Advertisement

ಕಮಲೇಶ್ ತಿವಾರಿ ಪತ್ನಿ ಹಿಂದೂ ಸಮಾಜ್ ಪಕ್ಷದ ನೂತನ ಅಧ್ಯಕ್ಷೆ

09:44 AM Oct 27, 2019 | Nagendra Trasi |

ಲಕ್ನೋ:ಇತ್ತೀಚೆಗೆ ಹತ್ಯೆಗೀಡಾಗಿದ್ದ ಕಮಲೇಶ್ ತಿವಾರಿ ಪತ್ನಿ ಕಿರಣ್ ತಿವಾರಿ ಅವರನ್ನು ಹಿಂದೂ ಸಮಾಜ್ ಪಕ್ಷದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಾಗಿ ವರದಿ ತಿಳಿಸಿದೆ.

Advertisement

ಅಕ್ಟೋಬರ್ 18ರಂದು ನಾಕಾ ಪ್ರದೇಶದಲ್ಲಿ ಹಿಂದೂ ಸಮಾಜ್ ಪಕ್ಷದ ಅಧ್ಯಕ್ಷರಾಗಿದ್ದ ಕಮಲೇಶ್ ತಿವಾರಿ ಮೇಲೆ ಗುಂಡಿನ ಹಾಗೂ ತಲವಾರ್ ದಾಳಿ ನಡೆಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಿವಾರಿ ಸಾವನ್ನಪ್ಪಿದ್ದರು.

ಆರೋಪಿಗಳಾದ ಅಶ್ಫಾಕ್ ಹುಸೈನ್ ಜಾಕೀರ್ ಹುಸೈನ್ (34ವರ್ಷ), ಮೋಯಿನುದ್ದೀನ್ ಖುರ್ಷಿದ್ ಪಠಾಣ್(27ವರ್ಷ)ನನ್ನು ಅಕ್ಟೋಬರ್ 22ರಂದು ಗುಜರಾತ್-ರಾಜಸ್ಥಾನ್ ಗಡಿಯಲ್ಲಿ ಗುಜರಾತ್ ಭಯೋತ್ಪಾದಕ ನಿಗ್ರಹ ದಳ ಬಂಧಿಸಿತ್ತು.

ತಿವಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ರಶೀದ್ ಪಠಾಣ್, ಫೈಝಾನ್ ಶೇಕ್ ಮತ್ತು ಮೌಲಾನಾ ಮೋಹ್ಸಿನ್ ಶೇಕ್ ಸೇರಿದಂತೆ ಮೂವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next