ಸಿದ್ದಾಪುರ: ಅರೆಶಿರೂರುನಿಂದ ಕಮಲಶಿಲೆ ಮಾರ್ಗವಾಗಿ ಹೊಸಂಗಡಿ ಕಡೆಗೆ ಹೋಗುತ್ತಿರುವ ಮಿನಿ ಟೂರಿಸ್ಟ್ ಬಸ್ ಜ.16ರಂದು ಕಮಲಶಿಲೆ ಪಾರಿಯ ಇಳಿಜಾರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಘಟನೆ ಜರಗಿದೆ.
ಅರೆಶಿರೂರುನಲ್ಲಿ ಮದುವೆ ಮುಗಿಸಿಕೊಂಡು, ಹೊಸಂಗಡಿ ಕಡೆಗೆ ಬರುತ್ತಿರುವಾಗ ಈ ಘಟನೆ ನಡೆದಿದೆ. ಕಮಲಶಿಲೆ ಪಾರಿಯ ಇಳಿಜಾರು ರಸ್ತೆಯಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಚರಂಡಿಗೆ ಉರುಳಿದೆ. ಬಸ್‌ನಲ್ಲಿದ್ದ 15 ಮಂದಿ ಪ್ರಯಾಣಿಕರಲ್ಲಿ 8 ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಪ್ರಯಾಣಿಕರಲ್ಲಿ ಹೆಚ್ಚು ಗಂಭೀರವಾಗಿ ಗಾಯಗೊಂಡ ಇಬ್ಬರು ಕುಂದಾಪುರ ಖಾಸಗಿ ಆಸ್ಪತ್ರೆ ಹಾಗೂ 4 ಮಂದಿ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇನ್ನೂಳಿದವರು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ಇದನ್ನೂ ಓದಿ:ಪತ್ನಿಯ ಅಶ್ಲೀಲ ಫೋಟೋ, ವಿಡಿಯೋ ಸೆರೆಹಿಡಿದು ಬ್ಲ್ಯಾಕ್‌ಮೇಲ್ :ಪತ್ನಿಯಿಂದ ಠಾಣೆಗೆ ದೂರು
ಅಪಘಾತ ಸ್ಥಳ: ಕಮಲಶಿಲೆ ಕೊಲ್ಲೂರು ರಸ್ತೆಯಾದ ಹಳ್ಳಿಹೊಳೆ ಪಾರಿ ರಸ್ತೆಯು ತುಂಬಾ ಕಿರಿದಾದ ಹಾಗೂ ಇಳಿಜಾರುನಿಂದ ಕೂಡಿದ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರೂ ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿವೆ. ಆಗಾಗ ಅಪಘಾತಗಳು ನಡೆಯುತ್ತಿದ್ದರೂ, ರಸ್ತೆ ಮಾತ್ರ ಅಗಲಿಕರಣಗೊಂಡಿಲ್ಲ. ಈ ರಸ್ತೆ ಇಂದಿಗೂ ಓಬೆರಾಯನ ಕಾಲದ ರಸ್ತೆಯಾಗಿಯೇ ಉಳಿದಿದೆ. ರಸ್ತೆ ಅಗಲಿಕರಣಕ್ಕೆ ಅರಣ್ಯ ಇಲಾಖೆಯ ಆಕ್ಷೇಪವು ಇದೆ. ಜತೆಯಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷವು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.