Advertisement

ರಾಮಧಾನ್ಯದಲ್ಲಿ ಕನಕ ದರ್ಶನ

06:00 AM May 18, 2018 | |

“ರಾಮ ಧಾನ್ಯ’ ಎಂಬ ಸಿನಿಮಾವೊಂದು ತಯಾರಾಗಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇದೇ 25 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಈಗಾಗಲೇ ನೂರಾರು ಪ್ರದರ್ಶನ ಕಂಡು ಎಲ್ಲೆಡೆ ಮೆಚ್ಚುಗೆ ಪಡೆದಿರುವ ನಾಟಕವನ್ನು ಸಿನಿಮಾಗೆ ಅಳವಡಿಸಿದ್ದಾರೆ ಟಿ.ಎನ್‌ .ನಾಗೇಶ್‌. ಜನ ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೆಂಬ ಕುತೂಹಲ ನಾಗೇಶ್‌ ಅವರಲ್ಲಿದೆ. 

Advertisement

“ನಾಟಕವನ್ನು ಸಿನಿಮಾ ಮಾಡಿದಾಗ ಸಾಕಷ್ಟು ಭಯವಿತ್ತು. ಆದರೆ, ಸಿನಿಮಾದ ಮೊದಲ ಪ್ರತಿ ನೋಡಿ ನಿರ್ಮಾಪಕರು ಖುಷಿಯಾಗಿದ್ದಾರೆ. ಈ ಚಿತ್ರದಲ್ಲಿ ಕನಕದಾಸರು ಒಬ್ಬ ವೀರಯೋಧರಾಗಿದ ªರು, ಅವರು ಕೂಡಾ ಒಬ್ಬ ದಂಡನಾಯಕ ಎನ್ನುವುದನ್ನು ತೋರಿಸಲಾಗಿದೆ. ಇದು
ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಹೀಗೆ ಮೂರು ಕಾಲಘಟ್ಟದಲ್ಲಿ ನಡೆಯುವ ಕಥೆ ಆಗಿರುವುದರಿಂದ ಅದೇ ರೀತಿಯ ಪಾತ್ರಗಳು, ತಾಣಗಳು ಇಲ್ಲಿರಲಿವೆ. ಕನಕದಾಸರ ಜೀವನದ ಕೆಲವು ಪ್ರಮುಖ ಘಟನೆಗಳು ಇಲ್ಲಿನ ಹೈಲೈಟ್‌. ಚಿತ್ರದ ಕಥೆ ಇಷ್ಟವಾಗಿ ಹತ್ತುಮಂದಿ ನಿರ್ಮಾಪಕರು ಸೇರಿ ಈ ಸಿನಿಮಾ ನಿರ್ಮಿಸಿದ್ದಾರೆ’ ಎಂದು ಹೇಳಿಕೊಂಡರು. ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು ಆರು ಮಂದಿ ನಿರ್ಮಾಪಕರು, ಸಿನಿಮಾ ಚೆನ್ನಾಗಿ ಮೂಡಿಬಂದ ಖುಷಿ ಹಂಚಿಕೊಳ್ಳುವ ಜೊತೆಗೆ ಪ್ರೋತ್ಸಾಹದ ಮಾತುಗಳನ್ನಾಡಿದರು.

ಚಿತ್ರದಲ್ಲಿ ಯಶಸ್‌ ಸೂರ್ಯ ನಾಯಕರಾಗಿ ನಟಿಸಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬ, ಕನಕದಾಸ ಮತ್ತು ದಂಡನಾಯಕನ ಕನಸು ಕಂಡಾಗ ಯಾವ ರೀತಿ ಇರುತ್ತಾರೆ ಎಂಬ ಪಾತ್ರದಲ್ಲಿ ಯಶಸ್‌ ಸೂರ್ಯ ನಟಿಸಿದ್ದಾರೆ. ಅವರಿಗೆ ನಟಿಸುವ ವೇಳೆ, ತಾನು ಯಾವ ಕಾಲಘಟ್ಟದ ಪಾತ್ರ ಮಾಡುತ್ತಿದೇನೆಂದು ಗೊಂದಲವಾಗಿತ್ತಂತೆ. ಚಿತ್ರದ ಬಗ್ಗೆ ಮಾತನಾಡುವ ಅವರು, “ಕಮರ್ಷಿಯಲ್‌ ಸಿನಿಮಾಗಳ ವರ್ಷಕ್ಕೆ ನೂರಕ್ಕೆ ಹೆಚ್ಚು ಬರುತ್ತವೆ. ಇಂತಹ ಸಿನಿಮಾಗಳು ವರ್ಷಕ್ಕೆ ಒಂದೋ, ಎರಡೋ ಬರೋದು ಹೆಚ್ಚು. ಈ ತರಹದ ಸಿನಿಮಾ ನಿರ್ಮಾಣ ಮಾಡಿ¨ ‌ ನಿರ್ಮಾಪಕರ ಧೈರ್ಯ ಮೆಚ್ಚಬೇಕು. ನಿರ್ದೇಶಕರು ಬಂದು ಕಥೆ ಹೇಳಿದಾಗ ಈ ತರಹದ ಪಾತ್ರ ಮಾಡಲು ಸಾಧ್ಯನಾ ಎಂದು ಯೋಚಿಸಿದೆ. ಆಮೇಲೆ ನಾಟಕ
ನೋಡಿ, ಆ ಕಲಾವಿದರಿಂದಲೂ ಸಲಹೆ ಪಡೆದೆ. ಇಲ್ಲಿ ಮೂರು ಶೇಡ್‌ನ‌ಲ್ಲಿ ಕಾಣಿಸಿಕೊಂಡಿದ್ದೇನೆ. ಪ್ರತಿ ಪಾತ್ರಕ್ಕೆ ಬಾಡಿ ಲಾಂಗ್ವೇಜ್‌ ಭಿನ್ನವಾಗಿದೆ’ ಎಂದು ಪಾತ್ರದ ಬಗ್ಗೆ ಹೇಳಿಕೊಂಡರು ಯಶಸ್‌ ಸೂರ್ಯ.

ನಾಯಕಿ ನಿಮಿಕಾ ರತ್ನಾಕರ್‌ಗೆ ಇದು ಮೊದಲ ಕನ್ನಡ ಸಿನಿಮಾ. ಮೊದಲ ಚಿತ್ರದಲ್ಲೇ ನಟನೆಗೆ ಅವಕಾಶವಿರುವ ಪಾತ್ರ ಸಿಕ್ಕ ಖುಷಿಹಂಚಿಕೊಂಡರು ನಿಮಿಕಾ. ಚಿತ್ರದಲ್ಲಿ ಅವರದ್ದು ಕೂಡಾ ಮೂರು ಶೇಡ್‌ನ‌ ಪಾತ್ರವಂತೆ. ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ ವೀರ್‌ ಸಮರ್ಥ್, ಸಂಭಾಷಣೆಕಾರ ಬಸವರಾಜ್‌ ಸೂಳೇರಿಪಾಳ್ಯ ಸೇರಿದಂತೆ ಚಿತ್ರತಂಡದ ಸದಸ್ಯರು ತಮ್ಮ ಅನುಭವ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next