Advertisement

ಭಕ್ತಿಯಲ್ಲಿ ಶಕ್ತಿ ತೋರಿದ ಕನಕದಾಸರು

11:41 AM Nov 27, 2018 | |

ಶಹಾಬಾದ: ಕೃಷ್ಣನನ್ನೇ ತನ್ನತ್ತ ತಿರುಗಿಸುವ ಮೂಲಕ ಭಕ್ತಿಯಲ್ಲಿ ಎಷ್ಟೊಂದು ಶಕ್ತಿಯಿದೆ ಎಂಬುದನ್ನು ತೋರಿಸಿಕೊಟ್ಟವರು ಕನಕದಾಸರು ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ಅಧ್ಯಕ್ಷ ಮಲ್ಕಣ್ಣ ಮುದ್ದಾ ಹೇಳಿದರು. ನಗರದ ಕನ್ನಡ ಭವನದಲ್ಲಿ ಕಸಾಪದಿಂದ ಆಯೋಜಿಸಲಾಗಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಎಲ್ಲರೂ ದೇವರ ದರ್ಶನಕ್ಕಾಗಿ ದೇಶದ ಎಲ್ಲ ತೀರ್ಥ ಕ್ಷೇತ್ರಗಳಿಗೆ ಹೋಗುತ್ತಾರೆ. ಆದರೆ ದೇವರನ್ನೇ ತನ್ನ ಭಕ್ತಿಯ ಶಕ್ತಿಯಿಂದ ತನ್ನತ್ತ ಸೆಳೆದವರು ಕನಕದಾಸರು. ಸಮಾಜದಲ್ಲಿರುವ ಮೂಢನಂಬಿಕೆ ತೊಲಗಿಸಲು ತಮ್ಮ ಕೀರ್ತನೆಗಳ ಮೂಲಕ ಜನರಿಗೆ ಜಾಗೃತಿ ಮೂಡಿಸಿದರು. ದಾಸ ಸಾಹಿತ್ಯ ಮೂಲಕ ಸಮಾಜದ ಓರೆ ಕೋರೆ ತಿದ್ದುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಅವಿರತವಾಗಿ ಶ್ರಮಿಸಿದ ಮಹಾನ್‌ ಚಿಂತಕ ಕನಕದಾಸರಾಗಿದ್ದರು ಎಂದು ಹೇಳಿದರು.

ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿ, ಕನಕದಾಸರು ಹಾಗೂ ಪುರಂದರ ದಾಸರಂತಹ ವೈಚಾರಕ ಸಂತರಿಂದಾಗಿ ಸಮಾಜದಲ್ಲಿದ್ದ ಮೇಲು-ಕೀಳು ಮತ್ತು ಜಾತಿ- ಮತಗಳಂಥ ಭಾವನೆಗಳು ಬದಿಗೆ ಸರಿದವು.

ದೇವಸ್ತುತಿಯೇ ಮುಖ್ಯ ಎನಿಸಿದ ಭಕ್ತಿ ಪರಂಪರೆ ಕಾಲದಲ್ಲಿ ಕನಕದಾಸರು ತಮ್ಮ ದಾಸಸಾಹಿತ್ಯದ ಮೂಲಕ ವೈಚಾರಿಕ ಮತ್ತು ಪ್ರತಿಭಟಿಸುತ್ತ ಜೀವನ ಸಾಗಿಸಿದ್ದರು ಎಂದು ಹೇಳಿದರು.  ಕಸಾಪ ನಗರ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಕರ್‌, ಧನವಂತ ಮುದಿಗೌಡ, ಅಶೋಕ ಮೊಸಲಗಿ, ಬಂಡಪ್ಪ ಪೂಜಾರಿ, ರಾಯಣ್ಣ ಪೂಜಾರಿ, ಶಾಂತಪ್ಪ ಹಡಪದ, ಸುರೇಶ ಪೂಜಾರಿ, ರಮೇಶ ಜೋಗದನಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next