿಸಿದ್ದು, ಅಕ್ರಮ ಮರಳುಗಾರಿಕೆ ಅಡ್ಡೆಗಳ ಬಳಿ, ಪ್ರಮುಖ ಒಳದಾರಿಗಳಲ್ಲೂ ಸಿಸಿಟಿವಿಗಳನ್ನು ಹಾಕಲು ಆಲೋಚಿಸಲಾಗಿದೆ. ಸ್ಥಳೀಯ ಗ್ರಾ.ಪಂ. ಜತೆಗೂ ಚರ್ಚಿಸಿದ್ದೇವೆ.
– ನಿಶಾ ಜೇಮ್ಸ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಉಡುಪಿ

ಕಠಿನ ಕ್ರಮಕೈಗೊಳ್ಳಬೇಕು
ಆಗ ಡಿಸಿ ಮೇಲೆ ಹಲ್ಲೆ, ಈಗ ಠಾಣೆಗೇ ಕಲ್ಲೆಸೆಯುತ್ತಾರೆ ಅಂದರೆ ಇವರಿಗೆ ಕಾನೂನಿನ ಬಗ್ಗೆ, ಪೊಲೀಸರ ಬಗ್ಗೆ ಭಯವೇ ಇಲ್ಲದಂತಾಗಿದೆ. ಇಂಥವರ ವಿರುದ್ಧ ಕಠಿನ ಕ್ರಮಕೈಗೊಳ್ಳಲು ಉನ್ನತ ಪೊಲೀಸ್‌ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. R ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಸರಿಯಾದ ಕ್ರಮಗಳನ್ನು ಕೈಗೊಳ್ಳಲಿ. ಇದರ ಜತೆಗೆ ಕಾನೂನಿನ ರೀತಿಯಲ್ಲಿಯೇ ಮರಳು ತೆಗೆಯಲು ಅವಕಾಶವನ್ನೂ ಕಲ್ಪಿಸಲಿ.

– ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next