Advertisement

ಕೋವಿಡ್ ನಿಯಂತ್ರಣಕ್ಕಾಗಿ ವ್ಯಾಪಾರಕ್ಕೆ ಸ್ವಯಂ ನಿರ್ಬಂಧ

05:51 PM Jul 04, 2020 | Naveen |

ಕಂಪ್ಲಿ: ಮಹಾಮಾರಿ ಕೋವಿಡ್ ವೈರಸ್‌ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಕಂಪ್ಲಿ ಪಟ್ಟಣದಲ್ಲಿ ಸ್ವಯಂಪ್ರೇರಿತವಾಗಿ ವ್ಯಾಪಾರ ವಹಿವಾಟು ಅವಧಿಯನ್ನು ಕಡಿಮೆ ಮಾಡಲು ಸ್ಥಳೀಯ ವರ್ತಕರು ನಿರ್ಧಾರ ಕೈಗೊಂಡಿದ್ದಾರೆ.

Advertisement

ತಾಲೂಕು ವರ್ತಕರ ಸಂಘದ ಅಧ್ಯಕ್ಷ ಜಿ.ವಿ. ಸತ್ಯನಾರಾಯಣಬಾಬು ಮಾತನಾಡಿ, ಕಂಪ್ಲಿ ತಾಲೂಕಿನಲ್ಲಿ ಕೋವಿಡ್ ವೈರಸ್‌ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುಂಜಾಗ್ರತೆಯಾಗಿ ಕಿರಾಣಿ,ಬಟ್ಟೆ, ಚಿನ್ನಾಭರಣ, ಕಬ್ಬಿಣ, ಸ್ಟೇಷನರಿ, ಸಗಟು ವ್ಯಾಪಾರ ಏಜನ್ಸಿಯವರು ಸೇರಿದಂತೆ ಎಲ್ಲ ವ್ಯಾಪಾರಸ್ಥರು ಜು. 3ರಿಂದ ಜು. 15ರವರೆಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ತಮ್ಮ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ನಡೆಸುವಂತೆ ಮತ್ತು ಪ್ರತಿ ಭಾನುವಾರ ಸಂಪೂರ್ಣ ರಜೆ ಘೋಷಣೆ ಮಾಡುವಂತೆ ಎಲ್ಲಾ ವರ್ತಕರಲ್ಲಿ ಮನವಿ ಮಾಡಿದರಲ್ಲದೆ ವ್ಯಾಪಾರ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹಾಗೂ ಈ ಬಗ್ಗೆ ಗ್ರಾಹಕರಲ್ಲಿಯೂ ಜಾಗೃತಿ ಮೂಡಿಸುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ವರ್ತಕರಾದ ಜಿ. ರಾಜಾರಾವು, ಡಿ.ವಿ.ಸುಬ್ಬರಾವು, ಮುರಳೀಧರ, ಡಿ. ಮೌನೇಶ್‌, ಜಗದೀಶ್‌ ರಾಯ್ಕರ್‌, ರಾಮಲಾಲ್‌, ಯಣ್ಣಿ ವೆಂಕಟೇಶ್‌, ವೈ. ವಿಜಯಕುಮಾರ್‌, ಆತ್ಮರಾಮ್‌ ಖಂಡೇಲವಾಲ್‌, ಮಹಾವೀರ, ನವೀನ್‌ ಬಾಗ್ರೇಚಾ, ಉಗಾದಿ ಶಿವರಾಜ್‌, ಕೇಶವ್‌, ಸೋಮನಗೌಡ ಇದ್ದರು.

ಜಾರಿಯಾಗದ ಸ್ವಯಂ ನಿರ್ಬಂಧ: ವರ್ತಕ ಸಂಘದವರು ಮಾಡಿದ ಮನವಿ ಶುಕ್ರವಾರ ಪಟ್ಟಣದಲ್ಲಿ ಸಂಪೂರ್ಣವಾಗಿ ಜಾರಿಯಾಗಿರಲಿಲ್ಲದಿರುವುದು ಸಂಜೆ ಮುಖ್ಯ ರಸ್ತೆಯಲ್ಲಿ ಕಂಡು ಬಂತು. ಪಟ್ಟಣದ ಹಲವು ಕಿರಾಣಿ ಅಂಗಡಿಗಳು, ಮೊಬೈಲ್‌ ಅಂಗಡಿಗಳು ಸೇರಿದಂತೆ ಇತರೆ ಅಂಗಡಿಗಳು ತೆರದಿರುವುದು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next