ಚಿಕ್ಕಬಳ್ಳಾಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುರುಬರಸಹಕಾರ ಸಂಘ, ಸಮಾಜದ ಮುಖಂಡರು ವತಿಯಿಂದ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಸಾಂಕೇತಿಕ ಹಾಗೂ ಸರಳವಾಗಿ ಆಚರಿಸಲಾಯಿತು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದುಹಾಗೂ ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಜಯಂತಿಯನ್ನುಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ,ಜಿಪಂಸಿಇಒ ಪಿ.ಶಿವಶಂಕರ್, ಅಪರ ಜಿಲ್ಲಾಧಿಕಾರಿ ಅಮರೇಶ್, ಜಿಪಂಉಪ ಕಾರ್ಯದರ್ಶಿ ನೋಮೇಶ್, ನಗರಾಭಿವೃದ್ಧಿ ಕೋಶದಯೋಜನಾ ನಿರ್ದೇಶಕರಾದ ರೇಣುಕಾ, ತಹಶೀಲ್ದಾರ್‌ನಾಗಪ್ರಶಾಂತ್ ಸೇರಿದಂತೆ ಸಮಾಜದ ಮುಖಂಡರು ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ದೃಢಸಂಕಲ್ಪ ಅಗತ್ಯ: ಚಿಂತಾಮಣಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ರಘು ಮುಖ್ಯ ಭಾಷಣಕಾರರಾಗಿ ಮಾತನಾಡಿ,ಕನಕದಾಸರ ಆದರ್ಶಗಳನ್ನು ಯುವಜನತೆ ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು. ಸಮಾಜದ ಒಳಿತಿಗಾಗಿ ದೃಢ ಸಂಕಲ್ಪದಿಂದ ಮುನ್ನುಗ್ಗಿದರೆ ಯಶಸ್ಸು ಖಂಡಿತ ಎಂದರು.
ಕುಲ ಕುಲವೆಂದು ಹೊಡೆದಾಡದಿರಿ, ಕುಲದ ನೆಲೆಯನೇನಾದರೂ ಬಲ್ಲೀರಾ ಎಂಬ ಕನಕದಾಸರಕೀರ್ತನೆಗಳು ಇಂದಿಗೂ ಪ್ರಸ್ತುತ ಹಾಗೂಸಮಾನತೆಯ ಅರಿವನ್ನು ಮೂಡಿಸುತ್ತದೆ. ನಾನು ಎಂಬುದನ್ನು ಬಿಟ್ಟು ನಾವು ಎಂಬ ನಡೆ ಮುಂದಿನ ದಾರಿಯನ್ನು ಹಿರಿದಾಗಿಸುತ್ತದೆ ಎಂದರು.
ದಾಸ ಸಂತ ಶ್ರೇಷ್ಠಕನಕದಾಸರ ತತ್ವಾದರ್ಶಗಳನ್ನುನಾವೆಲ್ಲರೂ ಮೈಗೂಡಿಸಿಕೊಳ್ಳುವುದರ ಜೊತೆಗೆ ಇಂದಿನ ಯುವ ಪೀಳಿಗೆಗೆ ದಾಸ ಶ್ರೇಷ್ಠರಕಥೆಗಳನ್ನುಹೇಳುವ ಮೂಲಕ ಸ್ಮಾರ್ಟ್‌ಫೋನ್ ಲೋಕದಲ್ಲಿಮುಳುಗಿ ಹೋಗಿರುವ ಮಕ್ಕಳನ್ನು ಎಚ್ಚರಿಸೋಣ,ಸಮಾಜದ ಉತ್ತಮ ಪ್ರಜೆಯನ್ನಾಗಿಸೋಣ ಎಂದು ಹೇಳಿದರು.