Advertisement

ಕನಕದಾಸರ ಉಪದೇಶಗಳು ಸಾರ್ವಕಾಲಿಕ ಸತ್ಯ

01:35 PM Nov 16, 2019 | Suhan S |

ಕುಷ್ಟಗಿ: ಎಲ್ಲಾ ಸಮಾಜದಲ್ಲಿ ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಸಮಾಜ ಮುನ್ನಡೆಸಲು ಒಳ್ಳೆಯವರಿರಬೇಕು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಹೇಳಿದರು.

Advertisement

ಇಲ್ಲಿನ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿತಾಲೂಕಾಡಳಿತ ಹಾಗೂ ತಾಪಂ ಆಶ್ರಯದಲ್ಲಿ ನಡೆದಭಕ್ತ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜ ಎಂದರೆ ನಮ್ಮ ನಿಮ್ಮ ಸಮಾಜವಲ್ಲ. ಮಾನವ ಸಮಾಜವೇ ನಮ್ಮ ಸಮಾಜ ಎಂಬ ಪರಿಕಲ್ಪನೆ ಇರಬೇಕು. ಬೇರೆ ಬೇರೆ ರಾಷ್ಟ್ರಗಳಲ್ಲಿ ಜಾತಿ ಎಂಬುದಿಲ್ಲ. ಆದರೆ ನಮ್ಮ ದೇಶ ಹಾಗಲ್ಲ ವಿಶಿಷ್ಟ ಪೂರ್ಣವಾದ ಹಿಂದೂ ಸಮಾಜದಲ್ಲಿ ಹಲವು ಧರ್ಮ, ಜಾತಿಗಳಿವೆ. ಈ ಎಲ್ಲ ಧರ್ಮಗಳ ಸಾರವೂ ಒಂದೇ ಆಗಿದೆ.

ಸರ್ವಶ್ರೇಷ್ಠನಾದ ದೇವರು ಒಬ್ಬನೇ ಆಗಿದ್ದು ನಾಮ ಹಲವು ಇವೆ. ನಮ್ಮನ್ನು ರಕ್ಷಿಸಿಸುವವನೇ ದೇವರು ಎನ್ನುವ ನಂಬಿಕೆ ನಮ್ಮಲ್ಲಿದೆ. ಭಕ್ತ ಕನಕದಾಸರು ದಾಸಶ್ರೇಷ್ಠರಾಗಿದ್ದು, ಅವರು ನೀಡಿದ ಉಪದೇಶಗಳು ಸರ್ವಕಾಲಿಕವಾಗಿವೆ.  ಮಹಾನೀಯರ ಜೀವನ ಸಂದೇಶಗಳನ್ನು ಯುವ ಪೀಳಿಗೆ ಅಧ್ಯಯನಶೀಲರಾಗಬೇಕು. ಮಹಾತ್ಮರ ಜಯಂತಿಗಳ ಉದ್ದೇಶ ನಮ್ಮ ಮನಃ ಪರಿವರ್ತನೆ ಹಾಗೂ ಜೀವನ ಸುಧಾರಣೆಯ ಸಂದೇಶ ಹೊಂದಿವೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಿ.ಎಂ. ಕಂಬಳಿ ಮಾತನಾಡಿ, ಪ್ರಪಂಚದಲ್ಲಿ ಮಹಾ ಹಿಂಸೆಗೆ ಒಳಗಾದವರಲ್ಲಿ ಕನಕದಾಸರನ್ನು ಮಹಾ ಹಿಂಸೆಗೆ ಒಳಗಾದವರು ಮತ್ಯಾರು ಇಲ್ಲ ಅಂತಹ ವ್ಯವಸ್ಥೆಯಲ್ಲಿ ಬದುಕಿ ಮಹನೀಯರೆನಿಸಿದರು. ಜಾತ್ಯತೀತ ಮೌಲ್ಯಗಳು ಉಳಿಸಿಕೊಳ್ಳಬೇಕಾದರೆ ವಿಶ್ವ ಸಮುದಾಯವೇ ನಮ್ಮದೆನ್ನುವ ಭಾವನೆಯಲ್ಲಿ ಬದುಕಬೇಕು. ಕನಕದಾಸರು ಸೇರಿದಂತೆ ಮಹನೀಯರ ಜಯಂತಿ ಸರಳವಾದಷ್ಟು ಸುಂದರ, ಜೀವಪರವಾಗಿರುತ್ತವೆ. ಮಹಾಸಂತರು ಅಂತಿಮವಾಗಿ ಶಿವನ ಕಡೆ ಹೋಗುತ್ತಾರೆ. ಆದರೆ ಕನಕದಾಸರು ಹಾಗಲ್ಲ ಪಂಚಮಹಾಭೂತಗಳೇ ಅಂತಿಮ ಎನ್ನುವುದು ಮನಗಂಡಿದ್ದರು ಎಂದರು. ತಹಶೀಲ್ದಾರ್‌ ಎಂ. ಸಿದ್ದೇಶ, ಹಾಲುಮತ ಸಮಾಜದ ಅಧ್ಯಕ್ಷ ಮಲ್ಲಣ್ಣ ಪಲ್ಲೇದ್‌ ಮಾತನಾಡಿದರು. ಫಕೀರಪ್ಪ ಚಳಗೇರಿ, ಜಿಪಂ ಸದಸ್ಯ ನೇಮಣ್ಣ ಮಲಸಕ್ರಿ ಮತ್ತಿತರಿದ್ದರು. ಶರಣಪ್ಪ ಹುಡೇದ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next