Advertisement

ತಾಯಿಯಿಂದ ನನಗೆ ಹೋರಾಟ ಗುಣ: ಕಮಲಾ ಹ್ಯಾರಿಸ್‌

12:48 AM Aug 14, 2020 | mahesh |

ವಾಷಿಂಗ್ಟನ್‌: ಸಮಸ್ಯೆಗಳು ಎದುರಾದಾಗ ಸಮಸ್ಯೆಯ ಬಗ್ಗೆ ದೂರುತ್ತಾ ಕೂಡಬಾರದು. ಅದರ ಬದಲಾಗಿ, ಸಮಸ್ಯೆಯ ನಿವಾರಣೆಗಾಗಿ ಏನಾದರೂ ಪ್ರಯತ್ನಿಸಬೇಕು ಎಂಬುದನ್ನು ತಾವು ತನ್ನ ತಾಯಿಯಿಂದ ಕಲಿತಿರುವುದಾಗಿ, ಡೆಮಾಕ್ರಟಿಕ್‌ ಪಕ್ಷದಿಂದ ಅಮೆರಿಕ ಉಪಾಧ್ಯಕ್ಷ ಹುದ್ದೆಗೆ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್‌ ಹೇಳಿದ್ದಾರೆ.

Advertisement

ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ಅಮೆರಿಕದ ಡೆಲಿವರ್‌ನ ವಿಲಿ¾ಂಗ್ಟನ್‌ನಲ್ಲಿ ಮೊದಲ ಬಾರಿಗೆ ಸಾರ್ವಜನಿಕ ರ್ಯಾಲಿಯಲ್ಲಿ ಅವರು ಮಾತನಾಡಿ ದರು. ಜೀವನದಲ್ಲಿ ಪ್ರತಿಯೊಂದು ಸಮಸ್ಯೆಯ ವಿರುದ್ಧ ಹೋರಾಡುವ ಮನೋಭಾವವನ್ನು ನನ್ನ ತಾಯಿಯಾದ ಶ್ಯಾಮಲಾ ಗೋಪಾಲನ್‌ ಅವರಿಂದಲೇ ಕಲಿತೆ ಎಂದು ತಿಳಿಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಡೆಮಾಕ್ರಾಟಿಕ್‌ ಪಕ್ಷದ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಜೋ ಬೈಡೆನ್‌ ಇದ್ದರು.

“ನನ್ನ ತಾಯಿ ಶ್ಯಾಮಲಾ ತನ್ನ ಸಹೋದರಿ ಮಾಯಾಳನ್ನು ಹಾಗೂ ನನ್ನನ್ನು ಬೆಳೆಸಿದರು. ಪ್ರಗತಿಯತ್ತ ಮುನ್ನಡೆಯು ವುದನ್ನು ನಮಗೆ ಅವರು ಹೇಳಿಕೊಟ್ಟರು. ನನ್ನ ತಂದೆ ಜಮೈಕಾದವರು. ತಾಯಿ ಭಾರತದವರು. ವಿಶ್ವದ ಎರಡು ವಿರುದ್ಧ ದಿಕ್ಕಿನಿಂದ ಬಂದು ಅಮೆರಿಕದಲ್ಲಿ ಜೊತೆಯಾದವರು. ಅವರು ಜೊತೆಯಾಗಲು ಕಾರಣ, 1960ರಲ್ಲಿ ನಡೆದ ನಾಗರಿಕ ಹಕ್ಕುಗಳ ಚಳುವಳಿ. ಆ ದಿನಗಳಲ್ಲಿ ಅವರು, ರಸ್ತೆಗಳಲ್ಲಿ, ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಮುನ್ನಡೆದಿದ್ದುದು, ಇಂದಿಗೂ ಅನುರಣಿಸುತ್ತಿದೆ. ಇಂದಿಗೂ ಅಮೆರಿಕದ ಜನತೆಗೆ ಅಂಥ ಹೋರಾಟ ಸಾಗುತ್ತಿದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next