Advertisement

ಕಮಲನಗರ ನಾಮಫಲಕಕ್ಕೆ ಸೀಮಿತ

05:54 PM Sep 28, 2019 | Naveen |

ವೈಜಿನಾಥ ವಡ್ಡೆ
ಕಮಲನಗರ: ಕಮಲನಗರ ತಾಲೂಕು ಕೇಂದ್ರ ಅಧಿಕೃತ ಘೋಷಣೆಯಾಗಿ ಎರಡು ವರ್ಷಗಳು ಕಳೆದರೂ ಇಂದಿಗೂ ವಿವಿಧ ಇಲಾಖೆಗಳು ನೂತನ ತಾಲೂಕು ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ನೂತನ ತಾಲೂಕು ಕೇಂದ್ರ ಕೇವಲ ನಾಮಫಲಕಕ್ಕೆ ಮಾತ್ರ ಸೀಮಿತಗೊಂಡಿದೆ.

Advertisement

ಉದ್ದೇಶಿತ ನೂತನ ತಾಲೂಕು ಎಂದು ಘೋಷಣೆಯಾದ ಮೇಲೆ ಆಮೆಗತಿಯಲ್ಲಿ ಕಚೇರಿಗಳು ಆರಂಭವಾಗುತ್ತಿವೆ. ಸರ್ಕಾರದಿಂದ ಪೂರ್ಣ ಪ್ರಮಾಣದ ಅನುದಾನದ ಕೊರತೆಯಿಂದ ತಾಲೂಕಿನಲ್ಲಿರಬೇಕಾದ ಕಚೇರಿಗಳು, ಅಧಿಕಾರಿಗಳು, ಸಿಬ್ಬಂದಿಗಳ ನೇಮಕಾತಿ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ.

ರಾಜ್ಯ ಸರ್ಕಾರ ಆ.15ರಂದು ವಿವಿಧ ಇಲಾಖೆಗಳನ್ನು ಸ್ಥಾಪನೆ ಮಾಡಿ ಧ್ವಜಾರೋಹಣ ನೇರವರಿಸಬೇಕು ಎಂದು ಆದೇಶ ನೀಡಿದ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಖಾಲಿ ಕೋಣೆಗಳಲ್ಲಿ ಸಾಂಕೇತಿಕವಾಗಿ 21 ಕಚೇರಿಗಳ ನಾಮಫಲಕದೊಂದಿಗೆ ಧ್ವಜಾರೋಹಣ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ತಾಲೂಕಿನ ಜನರು ಹರ್ಷ ವ್ಯಕ್ತ ಪಡಿಸಿದರು. ಆದರೆ ಜನರ ನಿರೀಕ್ಷೆ ಹುಸಿಯಾಗಿದ್ದು, ಚಾಲನೆ ದೊರೆತ ಇಲಾಖೆಗಳು ಇಂದಿಗೂ ಕಾರ್ಯ ನಿರ್ವಹಿಸುತ್ತಿಲ್ಲ.

ವಿವಿಧ ಇಲಾಖೆಗಳಿಗೆ ಅಧಿ ಕಾರಿಗಳ ನೇಮಕಾತಿ ನಡೆದಿಲ್ಲ. ಸದ್ಯ ಕಂದಾಯ ಇಲಾಖೆ ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕಂದಾಯ ದಾಖಲೆಗಳಲ್ಲಿ ಕಮಲನಗರ ತಾಲೂಕು ಎಂದು ಸೇರಿಸಲಾಗಿದೆ. ಆದರೆ, ಹೊಸ ತಾಲೂಕಿಗೆ ಸೇರಿದ 54 ಗ್ರಾಮಗಳ ಜನರು ಹಳೆಯ ದಾಖಲೆಗಳು ಬೇಕಾದರೆ ಇಂದಿಗೂ ಕೂಡ ಔರಾದ ಪಟ್ಟಣಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ. ಅಲ್ಲದೆ, ಇನ್ನು ಕೆಲ ಗ್ರಾಮಗಳ ದಾಖಲೆಗಳು ಇಲ್ಲಿನ ಕಂದಾಯ ಕಚೇರಿಯಲ್ಲಿ ಲಭ್ಯ ಆಗುತ್ತಿಲ್ಲ. ತಹಶೀಲ್ದಾರ್‌ ಕಚೇರಿಯಲ್ಲಿ ಪೀಠೊ
ಪಕರಣಕ್ಕಾಗಿ 5 ಲಕ್ಷ ಅನುದಾನ ಬಂದಿದ್ದು, ಸಮರ್ಪಕವಾಗಿ ಬಳಕೆಯಾಗಿದೆ. ತಹಶೀಲ್ದಾರ್‌ ಕಚೇರಿಯಲ್ಲಿ ಒಂದು ತಹಶೀಲ್ದಾರ್‌ ಹುದ್ದೆ, 2 ಶಿರಸ್ತೇದಾರ್‌, 2 ಎಸ್‌ಡಿಸಿ, 1 ಎಫ್‌ಡಿಸಿ, 1 ಸಿಪಾಯಿ,
ನಾಡಕಚೇರಿಯ ಎಲ್ಲಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭೂಮಾಪನಾ ಇಲಾಖೆ, ಉಪಖಜಾನೆ, ಉಪನೋಂದಣಿ ಕಚೇರಿಗಳು ಸೇರಿದಂತೆ ವಿವಿಧ ಇಲಾಖೆಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ.

ತಾಲೂಕು ಕೇಂದ್ರಗಳಲ್ಲಿ ಇರಬೇಕಾದ ಎಲ್ಲಾ ಇಲಾಖೆ ಕಚೇರಿಗಳಿಗೆ ಅಧಿ ಕಾರಿ ಹಾಗೂ ಸಿಬ್ಬಂದಿ  ನೇಮಕ ಮಾಡಬೇಕು. ಕಚೇರಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಇಲ್ಲಿನ ಜನರು ಒತ್ತಾಯಿಸುತ್ತಿದ್ದಾರೆ.

Advertisement

ತಾಲೂಕು ರಚನೆಗಾಗಿ ರಾಜಶೇಖರ ನಾಗಮೂರ್ತಿ ಅಧ್ಯಕ್ಷರಾಗಿ, ಬಸವರಾಜ ಮಾಧವರಾವ್‌ ಪಾಟೀಲ ಕಾರ್ಯಾಧ್ಯಕ್ಷರಾಗಿ ಹೋರಾಟ ಸಮಿತಿ ರಚಿಸಿ ಅವಿರತ ಹೋರಾಟದೊಂದಿಗೆ ನೂತನ ತಾಲೂಕು ಕೇಂದ್ರವಾಗಿದೆ. ತಾಪಂ ಕಚೇರಿ ವ್ಯಾಪ್ತಿಗೆ 54 ಗ್ರಾಮಗಳು ಹಾಗೂ 14 ಗ್ರಾಪಂ ಒಳಪಟ್ಟಿವೆ. ಆದರೆ, ಇಂದಿಗೂ ಪಂಚಾಯತ ಕೆಲಸಕ್ಕೆ ಗ್ರಾಪಂ ಸಿಬ್ಬಂದಿ ಹಳೆ ಔರಾದ ತಾಲೂಕು ಕೇಂದ್ರಕ್ಕೆ ತೆರಳುವುದು ಅನಿವಾರ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next