Advertisement

Kanakapura: ವಿವಾಹಕ್ಕೆ ಹೋಗುತ್ತಿದ್ದವರ ಬಸ್‌ ಪಲ್ಟಿ; 20ಕ್ಕೂ ಹೆಚ್ಚು ಮಂದಿಗೆ ಗಾಯ

01:21 PM Oct 20, 2024 | Team Udayavani |

ಕನಕಪುರ: ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದವರು ಪ್ರಯಾಣಿಸುತ್ತಿದ್ದ ಬಸ್ಸೊಂದು ಉರುಳಿ ಬಿದ್ದು 20 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಮಡಿವಾಳದ ಬಳಿ ರವಿವಾರ (ಅ.20) ನಡೆದಿದೆ.

Advertisement

ಗಾಯಾಳುಗಳನ್ನು ಕನಕಪುರ ಐಪಿಪಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

ತಗಡೆಗೌಡನದೊಡ್ಡಿ ಗ್ರಾಮದ ಜೋಡಿಯ ವಿವಾಹ ಕಾರ್ಯಕ್ರಮವು ಸಂಗಮದ ಬಳಿ ಇರುವ ಮಡಿವಾಳದಲ್ಲಿ ಆಯೋಜಿಸಲಾಗಿತ್ತು. ಎರಡು ಖಾಸಗಿ ಬಸ್ಸಿನಲ್ಲಿ ಜನರು ಹೋಗುತ್ತಿದ್ದರು. ಒಂದು ಬಸ್ಸು ಸಂಗಮದ ಎರಡನೇ ತಿರುವು ಕಾರಚ್ಚಲು ದಿಬ್ಬದ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next