Advertisement

ಕಮಂಡಲ ಬಿದ್ದು, ಕಾವೇರಿ ಹರಿದು…

07:21 PM Nov 22, 2019 | Lakshmi GovindaRaj |

ಮಳೆಯಿಲ್ಲದೆ, ದಕ್ಷಿಣ ಭಾರತದ ಪ್ರದೇಶಗಳಿಗೆ ಕ್ಷಾಮ ಎದುರಾಗುತ್ತದೆ. ಇಲ್ಲಿನ ಪ್ರಜೆಗಳ ಸಂಕಷ್ಟ ಅರಿತ ಅಗಸ್ತ್ಯ ಮುನಿಗಳು ಜೀವನದಿಯ ಸೃಷ್ಟಿಗಾಗಿ, ಕಮಂಡಲದಲ್ಲಿ ಗಂಗೆಯನ್ನು ಹಿಡಿದು, ದಕ್ಷಿಣದತ್ತ ಬರುತ್ತಾರೆ. ಹೀಗೆ ಅವರು ನದಿ ಸೃಷ್ಟಿಗೆ ಸೂಕ್ತ ಪ್ರದೇಶಕ್ಕಾಗಿ ಹುಡುಕಾಡು­ತ್ತಿರು­ವುದನ್ನು ಗಣೇಶನು, ಬಾಲಕನಾಗಿ ವೇಷ ಮರೆಸಿ­ಕೊಂಡು ನೋಡುತ್ತಿ­ ರುತ್ತಾನೆ. ಭಾಗಮಂಡಲದ ಸಮೀಪ ಬಂದಾಗ, ಅಗಸ್ತ್ಯರಿಗೆ ಶೌಚದ ಅವಸರವಾಗುತ್ತದೆ. ಆಗ ಅವರು ಬಾಲಕನ ಕೈಯಲ್ಲಿ ಕಮಂಡಲ ಕೊಟ್ಟು, ಹೋಗುತ್ತಾರೆ. ಬಾಲಕ ಕಮಂಡಲವನ್ನು ನೆಲದ ಮೇಲೆ ಇಟ್ಟಾಗ, ಕಾಗೆ ಬಂದು, ಅದನ್ನು ಬೀಳಿಸುತ್ತದೆ. ಗಣೇಶನ ಆಶಯದಂತೆ, ಅಲ್ಲಿ ಗಂಗೆಯ ಉಗಮವಾಗುತ್ತದೆ. ಅದೇ ಇಂದಿನ “ತಲಾಕಾವೇರಿ’ ಎನ್ನುವುದು ಪುರಾಣ ಪ್ರತೀತಿ. ಕಾವೇರಿ ಹುಟ್ಟಿದ ಈ ಸ್ಥಳದಲ್ಲಿ ಇಂದಿಗೂ ಪೂಜೆಗಳು ನಡೆಯುತ್ತವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next