ಮಹಾಲಿಂಗಪುರ: ಆರಾಧ್ಯ ದೈವ ಮಹಾಲಿಂಗೇಶ್ವರ ಕೃಪೆ ಮತ್ತು ಪವಾಡಗಳಿಂದ ಮಹಾಲಿಂಗಪುರವು ಧಾರ್ಮಿಕ-ಸಾಂಸ್ಕೃತಿಕಪಟ್ಟಣವಾಗಿ ಇಂದಿಗೂ ಬೆಳಗುತ್ತಿದೆ. ಇಲ್ಲಿನಡೆಯುವ ಪ್ರತಿ ಆಚರಣೆ, ಪದ್ಧತಿಗಳು ಬಹಳಷ್ಟು ವಿಶೇಷವಾಗಿವೆ. ಪಟ್ಟಣದಲ್ಲಿ ಕಂಬಿ ಮಲ್ಲಯ್ಯನಐದೇಶಿ ಎರಡು ತಿಂಗಳು, ಕಾರ್ತಿಕೋತ್ಸವ ಒಂದೂವರೆ ತಿಂಗಳು ಮತ್ತು ಶ್ರಾವಣಮಾಸದ ಒಂದು ತಿಂಗಳು ಸೇರಿದಂತೆ ವರ್ಷದ12 ತಿಂಗಳಲ್ಲಿ ಕನಿಷ್ಠ 4 ರಿಂದ 5 ತಿಂಗಳ ಕಾಲಪಾರಂಪರಿಕ ಸಂಪ್ರದಾಯ, ಧಾರ್ಮಿಕನಂಬಿಕೆ, ರೂಢಿ, ಆಚಾರ-ಪದ್ಧತಿಗಳುಇಂದಿಗೂ ನಡೆದುಕೊಂಡು ಬರುತ್ತಿವೆ. ಈಎಲ್ಲ ಆಚರಣೆಗಳು ಮೂಢನಂಬಿಕೆಯಲ್ಲಬದಲಾಗಿ ಈ ನೆಲದ ದೈವ ಶಕ್ತಿ-ಭಕ್ತಿ,ಧಾರ್ಮಿಕ ಮನೋಭಾವ, ಸಾಂಸ್ಕೃತಿಕಹಿನ್ನೆಲೆಯಲ್ಲಿ ನಡೆದುಕೊಂಡು ಬರುತ್ತಿವೆ ಎನ್ನುವುದೇ ವಿಶೇಷ.
ಮನೆ-ಮನೆಗೆ ಮಲ್ಲಯ್ಯ: ಭಾರತಹುಣ್ಣಿಮೆಯ ದಿನ ಮಹಾಲಿಂಗೇಶ್ವರಮಠದಲ್ಲಿನ ಕಂಬಿಗೆ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಪೂಜಿ ಸಲ್ಲಿಸಿದ ನಂತರ ಕಂಬಿಯನ್ನುಹೊರ ತರಲಾಗುತ್ತದೆ. ಅಂದಿನಿಂದ ಕಂಬಿಮಲ್ಲಯ್ಯನ ಸಂಚಾರ ಆರಂಭವಾಗುತ್ತದೆ. ಅಂದಿನಿಂದ ಒಂದು ತಿಂಗಳ ಕಾಲ ಪಟ್ಟಣದ ಪ್ರತಿಯೊಬ್ಬರ ಮನೆಯಲ್ಲಿ ಮಲ್ಲಯ್ಯನಕಂಬಿ ಪೂಜೆ ನಡೆಯುತ್ತದೆ. ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಿಸಿ ತಮ್ಮ ಇಷ್ಟಾರ್ಥಗಳಪ್ರಾಪ್ತಿಗಾಗಿ ಬೇಡಿಕೊಳ್ಳುತ್ತಾರೆ. ಶ್ರೀಮಠದ ಸೇವಕರಾದ ಈಶ್ವರ ಮಠದ, ಸಿದ್ದಯ್ಯಮಠಪತಿ, ಶ್ರೀಶೈಲ ಮಠಪತಿ, ಗಿರಿಮಲ್ಲ ಕೈಪಾಳಿ, ಮಹಾಲಿಂಗ ಕೋಟಿ, ಸುಭಾಸ ಬಾಗೋಜಿ, ಮಲೀಕ ಬಸರಗಿ, ಪ್ರಮೋದ ಬಾಳಿಕಾಯಿ, ಸಂಗಪ್ಪ ಖೋತ, ಸಂತೋಷಶಿರೋಳ ಸೇರಿದಂತೆ ಶ್ರೀಮಠದ ಸೇವಕರು ತಿಂಗಳ ಕಾಲ ಮನೆ-ಮನೆಗೆ ಕಂಬಿ ಮಲ್ಲಯ್ಯನ ದರ್ಶನ ಮಾಡಿಸುತ್ತಾರೆ. ಇದೇ ಮಾರ್ಚ್ 29 ಸೋಮವಾರ ಬೆಳಗ್ಗೆ ಕಂಬಿಯೊಂದಿಗೆ ಭಕ್ತರು ಶ್ರೀಶೈಲಕ್ಕೆ ಪ್ರಯಾಣ ಬೆಳೆಸುತ್ತಾರೆ.
ಶ್ರೀಶೈಲಕ್ಕೆ ಪಾದಯಾತ್ರೆ: ಭಾರತಹುಣ್ಣಿಮೆಯಿಂದ ಮುಂಬರುವ ಹೋಳಿಹುಣ್ಣಿಮೆವರೆಗೂ ಕಂಬಿ ಮಲ್ಲಯ್ಯಪಟ್ಟಣದ ಪ್ರತಿ ಮನೆಗೆ ತೆರಳಿ ಭಕ್ತರಿಂದಪೂಜೆಗೊಳ್ಳುತ್ತಾನೆ. ಹೋಳಿ ಹುಣ್ಣಿಮೆಯ ಮರುದಿನ ಕಂಬಿ ಮಲ್ಲಯ್ಯನ ಶ್ರೀಶೈಲಪಾದಯಾತ್ರೆ ಆರಂಭವಾಗುತ್ತದೆ. ಅಂದಿನಿಂದ 15ದಿನಗಳ ಕಾಲ ಪಾದಯಾತ್ರೆ ಮೂಲಕ ಯುಗಾದಿ ಅಮಾವಾಸ್ಯೆಯ ಮುನ್ನಾದಿನ ಸುಕ್ಷೇತ್ರ ಶ್ರೀಶೈಲವನ್ನು ತಲುಪಿ, ಶ್ರೀಕ್ಷೇತ್ರ ದರ್ಶನ ಮುಗಿಸಿ ಯುಗಾದಿಯ ಪಾಡ್ಯೆಯ ಮರುದಿನ ಅಲ್ಲಿಂದ ಪಾದಯಾತ್ರೆ ಮೂಲಕ ಮಹಾಲಿಂಗಪುರಕ್ಕೆ ಮರಳುತ್ತಾರೆ.
ವಿಭಿನ್ನ ನಿಯಮ: ಕಂಬಿಯೊಂದಿಗೆಪಾದಯಾತ್ರೆ ಕೈಗೊಂಡ ಭಕ್ತರು ಸುಕ್ಷೇತ್ರ ಶ್ರೀಶೈಲ ದರ್ಶನ ನಂತರ ನೇರವಾಗಿ ಊರಿಗೆಮರಳುವಂತಿಲ್ಲ. ಕಂಬಿಯು ಪಾದಯಾತ್ರೆಮೂಲಕ ಊರಿಗೆ ಬರುವರೆಗೂ ಊರಿನಗಡಿ(ಸೀಮೆ)ಯಾಚೆಯ ರನ್ನಬೆಳಗಲಿ,ರಬಕವಿ, ಕೆಸರಗೊಪ್ಪ, ಢವಳೇಶ್ವರಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲೇವಾಸವಿರಬೇಕು. ಮುಖ್ಯವಾಗಿ ಮಲ್ಲಯ್ಯಕಂಬಿಯು ದವನದ ಹುಣ್ಣಿಮೆಯನಂತರ ಬರುವ ರವಿವಾರವೇ ಪುರ ಪ್ರವೇಶವಾಗಬೇಕು ಮತ್ತು ಪುರಪ್ರವೇಶನಂತರ ಸ್ಮಶಾನದಲ್ಲಿ ಅಡ್ಡ ಹಾಯ್ದುಚನ್ನಗೀರೇಶ್ವರ ದೇವಸ್ಥಾನ ತಲುಪಬೇಕೆಂಬ ನಿಯಮವಿದೆ.
ಚಂದ್ರಶೇಖರ ಮೋರೆ