Advertisement
ಆರಂಭದಲ್ಲಿ ಪುರಸಭೆ ಕಟ್ಟಡದಲ್ಲಿ ಆರಂಭವಾದ ಈ ಗ್ರಂಥಾಲಯ, ಮುದ್ದಾಪುರ ರಸ್ತೆಯ ಪುರಸಭೆ ಮಾಜಿ ಅಧ್ಯಕ್ಷ ಎಂ. ಪಂಪಣ್ಣವರ ಕಟ್ಟಡಕ್ಕೆ ನಂತರ ಆರ್‌ಎಸ್‌ಎಸ್‌ಎನ್ ಸೊಸೈಟಿ ಕಟ್ಟಡಕ್ಕೆ, ಅಲ್ಲಿಂದ ಪಟ್ಟಣದ ಮುಖ್ಯಬೀದಿಯ ಕಲ್ಗುಡಿ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡಿತ್ತು.
Related Articles
Advertisement
ಗ್ರಂಥಾಲಯಕ್ಕೆ 10 ಕನ್ನಡ ದಿನಪತ್ರಿಕೆಗಳು, 2 ಆಂಗ್ಲ ಪತ್ರಿಕೆಗಳು, 4 ವಾರಪತ್ರಿಕೆಗಳು, 7 ಮಾಸಪತ್ರಿಕೆಗಳು ಬರುತ್ತಿವೆ. ಗ್ರಂಥಾಲಯದಲ್ಲಿ 1505 ಸದಸ್ಯರಿದ್ದು, ಪ್ರತಿದಿನ 100ಕ್ಕೂ ಅಧಿಕ ಓದುಗರು ಬರುತ್ತಾರೆ. ಗ್ರಂಥಾಲಯದಲ್ಲಿ ಎರಡು ಕೊಠಡಿಗಳಿದ್ದು, ರ್ಯಾಕ್‌ಗಳ ಜತೆಗೆ 24 ಚೇರ್‌ಗಳಿದ್ದು, 5 ಟೇಬಲ್‌ಗಳು ಮಾತ್ರ ಇವೆ. 24 ಜನಗಳು ಮಾತ್ರ ಕುಳಿತು ಓದಲು ಅವಕಾಶವಿದ್ದು, ಇತರೆ ಓದುಗರು ಹೊರಗೆ ನಿಂತು ಓದಬೇಕು. ಗ್ರಂಥಾಲಯಕ್ಕೆ ಬರುವವರಿಗೆ ಪೂರಕ ವಾತಾವರಣವೇ ಇಲ್ಲದಂತಾಗಿದೆ.
ದಾನಿಗಳ ಕೊಡುಗೆ ಮೂಲೆ ಸೇರಿವೆ: ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಪಟ್ಟಣದ 5-6 ಜನ ದಾನಿಗಳು ಗಣಕ ಯಂತ್ರ ಹಾಗೂ ಇತರೆ ಸಾಮಾನು ಕೊಡಿಸಿದ್ದರು. ಆದರೆ ಅವುಗಳನ್ನು ಸಮರ್ಪಕವಾಗಿ ಉಪಯೋಗಿಸಲು ಆಗದೇ ಅವುಗಳು ಸಹಿತ ಮೂಲೆ ಸೇರಿವೆ.
ಸಿಬ್ಬಂದಿ ಕೊರತೆ: ಈ ಗ್ರಂಥಾಲಯಕ್ಕೆ ಸಿಬ್ಬಂದಿ ಕೊರತೆಯೂ ಕಾಡುತ್ತಿದ್ದು, ಇದ್ದ ಗ್ರಂಥಪಾಲಕರು 2018ರಲ್ಲಿ ಬೇರೆಡೆಗೆ ವರ್ಗಾವಣೆಗೊಂಡಿದ್ದಾರೆ. ಕಳೆದ 11 ತಿಂಗಳಿನಿಂದ ಕಾಯಂ ಗ್ರಂಥಾಲಯ ಸಾವರ್ತಿ ಮತ್ತು ಗುತ್ತಿಗೆ ಆಧಾರದ ಗ್ರಂಥಾಲಯ ಸಹಾಯಕ ಗ್ರಂಥಾಲಯ ನಡೆಸಿಕೊಂಡು ಹೋಗುತ್ತಿದ್ದಾರೆ. ಇನ್ನು ನಾಲ್ಕು ಸಿಬ್ಬಂದಿ ಕೊರತೆ ಕಾಡುತ್ತಿದೆ.
ಪಿಯುಸಿ, ಪದವಿ ತರಗತಿ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಓದಲು ಬರುತ್ತಾರೆ. ಅವರೆಲ್ಲರೂ ತಮ್ಮ ಪಠ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಕೇಳುತ್ತಾರೆ. ಅವರಿಗೆ ಇತ್ತೀಚಿನ ಪುಸ್ತಕಗಳು ಬೇಕು. ಬಡ ವಿದ್ಯಾರ್ಥಿಗಳು ಸಿಇಟಿ ಪುಸ್ತಕಗಳನ್ನು ಕೇಳುತ್ತಿದ್ದಾರೆ, ಅವುಗಳನ್ನು ಒದಗಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲ. ಸರ್ಕಾರ ಈ ನಿಟ್ಟಿನಲ್ಲಿ ಆಲೋಚಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪುಸ್ತಕಗಳನ್ನು ಒದಗಿಸಬೇಕು ಎನ್ನುವುದು ಅನೇಕ ಓದುಗರ ಆಗ್ರಹ. ಸ್ವಂತ ಕಟ್ಟಡ, ಸಿಬ್ಬಂದಿ, ಕಂಪ್ಯೂಟರ್, ಟೇಬಲ್, ಕುರ್ಚಿ, ರ್ಯಾಕ್ ಕೊರತೆ ಸೇರಿದಂತೆ ಅನೇಕ ಕೊರತೆ ಅನುಭವಿಸುತ್ತಿರುವ ಈ ಗ್ರಂಥಾಲಯಕ್ಕೆ ಅನುದಾನ ನೇರವಾಗಿ ಬರುವುದಿಲ್ಲ.
ಏನಿದ್ದರೂ ಜಿಲ್ಲಾ ಕೇಂದ್ರ ಗ್ರಂಥಾಲಯದಿಂದ ಬರುತ್ತವೆ. ಅಲ್ಲಿಂದಲೇ ಎಲ್ಲ ಕೆಲಸಗಳು ನಡೆಯಬೇಕು ಎನ್ನುತ್ತಾರೆ ಕೇಂದ್ರದ ಅಟೆಂಡರ್.