Advertisement

ಧಾರಾಕಾರ ಮಳೆ ಮಳಿಗೆಗಳಿಗೆ ನುಗ್ಗಿದ ಮಳೆ ನೀರು

12:48 PM Oct 01, 2020 | sudhir |

ಕನಕಪುರ: ಮಂಗಳವಾರ ಸಂಜೆ ಸುರಿದ ಧಾರಾಕಾರ ಮಳೆಗೆ ನಗರಸಭೆ ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿ ವರ್ತಕರು ಪರದಾಡುವಂತಹ ಪರಿಸ್ಥಿತಿ ಎದುರಾಯಿತು.

Advertisement

ನಗರಸಭೆಗೆ ಹೊಂದಿಕೊಂಡಿರುವ ಪೋಸ್ಟ್ ಆಫೀಸ್‌ ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆಯ ಕೆಳ ಮಹಡಿಯಲ್ಲಿ ಇರುವ ಬಹುತೇಕ 20ಕ್ಕೂ ಹೆಚ್ಚು ಮಳಿಗೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಮಂಗಳವಾರ ಸಂಜೆ 4ರ ಸಮಯಕ್ಕೆ ಆರಂಭ ಗೊಂಡ ಮಳೆ ಸತತವಾಗಿ ರಾತ್ರಿವರೆಗೂ ಸುರಿದಿದೆ. ಪ್ರತಿ ಬಾರಿ ಮಳೆ ಬಂದಾಗಕೆಳ ಮಹಡಿ ಅಂಗಡಿಗಳ ವರ್ತಕರು ಮಳೆ ನೀರನ್ನು ಸ್ಥಳಾಂತರಿಸಲು ಹರಸಾಹಸಪಡಬೇಕು. ಅವೈಜ್ಞಾನಿಕ ಮಳಿಗೆಗಳ ನಿರ್ಮಾಣದಿಂದ ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗುತ್ತದೆ ಎಂದು ವರ್ತಕರು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಕೊರೊನಾದಿಂದ ವ್ಯಾಪಾರ ವಹಿವಾಟು ಇಲ್ಲದೆ ಸಾಲ ಮಾಡಿ ಮಳಿಗೆಗಳ ಬಾಡಿಗೆ ಪಾವತಿಸುತ್ತಿರುವ ವರ್ತಕರಿಗೆ ಮಳೆ ಬಂದಾಗ ನೀರು ಮಳಿಗೆಗಳಿಗೆ ನುಗ್ಗಿ ಸಾಕಷ್ಟು ನಷ್ಟ ಉಂಟಾಗುತ್ತದೆ.ಅಧಿಕಾರಿಗಳು ನಮ್ಮ ಸಮಸ್ಯೆಗಳಿಗೆ ಸ್ಪಂದಿಸದೆ, ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ನಗರ ಸಭೆ ವಾಣಿಜ್ಯ ಮಳಿಗೆಗಳ ವರ್ತಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next