Advertisement

ಕೋತಿಗಳ ಕಾಟಕ್ಕೆ ನಲುಗಿದ ಯತ್ನಟ್ಟಿ ಗ್ರಾಮಸ್ಥರು!

12:02 PM Jan 17, 2020 | Naveen |

ಕನಕಗಿರಿ: ತಾಲೂಕಿನ ಕೊನೆಯ ಭಾಗದ ಯತ್ನಟ್ಟಿ ಗ್ರಾಮಸ್ಥರಿಗೆ ಕಳೆದ ಮೂರು ತಿಂಗಳಿಂದಕೋತಿಗಳ ಕಾಟ ಹೆಚ್ಚಾಗಿದ್ದು, ಇದರಿಂದ ತಮ್ಮ ಕೃಷಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದಾರೆ. ಗ್ರಾಮದ ಸುತ್ತಮುತ್ತ ಇರುವ ಜಮೀನಿಗಳಲ್ಲಿ ಹಾಕಲಾಗಿರುವ ವಿವಿಧ ಬೆಳೆಗಳನ್ನು 30 ಕೋತಿಗಳ ಗುಂಪು ಕಳೆದ ಮೂರು ತಿಂಗಳಿಂದ ಹಾಳು ಮಾಡುತ್ತಿವೆ. ಇನ್ನು ಕೋತಿಗಳನ್ನು ಓಡಿಸಲು ಹೋದವರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿವೆ. ಇದರಿಂದ ಗ್ರಾಮಸ್ಥರು ತಮ್ಮ ಜಮೀನುಗಳಿಗೆ ಹೋಗಿ ಬೆಳೆದ ಬೆಳೆಯನ್ನು ಸಂರಕ್ಷಣೆ ಮಾಡಲು ಭಯ ಭೀತರಾಗಿದ್ದಾರೆ.

Advertisement

ಕೋತಿಗಳನ್ನು ಹಿಡಿಯುವಂತೆ ಹಲವಾರು ಬಾರಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಕೋತಿಗಳಿಂದ ಗಾಯಗೊಂಡವರಾದ ನಾಗಪ್ಪ, ಶಶಿಧರ.

ಕೋತಿಗಳನ್ನು ಹಿಡಿಯಲು ಅರಣ್ಯ ಇಲಾಖೆಯಲ್ಲಿ ಯಾವುದೇ ಅನುದಾನವಿಲ್ಲ. ಗ್ರಾಮಸ್ಥರೆಲ್ಲ ಕೂಡಿ 5 ಸಾವಿರ ರೂ. ಹಣ ನೀಡಬೇಕು. ಇಲ್ಲವೇ ಗ್ರಾ.ಪಂ ಅನುದಾನವನ್ನು ನೀಡಿದರೆ ಮಾತ್ರ ಕೋತಿಗಳನ್ನು ಹಿಡಿಯಲು ಬೋನಿನ ವ್ಯವಸ್ಥೆ ಮಾಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ನಮ್ಮಗೆ ದಿಕ್ಕೆ ತೋಚದಂತಾಗಿದೆ ಎನ್ನುತ್ತಾರೆ ಗ್ರಾಮದ ಯುವಕ ಮಹಾಂತೇಶ ಹಿರೇಮಠ.

ಹರಸಾಹಸ: ಜಮೀನುಗಳಿಗೆ ಬೇರೆ ಕೋತಿಗಳನ್ನು ಓಡಿಸಲು ಗ್ರಾಮದ ರೈತರು ಹರಸಾಹಸ ಪಡುತ್ತಿದ್ದಾರೆ. ಜಮೀನುಗಳಲ್ಲಿ ಒಬ್ಬರೇ ಇದ್ದಾಗ ಕೋತಿಗಳ ಗುಂಪು ಮನುಷ್ಯರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿವೆ. ಇದರಿಂದ ಒಬ್ಬರೇ ತಮ್ಮ ಜಮೀನುಗಳಿಗೆ ಹೋಗಲು ಹಿಂದೆ ಮುಂದೆ ನೋಡುತ್ತಿದ್ದಾರೆ.

ಕೊಡಲೇ ಸಂಬಂಧಿಸಿ ಅಧಿಕಾರಿಗಳು ಗ್ರಾಮಸ್ಥರ ಮೇಲೆ ದಾಳಿ ಮಾಡುತ್ತಿರುವ ಕೋತಿಗಳನ್ನು ಹಿಡಿದು ಬೇರೆ ಕಡೆ ರವಾನೆ ಮಾಡಬೇಕು ಎಂದು ಯತ್ನಟ್ಟಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

ಯತ್ನಟ್ಟಿ ಗ್ರಾಮಸ್ಥರ ಮೇಲೆ ಕೋತಿಗಳು ದಾಳಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕೋತಿಗಳು ರೈತರು ಜಮೀನಿಗೆ ತೆರಳಿದಾಗ ದಾಳಿ ಮಾಡುತ್ತಿವೆ. ಜಮೀನಿನಲ್ಲಿ ಆದ ಘಟನೆಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಗ್ರಾಮಸ್ಥರಿಗೆ ಸಹಾಯ ಮಾಡಲಾಗುವುದು.
ದಸ್ತಗಿರಿಸಾಬ,
ರಡೋಣಿ, ಪಿಡಿಒ.

ಯತ್ನಟ್ಟಿ ಗ್ರಾಮಸ್ಥರು ಮೂರು ಬಾರಿ ಕೋತಿಗಳ ದಾಳಿ ಬಗ್ಗೆ ದೂರು ನೀಡಿದ್ದಾರೆ. ಆದರೆ ಕೋತಿಗಳು ಹಿಡಿಯುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇಲಾಖೆಯಿಂದ ಯಾವುದೇ ಅನುದಾನವಿಲ್ಲ. ಗ್ರಾಪಂನಲ್ಲಿ ಅನುದಾನವಿದ್ದು, ಗ್ರಾಪಂ ವತಿಯಿಂದ ಕೋತಿಗಳನ್ನು ಹಿಡಿದು ಬೇರೆ ಕಡೆ ರವಾನೆ ಮಾಡಬಹುದು. ಇಲಾಖೆಯಿಂದ ಸಹಕಾರ ನೀಡಲಾಗುವುದು.
ಹನುಮಂತಪ್ಪ,
ಉಪ ವಲಯ ಅರಣ್ಯಾಧಿಕಾರಿ. ಕನಕಗಿರಿ

„ಶರಣಪ್ಪ ಗೋಡಿನಾಳ

Advertisement

Udayavani is now on Telegram. Click here to join our channel and stay updated with the latest news.

Next