Advertisement

ಮೂರು ವರ್ಷದಲ್ಲಿ ಕಂಪ್ಲಿ ಮಾದರಿ ಕ್ಷೇತ್ರ

03:11 PM Jan 27, 2020 | Naveen |

ಕಂಪ್ಲಿ: ಮುಂದಿನ ಮೂರು ವರ್ಷಗಳಲ್ಲಿ ಕಂಪ್ಲಿ ಕ್ಷೇತ್ರದ ಎರಡು ತಾಲೂಕುಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಕ್ಷೇತ್ರವನ್ನು ಮಾದರಿ ಪಟ್ಟಣವನ್ನಾಗಿ ರೂಪಿಸಲಾಗುವುದು ಎಂದು ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ ತಿಳಿಸಿದರು.

Advertisement

ಅವರು ಪಟ್ಟಣದ ಕುರುಗೋಡು ರಸ್ತೆಯ ನೀರಾವರಿ ಇಲಾಖೆ ಆವರಣದಲ್ಲಿರುವ ಕಟ್ಟಡದಲ್ಲಿ ಹೊಸ ತಾಲೂಕು ಪಂಚಾಯ್ತಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ, ಹೊಸ ತಾಲೂಕು ಪಂಚಾಯ್ತಿ ಕಚೇರಿ ಆರಂಭದಿಂದ ದೂರದ ಹೊಸಪೇಟೆಗೆ ಅಲೆದಾಡುವುದು ತಪ್ಪಿದಂತಾಗಿದೆ. ಈಗಾಗಲೇ ಕಂಪ್ಲಿ ಮಿನಿ ವಿಧಾನಸೌಧಕ್ಕೆ ರಾಜ್ಯ ಸರ್ಕಾರದಿಂದ 10 ಕೋಟಿ ರೂ. ಹಾಗೂ ಡಿಎಂಎಫ್‌ನಿಂದ 5 ಕೋಟಿ ರೂ. ಸೇರಿದಂತೆ 15 ಕೋಟಿ ರೂ. ಅನುದಾನ ಮುಂಜೂರಾಗಿದ್ದು, ಇನ್ನೂ ಒಂದು ತಿಂಗಳಲ್ಲಿ ಕಟ್ಟಡ ಕಾಮಗಾರಿಗೆ ಚಾಲನೆ ಸಿಗಲಿದೆ. ನೂರು ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಮಂಜೂರಾತಿ ಸಿಗಲಿದೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯ ಕೆ. ಶ್ರೀನಿವಾಸರಾವ್‌, ತಾಪಂ ಅಧ್ಯಕ್ಷೆ ಜೋಗದ ನೀಲಮ್ಮ ಪಂಚಪ್ಪ, ಉಪಾಧ್ಯಕ್ಷ ಮಜ್ಗಿ ಶಿವಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಷಣ್ಮುಕಪ್ಪ, ಸದಸ್ಯರಾದ ಜಗದೀಶಗೌಡ, ಓಬಳೇಶ್‌, ಎಚ್‌. ಈರಣ್ಣ, ಶಿವಮೂರ್ತಿ, ವೆಂಕಟರಾಜು, ಉಮಾದೇವಿ, ಹನುಮಕ್ಕ, ಗಾದಿಲಿಂಗಪ್ಪ, ಪುರಸಭೆ ಸದಸ್ಯರಾದ ಭಟ್ಟ ಪ್ರಸಾದ್‌, ವೀರಾಂಜಿನೀಯಲು, ಇಒ ಶ್ರೀಕುಮಾರ್‌, ಕಂಪ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಇಟಿಗಿ ಬಸವರಾಜಗೌಡ, ಮುಖಂಡರಾದ ಬಿ.ನಾರಾಯಣಪ್ಪ, ರಾಮನಾಯ್ಡು, ಕರಿಬಸವಗೌಡ, ಹಬೀಬ್‌ ರೆಹಮಾನ್‌, ಜಾಫರ್‌, ರಾಘವೇಂದ್ರ, ಮಾವಿನಹಳ್ಳಿ ಬಸವರಾಜ, ಎಮ್ಮಿಗನೂರು, ನೆಲ್ಲುಡಿ, ಸಣಾಪುರ, ರಾಮಸಾಗರ, ನಂ10 ಮುದ್ದಾಪುರ, ಮೆಟ್ರಿ, ದೇವಸಮುದ್ರ, ದೇವಲಾಪುರ, ಹಂಪಾದೇವನಹಳ್ಳಿ, ಸುಗ್ಗೇನಹಳ್ಳಿ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳು, ಕಾರ್ಯದರ್ಶಿಗಳು, ಹಾಲಿ ಮಾಜಿ ಜನಪ್ರತಿ ನಿಧಿಗಳು ಅನೇಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next