Advertisement

ಕನಕ ಜಯಂತಿ ಅರ್ಥಪೂರ್ಣ ಆಚರಣೆ

04:23 PM Nov 09, 2019 | Suhan S |

ಮಾಲೂರು: ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ನ.15ರಂದು ಕನಕದಾಸರ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲು ಶಾಸಕ ನಂಜೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ನಾಡಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಹಾಗೂ ತಹಶೀಲ್ದಾರ್‌ ವಿ.ನಾಗರಾಜು ಅವರ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ, ತಾಲೂಕು ಕಚೇರಿ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಸುವುದು, ಅದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನಕದಾಸರ ಅದ್ಧೂರಿ ಪಲ್ಲಕ್ಕಿಗಳ ಮೆರವಣಿಗೆ ನಡೆಸಲು ತೀರ್ಮಾನಿಸಲಾಯಿತು. ಕಾರ್ಯಕ್ರಮದ ಉಸ್ತುವಾರಿ ತಾಲೂಕು ಆಡಳಿತ ವಹಿಸಲಿದ್ದು, ಕುರುಬರ ಸಂಘದ ಸಹಯೋಗವನ್ನು ಕೋರಲಾಗಿದೆ. ಮೆರವಣಿಗೆಯಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿಗಳಿಂದ ಪಲ್ಲಕ್ಕಿಗಳು ಭಾಗವಹಿಸಬೇಕಿದೆ.

ಕಾರ್ಯಕ್ರಮದಲ್ಲಿ ಸಮುದಾಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಹಿರಿಯರನ್ನು ಗೌರವಿಸಲಾಗುತ್ತದೆ. ಸಭೆಯಲ್ಲಿ ಜಿಪಂ ಸದಸ್ಯ ಎಚ್‌. ವಿ.ಶ್ರೀನಿವಾಸ್‌, ಕುರುಬರ ಸಂಘದ ಹನುಮಂತಯ್ಯ, ಸಿ.ರಾಜಣ್ಣ, ಎಟ್ಟಕೋಡಿ ವೀರಭದ್ರಪ್ಪ, ವೆಂಕಟೇಶಪ್ಪ, ಕರ್ನಾಟಕ ಪ್ರದೇಶ ಕುರುಬರ ಸಂಘದ ಕಾರ್ಯಾಧ್ಯಕ್ಷ ಅಂಜನಿ ಸೋಮಣ್ಣ. ಎಸ್‌. ಎನ್‌.ರಘುನಾಥ್‌, ಬನಹಳ್ಳಿ ನಾರಾಯಣಸ್ವಾಮಿ, ಇಒ ಕೃಷ್ಣಪ್ಪ, ಸಿಒ ಪ್ರಸಾದ್‌, ಎಇಇ ಈಶ್ವರಪ್ಪ, ಬಿಸಿಎಂ ಅಂಬಿಕಾ, ರವಿಚಂದ್ರ, ಮಂಜುನಾಥ್‌, ಕೋಳಿ ನಾರಾಯಣ್‌, ರಾಮಕೃಷ್ಣಪ್ಪ, ನಂದೀಶ್‌, ಅಬ್ಬೇನಹಳ್ಳಿ ಗೋಪಾಲ್‌, ರಮೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next