Advertisement

ಕನಕದಾಸರ ಚಿಂತನೆ ಅಳವಡಿಸಿಕೊಳ್ಳಿ

03:41 PM Nov 16, 2019 | Suhan S |

ಕೆ.ಆರ್‌.ಪೇಟೆ: ಸಮ ಸಮಾಜ ನಿರ್ಮಾಣಕ್ಕೆ ಕೀರ್ತನೆಗಳಿಂದ ಹೋರಾಡಿದ ಕನಕದಾಸರ ಸಂದೇಶ ಗಳು ಎಲ್ಲರೂ ಜೀವನದಲ್ಲಿ ಅಳವಡಿಸಿ ಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಬ ಹುದು ಎಂದು ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್‌ ತಿಳಿಸಿದರು.

Advertisement

ಪಟ್ಟಣದ ರಾಮಮಂದಿರದಲ್ಲಿ ಕನಕದಾಸ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿದ್ದ ಜಾತಿ, ಮೇಲು, ಕೀಳು, ಬಡವ, ಬಲ್ಲಿದ ಎಂಬ ಬೇಧಭಾವ ದೂರ ಮಾಡಿ ಸಮ ಸಮಾಜ ನಿರ್ಮಿಸಲು ತಮ್ಮ ಕೀರ್ತನೆಗಳ ಮೂಲಕ ಹೋರಾಡಿದ ಕನಕ ದಾಸರ ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಎಲ್ಲರೂ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಿಸಬಹುದಾಗಿದೆ ಎಂದು ಹೇಳಿದರು.

ಸಮಾಜದ ಅಂಕುಡೊಂಕುಗಳನ್ನು ತಮ್ಮ ಕೀರ್ತನೆಗಳ ಮೂಲಕ ತಿದ್ದಲು ಅವಿರತವಾಗಿ ಶ್ರಮಿಸಿದ ಕನಕದಾಸರು ಕುಲ ಕುಲವೆಂದು ಬಡಿದಾಡಬೇಡಿ ಎಂದು ಅಂದೇ ಸಾರಿ ಹೇಳಿದ್ದರು. ಬುದ್ಧ, ಬಸವ, ಕನಕದಾಸ, ಅಂಬೇಡ್ಕರ್‌ ಹಾಗೂ ಕುವೆಂಪು ಆಶಯ ಮತ್ತು ಗುರಿ ಒಂದೇ ಆಗಿತ್ತು. ಅದು ಜಾತಿ ರಹಿತ ಸಮಾನತೆಯ ಸಮಾಜ ನಿರ್ಮಿಸುವುದು. ಹಾಗಾಗಿ ಪ್ರತಿಯೊಬ್ಬರೂ ಕನಕದಾಸರ ಆದರ್ಶ ಪಾಲಿಸಬೇಕು. ಆ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ತಾಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಪಿ.ಜೆ.ಕುಮಾರ್‌ ಕನಕದಾಸರ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದಕೆ.ಸಿ.ಮಂಜುನಾಥ್‌, ಪ್ರಮೋದ್‌ ಕುಮಾರ್‌, ಸುಗುಣರಮೇಶ್‌, ರವೀಂದ್ರ ಬಾಬು, ಕಸಬಾ ಸೊಸೈಟಿ ಅಧ್ಯಕ್ಷ ಪುರುಗೋತ್ತಮ್‌, ಶ್ರೀ ಕನಕದಾಸ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಗ್ರಹಾರ ಕುಮಾರ್‌,ಉಪಾಧ್ಯಕ್ಷ ರಾಜೇಗೌಡ ಖಜಾಂಚಿ ಸಂದೀಪ್‌, ಕಾರ್ಯದರ್ಶಿ ವಿಶ್ವನಾಥ್‌, ನಿರ್ದೇಶಕರಾದ ಕೃಷ್ಣೇಗೌಡ, ಮಂಜುನಾಥ್‌, ಬಸವರಾಜು, ಶಿವು, ಯೋಗಣ್ಣ, ನಾಗಣ್ಣ, ಚಂದ್ರಪ್ಪ, ಶಿವಣ್ಣ, ಮುತ್ತುರಾಜ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next