ಕಮಲನಗರ: ಸುಮಾರು 400 ಜನಸಂಖ್ಯೆ ಇರುವ ಚಿಮ್ಮೇಗಾಂವ ತಾಂಡಾದಲ್ಲಿ ನೀರಿನ ಸಮಸ್ಯೆ ಉಲ್ಭಣವಾಗಿದ್ದು, ಟ್ಯಾಂಕರ್ ಮೂಲಕ ಸರಬರಾಜು ಮಾಡಿದರೂ ಸಮಸ್ಯೆ ನಿವಾರಣೆಯಾಗಿಲ್ಲ. ನೀರಿನ ಸಮಸ್ಯೆಗೆ ತಹಶೀಲ್ದಾರರೇ ಕಾರಣ ಎಂದು ಗ್ರಾಪಂ ಅಧ್ಯಕ್ಷೆ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಆರೋಪಿಸಿದ್ದಾರೆ.
ತಾಂಡಾದಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಬರ ಬರುವುದು ಸಾಮಾನ್ಯ. ಸಮಸ್ಯೆ ನಿವಾರಣೆಗೆ ಸರಕಾರ ಏನೆಲ್ಲಾ ಹರಸಾಹಸ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಅಂರ್ಜಲ ಮಟ್ಟ ಇಳಿಸು ಕೊಳವೆ ಬಾವಿಯಲ್ಲಿ ನೀರು ಬರುತ್ತಿಲ್ಲ. ಕೇವಲ ಒಂದು ಕೊಳವೆ ಬಾವಿಯಲ್ಲಿ ಮಾತ್ರ ಅಲ್ಪ ಪ್ರಮಾಣದ ನೀರು ಬರುತ್ತಿದ್ದು, ಅವರಿಂದ ತಾಂಡಾದಲ್ಲಿನ ತೆರೆದ ಬಾವಿಗೆ ಆ ನೀರು ಬಿಡಲಾಗಿದೆ.
ತೆರೆದ ಬಾವಿಯಿಂದ ನೀರು ಮೇಲೆತ್ತಿಸಿ ನಲ್ಲಿಗಳಿಂದ ಸರಬರಾಜು ಮಾಡಲಾಗುತ್ತಿದ್ದೆ. ಹಾಗೂ ಜಾನುವಾರುಗಳಿಗಾಗಿ ಪಕ್ಕದಲ್ಲಿ ಒಂದು ದೊಡ್ಡ ಟ್ಯಾಂಕ್ ನಿರ್ಮಿಸಲಾಗಿದೆ. ಅಲ್ಲದೇ ಜಲಕ್ಷಾಮ ಭೀಕರವಾಗಿದ್ದಕ್ಕೆ ಪಂಚಾಯತಿ ವತಿಯಿಂದ ಟ್ಯಾಂಕರ್ ಮೂಲಕ ಕೂಡ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಪಂ ಅಧ್ಯಕ್ಷರು ತಿಳಿಸಿದ್ದಾರೆ.
ಪಂಚಾಯತ ವತಿಯಿಂದ ಟ್ಯಾಂಕರ್ ನೀರು ಸರಬರಾಜು ಮಾಡಬೇಡಿ ಎಂದು ನೀರು ಪೂರೈಕೆಯ ಎಡಬ್ಲೂಇ ಹಾಗೂ ತಹಶೀಲ್ದಾರ್ ತಿಳಿಸಿದ್ದರಿಂದ ಟ್ಯಾಂಕರ್ ನೀರು ಪೂರೈಕೆ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ತಾಂಡಾದಲ್ಲಿ ನೀರಿಗೆ ಹಾಹಾಕಾರ ಇನ್ನೂ ಹೆಚ್ಚಾಗಿತ್ತು. ಕಾರಣ, ಟೆಂಡರ್ ಕರೆಯದೆ ಪಂಚಾಯತನಿಂದ ಟ್ಯಾಂಕರ್ ನೀರು ಸರಬರಾಜು ಮಾಡಲು ಬರುವುದಿಲ್ಲ ಎಂದು ಹೇಳಲಾಗಿತ್ತು. ಇದರಿಂದ ನಾಲ್ಕು ದಿನಗಳ ಕಾಲ ಜನರಿಗೆ ನೀರು ಸಿಕ್ಕಿರಲಿಲ್ಲ. ಈ ಕುರಿತು ಪತ್ರಿಕೆಗಳಲ್ಲಿ ವರದಿ ಪ್ರಕಟವಾದಾಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ, ಪಂಚಾಯತನವರು ಬಾಡಿಗೆಯಿಂದ ಪಡೆದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಎಂದು ತಿಳಿಸಿದ್ದಾರು. ಇದರಿಂದಾಗಿ ಈ ಗ ಮತ್ತೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಚಿಮ್ಮೇಗಾಂವ ತಾಂಡಾಕ್ಕೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯಕ್ಕೆ 1ಕಿ.ಮೀ. ಅಂತರದಲ್ಲಿರುವ ಭೋಪಾಳಗಡ ಕೆರೆಯ ನೀರನ್ನು ಪೈಪ್‌ಲೈನ್ ಮೂಲ ತಾಂಡಾದ ಬಾವಿಗೆ ತುಂಬಿಸಲು ಮುಂದಾಗಬೇಕು. ಈ ಕುರಿತು ಮೇಲಾಧಿಕಾರಿಗಳಿಗೆ ಲಿಖೀತ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಧ್ಯಕ್ಷರು ಆರೋಪಿಸಿದ್ದಾರೆ.
ಕಾಲು ಮುರಿದುಕೊಂಡ ಯುವಕ: ತೆರೆದ ಬಾವಿಯಿಂದ ನೀರು ತರಲು ಹೋಗಿದ್ದ ಯುವಕ ಬಬನ ಏಕನಾಥ ಕಾಲುಮುರಿದುಕೊಂಡಿದ್ದು, ಜಿಲ್ಲಾಡಳಿತ ಇವನ ನೆರವಿಗೆ ಮುಂದಾಗಬೇಕು. ಉದಗೀರದ ಕಲ್ಯಾಣೆ ಆಸ್ಪತ್ರೆಯಲ್ಲಿ ಈಗಾಗಲೇ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾನೆ. ಇದರಿಂದ ಬದುಕು ನಡೆಸುವುದು ಕಷ್ಟವಾಗಿದೆ ಎಂದು ಯುವಕನ ಪೋಷಕರು ಅಳಲು ತೊಡಿಕೊಂಡಿದ್ದಾರೆ.
ಪಂಚಾಯತ ಅಭಿವೃದ್ಧಿ ಅಧಿಕಾರಿ ಈ ಪ್ರಕರಣದಲ್ಲಿ ತನ್ನದಲ್ಲದ ತಪ್ಪಿಗೆ ಹರಕೆಯ ಕುರಿಯಾಗಿ ಅಮಾನತ್ತುಗೊಂಡಿದ್ದಾರೆ. ಅಲ್ಲದೇ ಪಂಚಾಯಿತಿಗೆ ಕೆಟ್ಟ ಹೆಸರು ಬಂದಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಶೀತಲ್ ಅನೀಲಕುಮಾರ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕಿದ್ದಾರೆ.