Advertisement
ಪಟ್ಟಣದ ಬಾದನಹಟ್ಟಿ ಗ್ರಾಮದಲ್ಲಿ ರೆಡ್ಡಿ ಸಮುದಾಯದ ಹಾಗೂ ಗ್ರಾಮದ ವಿವಿಧ ಮುಖಂಡರು ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ, ಅದಕ್ಕೆ ಬೆಂಬಲ ನೀಡುವೆ ಹೊರೆತು ಬೇರೆ ಪಕ್ಷಕ್ಕೆ ಬೆಂಬಲ ನೀಡಲ್ಲ. 2023 ವಿಧಾನಸಭಾ ಚುನಾವಣೆಯಲ್ಲಿ ಕಂಪ್ಲಿ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ನೀಡುತ್ತೋ ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಆದರೆ ಯಾವ ಅಭ್ಯರ್ಥಿಗೆ ಟಿಕೆಟ್ ನೀಡುತ್ತೋ ಕಾದು ನೋಡಿ ಬೆಂಬಲ ನೀಡುವೆ. ಈಗಲೇ ಏನು ಅಂತ ಹೇಳೋಕೆ ಆಗಲ್ಲ ಎಂದು ಹೇಳಿದರು.
Related Articles
Advertisement
ಅಲ್ಲದೆ ರೆಡ್ಡಿ ಹುಟ್ಟುಹಬ್ಬ ಡಿ.5 ಕ್ಕೆ ಕುರುಗೋಡಲ್ಲಿ ಅದ್ದೂರಿಯಾಗಿ ಜರುಗಿತು. ಅನಂತರ ಡಿ.7 ರಂದು ಕೂಡ ಬಾದನಹಟ್ಟಿಯಲ್ಲಿ ಅದ್ದೂರಿಯಾಗಿ ಜರುಗಿತು. ಇದರಲ್ಲಿ ಕಾಂಗ್ರೆಸ್, ಬಿಜೆಪಿ, ಸೇರಿದಂತೆ ವಿವಿಧ ಪಕ್ಷದ ಮುಖಂಡರಗಳು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದು, ಇದರಿಂದ ಕ್ಷೇತ್ರದ ಜನರಲ್ಲಿ ಕುತೂಹಲ ಉಂಟಾಗಿದ್ದು, ಸಧ್ಯ ರೆಡ್ಡಿ ನಡೆ ನಿಗೂಢವಾಗಿದೆ ಎಂಬ ವಿಷಯ ಕ್ಷೇತ್ರದ ರಾಜಕೀಯ ವಲಯದಲ್ಲಿ ಕಂಡು ಬರುತ್ತಿದೆ.
ಇನ್ನೊಂದು ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ಭವಿಷ್ಯ ಸೂರ್ಯನಾರಾಯಣ ರೆಡ್ಡಿ ಕೈಯಲ್ಲಿದೆ ಎಂಬ ಮಾತುಗಳು ಎಲ್ಲಂದರಲ್ಲಿ ಕೇಳಿಬರುತ್ತಿದೆ. ಆದ್ರೂ ಹಾಲಿ ಶಾಸಕ ಗಣೇಶ್ ಮತ್ತು ರೆಡ್ಡಿ ಅಸಮಾಧಾನ ವಾಗಿರುವ ಕಾರಣ ಬೇರೆ ಪಕ್ಷದ ಅಭ್ಯರ್ಥಿಗಳ ಪರ ಅಧಿಕಾರ ವಾಲುವ ಸನ್ನಿವೇಶ ಸ್ಪಷ್ಟವಾಗಿ ಕಂಡುಬರುತ್ತಿದೆ.
ಪ್ರಾರಂಭದಲ್ಲಿ ಬಾದನಹಟ್ಟಿ ಗ್ರಾಮದ ಮುಖ್ಯ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕ್ಕೆ ಸಮಾವೇಶಗೊಂಡಿತು.
ಈ ಸಂದರ್ಭದಲ್ಲಿ ಸಣ್ಣ ವಿರಾರೆಡ್ಡಿ, ತಿಮ್ಮಾರೆಡ್ಡಿ, ಹನುಮಂತ ರೆಡ್ಡಿ, ಲೋಕರೆಡ್ಡಿ, ರಾಮರೆಡ್ಡಿ, ಕೋಟರೆಡ್ಡಿ, ಶಿವ ರೆಡ್ಡಿ, ಸುರೇಶ್ ರೆಡ್ಡಿ, ಜನಾರ್ದನ ರೆಡ್ಡಿ, ಗಂಜಿ ಸೀತಾರಾಮ್ ರೆಡ್ಡಿ, ಚಂದ್ರ ರೆಡ್ಡಿ, ರಮೇಶ್ ರೆಡ್ಡಿ, ಗಿರೀಶ್ ರೆಡ್ಡಿ ಸೇರಿದಂತೆ ಅಭಿಮಾನಿಗಳು, ಮುಖಂಡರು ಇದ್ದರು.