Advertisement

ಕಮಲ್‌ನಾಥ್‌ ಎಐಸಿಸಿ ಅಧ್ಯಕ್ಷ?

11:41 PM Jul 15, 2021 | Team Udayavani |

ಹೊಸದಿಲ್ಲಿ: ಗಾಂಧಿ ಕುಟುಂಬದ ನಂಬಿಕಸ್ತ, ಕಾಂಗ್ರೆಸ್‌ ಹಿರಿಯ ನಾಯಕ ಕಮಲ್‌ನಾಥ್‌ ಅವರಿಗೆ ಎಐಸಿಸಿ ಅಧ್ಯಕ್ಷ ಗಾದಿ ಒಲಿಯುವುದೇ?  ಇಂಥದ್ದೊಂದು ಮಾತು ದಿಲ್ಲಿ  ರಾಜಕಾರಣದ ಪಡಸಾಲೆಯಲ್ಲಿ ಓಡಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ, ಕಮಲ್‌ನಾಥ್‌ ಅವರು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.

Advertisement

ಎಲ್ಲವೂ ಅಂದುಕೊಂಡಂತಾಗಿದ್ದರೆ ಇಷ್ಟೊತ್ತಿಗೆ ಎಐಸಿಸಿ ಅಧ್ಯಕ್ಷ ಗಾದಿಗೆ ಆಂತರಿಕ ಚುನಾವಣೆ ನಡೆಯಬೇಕಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಈ ಚುನಾವಣೆ ನಡೆದಿಲ್ಲ. ಆಗಸ್ಟ್‌ನಲ್ಲಿ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಅತ್ತ ರಾಹುಲ್‌ ಗಾಂಧಿ ಅವರು ಮತ್ತೆ ಅಧ್ಯಕ್ಷ ಗಾದಿ ವಹಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದು, ಹೀಗಾಗಿ, ಗಾಂಧಿ ಕುಟುಂಬಕ್ಕೆ ತೀರಾ ಆಪ್ತರೆನಿಸಿರುವ ಕಮಲ್‌ನಾಥ್‌ರನ್ನೇ ನೇಮಕ ಮಾಡುವ ಸಂಭವವಿದೆ ಎನ್ನಲಾಗುತ್ತಿದೆ.

ಒಂದು ವೇಳೆ ಎಐಸಿಸಿ ಅಧ್ಯಕ್ಷರಾಗದಿದ್ದರೆ, ಕಾರ್ಯಾಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಗಳೂ ಇವೆೆ. ಕಮಲ್‌ನಾಥ್‌ ಅವರ ನೇಮಕದ ಚಿಂತನೆ ಬೆನ್ನ ಹಿಂದೆ ಪಕ್ಷದಲ್ಲಿ ಎದ್ದಿರುವ ಒಡಕನ್ನು ನಿವಾರಿಸುವ ತಂತ್ರಗಾರಿಕೆ ಇದೆ. ಕಮಲ್‌ನಾಥ್‌ ಅವರು, ಕಾಂಗ್ರೆಸ್‌ನಲ್ಲಿ ಬಂಡಾಯಗಾರರೆಂದು ಗುರುತಿಸಿಕೊಂಡಿರುವ ಜಿ23 ನಾಯಕರ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಸಾಮರ್ಥ್ಯ ಕಮಲ್‌ನಾಥ್‌ಗಿದೆ ಎಂಬುದು ಮೂಲಗಳ ಹೇಳಿಕೆ.

Advertisement

Udayavani is now on Telegram. Click here to join our channel and stay updated with the latest news.

Next