Advertisement

ಕೋವಿಡ್ 19 ಕುರಿತು ರೈತರ ಬಳಿಗೆ ತೆರಳಿ ಜಾಗೃತಿ ಮೂಡಿಸಿದ ಶಾಸಕ ದಡೇಸೂಗುರು ಬಸವರಾಜ

04:26 PM May 10, 2020 | keerthan |

ಗಂಗಾವತಿ: ವಿಶ್ವವನ್ನು ಕಾಡುತ್ತಿರುವ ಕೋವಿಡ್-19 ರೋಗದ ಸೋಂಕು ಹರಡದಂತೆ ದೂರವಿರುವಂತೆ ಮತ್ತು ಮಾಸ್ಕ್ ಧರಿಸುವಂತೆ, ಕೈಕಾಲು ಆಗಾಗ್ಗೆ ಸ್ವಚ್ಛವಾಗಿ ತೊಳೆದುಕೊಳ್ಳುವಂತೆ ಕನಕಗಿರಿ ಶಾಸಕ ದಡೇಸೂಗುರು ಬಸವರಾಜ ಹೇಳಿದರು.

Advertisement

ಅವರು ರವಿವಾರ ಕನಕಗಿರಿ ಭಾಗದ ಗ್ರಾಮಗಳಲ್ಲಿ ಸಂಚಾರ ಮಾಡಿ ಕೇಂದ್ರ ಸರಕಾರದ ಗರೀಬ್ ಕಲ್ಯಾಣ ಯೋಜನೆ ಮತ್ತು ರಾಜ್ಯ ಸರಕಾರದ ಅನ್ನ ಭಾಗ್ಯ ಯೋಜನೆಯ ಅಕ್ಕಿ‌ಬೇಳೆ‌ಗೋಧಿ ಪ್ರತಿಯೊಬ್ಬರಿಗೂ ತಲುಪಿತುವ ಕುರಿತು ಮತ್ತು ವೈಯಕ್ತಿಕ ನೆರವು ಪಡೆಯುವಂತೆ ಜನರಿಗೆ ಮನವರಿಕೆ ಮಾಡಿದರು.

ಇದೇ ಸಂದರ್ಭದಲ್ಲಿ ಹೊಲದಲ್ಲಿ ಉಳುಮೆ ಮಾಡುತ್ತಿದ್ದ ರೈತರ ಬಳಿಗೆ ತೆರಳಿ ಬೀಜ ಗೊಬ್ಬರ ಅಗತ್ಯ ದಾಸ್ತಾನು ಇದ್ದು ರೈತರು‌ಕೃಷಿ ಸಂಪರ್ಕ ಕೇಂದ್ರಕ್ಕೆ ತೆರಳಿ ಪಡೆಯುವಂತೆ‌ ಸಲಹೆ ನೀಡಿದರು.

ಆಕಳಕುಂಪಿ ಗೋಡಿನಾಳ ಗ್ರಾಮಗಳ ಹೊಲದಲ್ಲಿ ಸ್ವಲ್ಪ ಹೊತ್ತು ರೈತರ ಜತೆ ಉಳುಮೆ ಮಾಡಿ ತಾವು ಕೃಷಿ ಮಾಡುವಾಗ ಅನಿಸರಿಸಿತ್ತಿದ್ದ ವಿಧಾನಗಳ ಕುರಿತು ರೈತರ ಜತೆ ಹಲವಾರು ವಿಷಯಗಳ ಕುರಿತು ಅನುಭವ ಹಂಚಿಕೊಂಡರು ಈ‌ ಸಂದರ್ಭದಲ್ಲಿ ರೈತರು‌ಯುವಕರು ಶಾಸಕರ ಜತೆ ಮೊಬೈಲ್ ನಲ್ಲಿ ಸೆಲ್ಫಿ ತೆಗೆಸಿಕೊಂಡರು

Advertisement

Udayavani is now on Telegram. Click here to join our channel and stay updated with the latest news.

Next