Advertisement

ರಾಜ್ಯದ ತುಂಬೆಲ್ಲಾ ಇಂದು “ಕಮಲ ಸಂದೇಶ ಬೈಕ್‌ ರ್ಯಾಲಿ’

02:33 AM Mar 02, 2019 | |

ಬೆಂಗಳೂರು: ಬಿಜೆಪಿ ಯುವ ಮೋರ್ಚಾ ವತಿಯಿಂದ ರಾಷ್ಟ್ರಾದ್ಯಂತ ಶನಿವಾರ “ಕಮಲ ಸಂದೇಶ ಬೈಕ್‌ ರ್ಯಾಲಿ’  ಆಯೋಜನೆಯಾಗಿದ್ದು, ಅದರಂತೆರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಬೈಕ್‌ ರ್ಯಾಲಿ ನಡೆಸಲು ಬಿಜೆಪಿ ಸಜ್ಜಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಭೋಪಾಲ್‌ನಲ್ಲಿ  ಹಾಗೂ ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷೆ ಪೂನಂ ಮಹಾ ಜನ್‌ ಅವರು ಮಥುರಾದಲ್ಲಿ ರ್ಯಾಲಿಗೆ ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರುಬೆಳಗ್ಗೆ 11 ಗಂಟೆಗೆ ತುಮಕೂರಿನಲ್ಲಿಬೈಕ್‌ ರ್ಯಾಲಿಗೆ ಚಾಲನೆ ನೀಡಲಿದ್ದಾರೆ.

Advertisement

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ಅವರು ಹುಬ್ಬಳ್ಳಿಯಲ್ಲಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ, ಶಾಸಕ ಸಿ.ಟಿ.ರವಿ ಅವರು ಚಿಕ್ಕಮಗಳೂರಿನಲ್ಲಿ,ಸಂಸದೆ ಶೋಭಾ ಕರಂದ್ಲಾಜೆ ಅವರು ತರೀಕೆರೆಯಲ್ಲಿ, ವಿಧಾನಸಭೆ ಪ್ರತಿಪಕ್ಷ ಉಪನಾಯಕ ಗೋವಿಂದ ಕಾರಜೋಳ ಅವರು ಮುಧೋಳ, ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಅವರುಕಲಬುರಗಿಯಲ್ಲಿ, ಸಂಸದ ಪ್ರತಾಪ್‌ ಸಿಂಹ ಅವರು ಪಿರಿಯಾಪಟ್ಟಣ ಹಾಗೂಮಾಜಿ ಸಚಿವ ಸಿ.ಎಂ.ಉದಾಸಿ ಅವರು ಹಾನಗಲ್‌ ಕ್ಷೇತ್ರದಲ್ಲಿ ಬೈಕ್‌ ರ್ಯಾಲಿಗೆ ಚಾಲನೆ ನೀಡಲಿದ್ದಾರೆ.

ಬೆಂಗಳೂರಿನಲ್ಲೂ ಬೈಕ್‌ ರ್ಯಾಲಿ: ಕೇಂದ್ರಸಚಿವ ಡಿ.ವಿ.ಸದಾನಂದಗೌಡ ಅವರು
ದಾಸರಹಳ್ಳಿಯಿಂದ ವಿದ್ಯಾರಣ್ಯಪುರದವರೆಗೆ ಬೈಕ್‌ ರ್ಯಾಲಿಗೆ ಚಾಲನೆಕೊಡಲಿದ್ದಾರೆ. ಮಾಜಿ ಉಪಮುಖ್ಯ ಮಂತ್ರಿ ಆರ್‌.ಅಶೋಕ್‌ ಅವರು ಜಯನಗರದ ಸೌತ್‌ಎಂಡ್‌ವೃತ್ತ, ಸಂಸದರಾದ ಪಿ.ಸಿ.ಮೋಹನ್‌, ರಾಜೀವ್‌  ‌ಚಂದ್ರಶೇಖರ್‌ ಅವರು ಚಿಕ್ಕಲಾಲ್‌ಬಾಗ್‌ ಬಳಿ ಹಾಗೂಶಾಸಕ ಅರವಿಂದ ಲಿಂಬಾವಳಿಯವರು ಬೆಳ್ಳಂದೂರು ಬಳಿ ಬೈಕ್‌ರ್ಯಾಲಿಗೆ ಚಾಲನೆನೀಡುವರು.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 1,000 ಬೈಕ್‌: ಪ್ರತಿ ಬೂತ್‌ನಲ್ಲಿ 3ರಿಂದ 5
ಮಂದಿಯನ್ನು ಬೈಕ್‌ ರ್ಯಾಲಿಗೆ ಕರೆ ತರುವಮೂಲಕ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಕನಿಷ್ಠ 1,000 ಬೈಕ್‌ಗಳಲ್ಲಿ ರ್ಯಾಲಿ ನಡೆಸಬೇಕು. ನಗರ ಪ್ರದೇಶದಲ್ಲಿ 30 ಕಿ.ಮೀ.ಹಾಗೂ ಗ್ರಾಮೀಣ ಪ್ರದೇಶದಲ್ಲಿ 100ರಿಂದ 130 ಕಿ.ಮೀ.ವರೆಗೆ ರ್ಯಾಲಿನಡೆಸಬೇಕು. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಜನರನ್ನು ಸೆಳೆಯಬೇಕು
ಎಂದು ಹಿರಿಯ ನಾಯಕರುಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ

Advertisement

Udayavani is now on Telegram. Click here to join our channel and stay updated with the latest news.

Next