Advertisement
ಅವರು ಹೊಸಮನೆಯ ಪತಂಜಲಿ ಯೋಗ ಕಲಾಮಂದಿರದಲ್ಲಿ 531ನೇ ಶ್ರೀಕನಕದಾಸರ ಜಯಂತಿಯ ಅಂಗವಾಗಿ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಶ್ರೀಕನಕದಾಸರ ಅಧ್ಯಯನಕೇಂದ್ರ, ಪತಂಜಲಿ ಕಥಾಕೀರ್ತನ ಕಲಾ ಕೇಂದ್ರ, ಹಾಲುಮತ ಕನಕ ಒಕ್ಕೂಟ, ಕರ್ನಾಟಕ ಶಾಖೆ ಆಶ್ರಯದಲ್ಲಿ ರಾಜ್ಯ ಮಟ್ಟದ ಕನಕ ಕಥಾಕೀರ್ತನ ಮಹೋತ್ಸವ ಸಮ್ಮೇಳನ ತರಬೇತಿ ಕಾರ್ಯಾಗಾರ ಗೀತಾಗಾಯನ, ವೇಷಭೂಷಣ. ರಸಪ್ರಶ್ನೆ, ಭಾಷಣ, ಚರ್ಚಾ, ಸಂವಾದ ಚಿತ್ರಕಲಾ ಸ್ಪರ್ಧ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Related Articles
ಮಹಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿ ಬೆಳೆದಿದ್ದಾರೆ. ಕನಕದಾಸರ ಕೀರ್ತನೆಗಳನ್ನು ಪ್ರತಿಯೊಬ್ಬ ಮಹಿಳೆಯರು ಕಲಿಯಲು ಮುಂದೆ ಬರಬೇಕೆಂದರು.
Advertisement
ಕನಕ ಮಹಿಳಾ ಸಂಘದ ಅಧ್ಯಕ್ಷೆ ರೂಪ ಇಕ್ಕೇರಿ, ಸುವರ್ಣ ಯೋಗ ಕೇಂದ್ರದ ಎಸ್.ಈ.ಸುವರ್ಣ, ಜೈ ಕನಕ ಪತಂಜಲಿಸಂಘದ ಅಧ್ಯಕ್ಷೆ ನಂದಾ, ಕಾರ್ಯದರ್ಶಿ ಲೀಲಾವತಿ ಬಸವರಾಜ್, ಚಿಕ್ಕಮಂಗಳೂರು ಹಾಲುಮತ ಕನಕ ಪತಂಜಲಿ ಒಕ್ಕೂಟದ ಅಧ್ಯಕ್ಷೆ ಸುಜಾತ ಶಿವಕುಮರ್, ಹಾಸನದ ನಯನ, ಉಪಾಧ್ಯಕ್ಷ ಪಿ.ಬಾಲಪ್ಪ, ಕಡೂರು ಒಕ್ಕೂಟದ ಅಧ್ಯಕ್ಷೆ ಸುಮ ಉಪಸ್ಥಿತರಿದ್ದರು. ಪ್ರಿಯಾಂಕ ಸಿ.ರಾಯ್ಕರ್ ಪ್ರಾಸ್ತವಿಕ ಮಾತನಾಡಿದರು. ಇದೇ ಸಂದರ್ಭದಲ್ಲಿ ದೈವಾಧಿಧೀನರಾದ ಚಲನಚಿತ್ರ ನಟ ಅಂಬರೀಷ್ ಮತ್ತು ಹಿರಿಯ ರಾಜಕಾರಣಿ ಜಾಫರ್ ಷರೀಫ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸ ³ರ್ಧಾ ತೀರ್ಪುಗಾರರಾಗಿ ಸುಶೀಲ ಭವಾನಿ ಶಂಕರ್‌ರಾವ್, ಭವಾನಿ ಶಂಕರ್‌ರಾವ್, ಮಂಜುವಿಠಲ್ ಶೇಟ್, ಕೇಶವಚತುರು, ಹರಿಕಥಾ ಕಲಾವಿದ ಹಾಲಪ್ಪ ಪೂಜಾರ್, ಪ್ರಿಯಾಂಕ ಸಿ.ರಾಯ್ಕರ್, ಎ.ಎಚ್.ಶ್ಯಾಮಲಾ, ಶೋಭ ದೇವರಾಜ್ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಪತಂಜಲಿ ಸಂಸ್ಥೆ ಗೌರವಾಧ್ಯಕ್ಷ ಎಂ.ಈಶ್ವರಪ್ಪ ನವುಲೆ ವಹಿಸಿದ್ದರು. ಕೇಶವಚತುರ ಪ್ರಾರ್ಥಿಸಿದರು. ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಯೋಗಾಚಾರ್ಯ ಪತಂಜಲಿ ಜೆ.ನಾಗರಾಜ್ ಸ್ವಾಗತಿಸಿದರು. ಭವಾನಿಶಂಕರ್ ರಾವ್ ಸ್ವಾಗತಿಸಿದರು. ಎ.ಎಚ್.ಶ್ಯಾಮಲಾ ವಂದಿಸಿದರು. ಶಿಕ್ಷಕ ರಂಗನಾಥ್ ನಿರೂಪಿಸಿದರು. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಶಿವಮೊಗ್ಗ: ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ
ಅವಕಾಶವಿದೆ. ಸಂವಿಧಾನವೇ ಶ್ರೇಷ್ಠ ಎಂದು ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾ ಧೀಶರಾದ ಪ್ರಭಾವತಿ ಮೃತ್ಯುಂಜಯ ಹೀರೆಮಠ… ಹೇಳಿದರು. ನಗರದ ಜಿಲ್ಲಾ ವಕೀಲರ ಭವನದಲ್ಲಿ ಸೋಮವಾರ ಜಿಲ್ಲಾ
ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ, ಸಿಬಿಆರ್ ನ್ಯಾಷನಲ್ ಲಾ ಕಾಲೇಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಭಾರತ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ಸಂವಿಧಾನ ನಿರ್ಮಾಣದಲ್ಲಿ ತೊಡಗಿದ್ದ ಗಣ್ಯರ ಬಗ್ಗೆ
ತಿಳಿಯಲು ಸರ್ಕಾರ ಸಂವಿಧಾನ ದಿನಾಚರಣೆ ಕೈಗೊಂಡಿದೆ.
ಪ್ರತಿಯೊಬ್ಬರಿಗೂ ಸ್ವಾತಂತ್ರ್ಯಾ, ಸಮಾನತೆ, ಸಾಮಾಜಿಕ ನ್ಯಾಯ ದೊರೆಯಬೇಕೆಂಬ ಉದ್ದೇಶದಿಂದ ವಿಶ್ವ ಶ್ರೇಷ್ಠ ಸಂವಿಧಾನವನ್ನು ನಮ್ಮ ಹಿರಿಯರು ರಚನೆ ಮಾಡಿದ್ದು, ಸಂವಿಧಾನ ರಚನೆಯ ಮೂಲ ಉದ್ದೇಶಗಳು ಮತ್ತು ಅದರ ನಿರ್ಮಾಣದಲ್ಲಿ ಪಾಲ್ಗೊಂಡ ಗಣ್ಯರ ಬಗ್ಗೆ ಅರಿಯುವುದು ಅತ್ಯವಶ್ಯಕವಾಗಿದೆ ಎಂದರು. ಆಂಗ್ಲರ ಇನ್ನೂರು ವರ್ಷಗಳ ಆಡಳಿತಾವಧಿಯಲ್ಲಿ ಸಂವಿಧಾನದ ಮೌಲ್ಯಗಳು, ತತ್ವಗಳು, ಘನತೆ ಹಿನ್ನಲೆ ಬಗ್ಗೆ 1930ರಲ್ಲಿ ಕಾನೂನು ಸಮರ ಮಾಡಲಾಯಿತು. 1946ರಲ್ಲಿ 211 ಜನ ಪರಿಣಿತರ ತಂಡ ಸಂವಿಧಾನ ರಚನೆಯ ಬಗ್ಗೆ ಮೊದಲ ಸಭೆ ನಡೆಸಿ ಹತ್ತು ಹಲವು ಸಮಿತಿಗಳ ರಚಿಸಲಾಯಿತು. ಕರಡು ಸಮಿತಿಗೆ ಅಂಬೇಡ್ಕರ್ ಅವರು
ಅಧ್ಯಕ್ಷರಾಗಿ 2 ವರ್ಷ 11 ತಿಂಗಳು 17 ದಿನ ಸುದೀರ್ಘವಾಗಿ ಎಲ್ಲಾ ವರ್ಗದ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಭಾರತದ ಸಂವಿಧಾನ ರಚಿಸಲಾಗಿದೆ ಎಂದರು. ಸಂವಿಧಾನದಲ್ಲಿ ಮೊದಲ 395 ಕಾಲಂಗಳ ಎಂಟು ಅನುಚ್ಛೇದಗಳಿದ್ದವು. ಬೇರೆ ಬೇರೆ ದೇಶಗಳ ಸಂವಿಧಾನವನ್ನು
ನಮ್ಮ ದೇಶದ ತಜ್ಞರು ಅಧ್ಯಯನ ಮಾಡಿ ನಮ್ಮ ದೇಶದ ವಿವಿಧ ಸಂಸ್ಕೃತಿ, ಸಂಪ್ರದಾಯ ಭಾಷೆ, ಎಲ್ಲವನ್ನು ಮನಗಂಡು ಎಲ್ಲರಿಗೂ ಸಮಾನತೆ ತಂದು ಅಖಂಡ ಭಾರತದ ನಿರ್ಮಾಣವನ್ನು ಮನಗಂಡು ಈ ಸಂವಿಧಾನ ರಚನೆಯಾಗಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಸಂವಿಧಾನದಲ್ಲಿ ಕಲ್ಪಿಸಲಾಗಿದೆ. ಜಗತ್ತಿನ ಅತೀ ಉತ್ಕೃಷ್ಟ ಹಾಗೂ ಶ್ರೇಷ್ಠ ಸಂವಿಧಾನ ನಮ್ಮದಾಗಿದೆ ಎಂದರು. ಈ ಸಂದರ್ಭದಲ್ಲಿ ಸಂವಿಧಾನಿಕ ತತ್ವಗಳ ಬಗ್ಗೆ ಸಿಬಿಆರ್‌ಲಾ ಕಾಲೇಜಿನ ಪ್ರಾಂಶುಪಾಲ ಜಿ.ಆರ್.ಜಗದೀಶ್ ಉಪನ್ಯಾಸ ನೀಡಿದರು. ಎಸ್ಪಿ ಅಭಿನವ್ ಖರೆ ಅಧ್ಯಕ್ಷತೆ ವಹಿಸಿದ್ದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ್ ಸಿ.ಬದಾಮಿ, ವಕೀಲರ ಸಂಘದ ಉಪಾಧ್ಯಕ್ಷ ತಿಲಕಾ ಮಧುಸೂಧನ್, ಪ್ರಧಾನ ಕಾರ್ಯದರ್ಶಿ ಎಚ್.ಬಿ.ದೇವೆಂದ್ರಪ್ಪ, ಡಿ.ಎನ್.ಹಾಲಸಿದ್ದಪ್ಪ, ಕೆ.ಸಿ.ಬಸವರಾಜ್, ಚಂದ್ರಶೇಖರ್, ಗಣೇಶ್ ಇನ್ನಿತರರಿದ್ದರು.