Advertisement

ಕೈಗೆ ಕಿಚ್ಚಿಟ್ಟ ವಿಡಿಯೋ

07:29 AM Nov 15, 2018 | Team Udayavani |

ಹೊಸದಿಲ್ಲಿ, /ಹೈದರಾಬಾದ್‌: ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಏರಲೇಬೇಕು ಎಂಬ ಹಠತೊಟ್ಟು ಹಿಂದುತ್ವದತ್ತ ವಾಲಿರುವ ಕಾಂಗ್ರೆಸ್‌ ಎಡವಟ್ಟು ಮಾಡಿಕೊಂಡಿದೆ. ಕೇಂದ್ರದ ಮಾಜಿ ಸಚಿವ ಕಮಲ್‌ನಾಥ್‌ ಮುಸ್ಲಿಂ ನಾಯಕರ ಜತೆಗಿನ  ಸಭೆಯಲ್ಲಿ “ಆರ್‌ಎಸ್‌ಎಸ್‌ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸದ್ಯಕ್ಕೆ ಮುಸ್ಲಿಂ ಜನಾಂಗ ಕಾಂಗ್ರೆಸ್‌ ಜತೆಗೆ ಇರಬೇಕು. ಫ‌ಲಿತಾಂಶದ ಬಳಿಕ ಹಿಂದೂಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂಬ ಮಾತುಗಳನ್ನು ಆಡಿದ್ದಾರೆ ಎಂದು ಹೇಳಲಾಗಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಬಿಜೆಪಿ ವಕ್ತಾರ ಸಂಭಿತ್‌ ಪಾತ್ರಾ ಅವರು ಬುಧವಾರ ಅದನ್ನು ಟ್ವೀಟ್‌ ಮಾಡಿದ್ದಾರೆ. ಜತೆಗೆ ಕಾಂಗ್ರೆಸ್‌ನ ನೈಜ ಬಣ್ಣ ಬಯಲಾಗಿದೆ ಎಂದು ಟೀಕಿಸಿದ್ದಾರೆ. ಹಿಂದೂಗಳ ಬಗ್ಗೆ ಕಾಂಗ್ರೆಸ್‌ ಛದ್ಮವೇಶದ ಪ್ರೀತಿ ಹೊಂದಿರು ವುದು ಸ್ಪಷ್ಟವಾಗಿದೆ ಎಂದು ಆರೋಪಿ ಸಿದ್ದಾರೆ. ಜನಿವಾರ ಧರಿಸಿದ್ದ ಕಾಂಗ್ರೆಸ್‌ ಅಧ್ಯ ಕ್ಷರ ಬಣ್ಣವೂ ಈಗ ಬಯಲಾಗಿದೆ ಎಂದಿದ್ದಾರೆ.

Advertisement

ಈ ಸಮಸ್ಯೆ ಸಾಲದು ಎಂಬಂತೆ “ಚುನಾ ವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಇರುವ ಮಹಿಳೆಯರಿಗೆ ಮಾತ್ರ’ ಟಿಕೆಟ್‌ ನೀಡ ಲಾಗಿದೆ ಎಂದು ಕಮಲ್‌ನಾಥ್‌ ಹೇಳಿರುವ ದೃಶ್ಯಾವಳಿಗಳೂ ಪ್ರಚಾರ ಪಡೆದಿವೆ. ಕೇವಲ ಮೀಸಲು ಅಥವಾ ಅಲಂಕಾರ (ಡೆಕೊ ರೇಷನ್‌)ಕ್ಕಾಗಿ ಯಾರಿಗೂ ಟಿಕೆಟ್‌ ನೀಡಿಲ್ಲ ವೆಂದು ಸುದ್ದಿಗೋಷ್ಠಿ ಯಲ್ಲಿ ಹೇಳಿದ್ದರು. 

ಗೆಹೊಟ್‌, ಪೈಲಟ್‌ ಸ್ಪರ್ಧೆ: ಇನ್ನು ರಾಜಸ್ಥಾನ ಚುನಾ  ವಣೆಗೆ ಸಂಬಂಧಿಸಿದಂತೆ ಅಚ್ಚರಿಯ ಬೆಳವಣಿಗೆ ನಡೆದಿದೆ. ಕಾಂಗ್ರೆಸ್‌ನಿಂದ ಮಾಜಿ ಮುಖ್ಯ ಮಂತ್ರಿ ಅಶೋಕ್‌ ಗೆಹೊಟ್‌ ಮತ್ತು ಲೋಕಸಭೆ ಸದಸ್ಯ ಸಚಿನ್‌ ಪೈಲಟ್‌ ಕಣಕ್ಕೆ ಇಳಿಯಲಿ ದ್ದಾರೆ ಎಂಬ ಘೋಷಣೆಯನ್ನು ಮಾಡ ಲಾಗಿದೆ. ಗೆಹೊಟ್‌ ಅವರೇ ನವ ದಿಲ್ಲಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಯಾವ ಕ್ಷೇತ್ರದಿಂದ ಇಬ್ಬರು ನಾಯಕರು ಕಣಕ್ಕೆ ಇಳಿಯಲಿದ್ದಾರೆ ಎಂಬ ವಿಚಾರ ಘೋಷಣೆ ಮಾಡಲಾಗಿಲ್ಲ. ಮತ್ತೂಂ ದೆಡೆ ರಾಜ ಸ್ಥಾನದ ದೌಸಾ ಲೋಕ ಸಭಾ ಕ್ಷೇತ್ರದ  ಬಿಜೆಪಿ ಸಂಸದ ಹರೀಶ್ಚಂದ್ರ ಮೀನಾ ಮತ್ತು ಶಾಸಕ ಹಬೀಬುರ್‌ ರೆಹಮಾನ್‌ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ದ್ದಾರೆ. ರೆಹ ಮಾನ್‌ ಹತ್ತು ವರ್ಷಗಳ ಹಿಂದೆ ಕಾಂಗ್ರೆಸ್‌ನಲ್ಲಿಯೇ ಇದ್ದರು. ಈ ಎರಡೂ ಬೆಳ ವಣಿಗೆಗಳಿಂದ ಪರಿಣಾಮ ಬೀರದು ಎಂದಿದೆ ಬಿಜೆಪಿ.

ಕೇಸುಗಳ ಹಿಂತೆಗೆತ: 
ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಹೋರಾಟ ನಡೆಸಿದವರ ವಿರುದ್ಧ ದಾಖಲಿಸಲಾಗಿದ್ದ ಕೇಸುಗಳನ್ನು ಹಿಂಪಡೆಯಲಾಗಿದೆ. ಹಂಗಾಮಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಸೇರಿದಂತೆ 1,130 ಮಂದಿ ವಿರುದ್ಧ ದಾಖ ಲಾಗಿದ್ದ ಕೇಸುಗಳನ್ನು ಹಿಂಪಡೆಯ ಲಾಗಿದೆ. ಅದಕ್ಕಾಗಿ ಸೋಮವಾರ ಮತ್ತು ಮಂಗಳವಾರವೇ ಎರಡು ಪ್ರತ್ಯೇಕ ಸರ್ಕಾರಿ ಆದೇಶ ಗಳನ್ನು ಹೊರಡಿಸಲಾಗಿತ್ತು. ಅದಕ್ಕೆ ಪೂರಕ ವಾಗಿ ಚಂದ್ರಶೇಖರ ರಾವ್‌ ಗಜ್ವಾಲ್‌ ವಿಧಾನ ಸಭಾ ಕ್ಷೇತ್ರದಿಂದ ನಾಮಪತ್ರವನ್ನು ಬುಧವಾರ ಸಲ್ಲಿಸಿದ್ದಾರೆ. ಅದಕ್ಕೂ ಮೊದಲು ತಿರುಪತಿಗೆ ತೆರಳಿ ಪೂಜೆ ಸಲ್ಲಿಸಿದ್ದರು. ಅವರ ವಿರುದ್ಧ ಕಾಂಗ್ರೆಸ್‌ನಿಂದ ವಂಟೇರು ಪ್ರತಾಪ್‌ ರೆಡ್ಡಿ ಅವರು ಸ್ಪರ್ಧಿಸಲಿದ್ದಾರೆ. ರೆಡ್ಡಿ ಯವರು ತೆಲಂಗಾಣ ದಲ್ಲಿನ ಪ್ರತಿಪಕ್ಷ ಗಳ ಒಕ್ಕೂಟದ ಅಭ್ಯರ್ಥಿಯೂ ಹೌದು.

ಸಿಬಂದಿ ಮೇಲೆ ನಕ್ಸಲ್‌ ದಾಳಿ
ರಾಯಪುರ: ಛತ್ತೀಸ್‌ಗಢದಲ್ಲಿ ಚುನಾವಣೆ ಕರ್ತವ್ಯ ಮುಗಿಸಿ ವಾಪಸಾಗುತ್ತಿದ್ದ ಐವರು ಭದ್ರತಾ ಸಿಬ್ಬಂದಿ, ನಾಗರಿಕರ ಮೇಲೆ ನಕ್ಸಲರು ಬಾಂಬ್‌ ದಾಳಿ ನಡೆಸಿದ್ದಾರೆ. ಬಿಜಾಪುರ ಜಿಲ್ಲೆಯ ಘಾಟಿಯಲ್ಲಿ ಸಂಭವಿಸಿದ ಈ ಘಟನೆಯಲ್ಲಿ 6 ಜನರು ಗಾಯಗೊಂಡಿದ್ದಾರೆ. ಸೋಮವಾರ ಮೊದಲ ಹಂತದ ಮತದಾನ ಕಾರ್ಯದಲ್ಲಿ ಭಾಗವಹಿಸಿದ ಬಿಎಸ್‌ಎಫ್ ಸಿಬ್ಬಂದಿ ಎರಡನೇ ಹಂತದ ಚುನಾವಣೆ ಸಿದ್ಧತೆಗಾಗಿ ದಮ¤ರಿ ಜಿಲ್ಲೆಗೆ ತೆರಳುತ್ತಿದ್ದರು. ಘಾಟಿ ಮೂಲಕ ತೆರಳುತ್ತಿದ್ದಾಗ ನಕ್ಸಲರು ರಸ್ತೆಯ ಅಡಿಯಲ್ಲಿ ಬಾಂಬ್‌ ಹುಗಿದಿಟ್ಟಿದ್ದರು. ಸ್ಫೋಟದ ನಂತರದಲ್ಲಿ ಭದ್ರತಾ ಸಿಬಂದಿ ಹಾಗೂ ನಕ್ಸಲರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ನಕ್ಸಲರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಭಾಗದಲ್ಲಿ ಶೋಧ ಕಾರ್ಯ ನಡೆದಿದೆ. ನ. 20 ರಂದು ಎರಡನೇ ಹಂತದ ಮತದಾನ 72 ಕ್ಷೇತ್ರಗಳಲ್ಲಿ ನಡೆಯಲಿದೆ.

Advertisement

ಟ್ವಿಟರ್‌ನಿಂದ 2 ಖಾತೆ ರದ್ದು
ಚುನಾವಣೆ ವೇಳೆ ನಕಲಿ ಸುದ್ದಿ ವಿರುದ್ಧ ಸಮರವನ್ನು ಟ್ವಿಟರ್‌ ಕೂಡ ಆರಂಭಿಸಿದೆ. ಅದಕ್ಕೆ ಪೂರಕವಾಗಿ ಚುನಾವಣಾ ಆಯೋಗದ ಹೆಸರಿನಲ್ಲಿ ರಚನೆಯಾಗಿದ್ದ ಎರಡು ನಕಲಿ ಖಾತೆಯನ್ನು ಮೈಕ್ರೋ ಬ್ಲಾಗಿಂಗ್‌ ತಾಣ ರದ್ದು ಮಾಡಿದೆ.@Election Comm, @DalitFederation ಖಾತೆಗಳು ಸಸ್ಪೆಂಡ್‌ ಆಗಿವೆ. ಕೇಂದ್ರ ಚುನಾವಣಾ ಆಯೋಗ ತನ್ನದೇ ಆಗಿರುವ ಹ್ಯಾಂಡಲ್‌ ಅನ್ನು ಹೊಂದಿಲ್ಲ.

ಹೇಳಿಕೆಗಳ ಬಗ್ಗೆ ಕಮಲ್‌ನಾಥ್‌ ಕ್ಷಮೆ ಯಾಚಿಸಬೇಕು. ಸರಕಾರಿ ಕಚೇರಿಗಳಲ್ಲಿ ಆರ್‌ಎಸ್‌ಎಸ್‌ ಶಾಖೆ ನಡೆಸುವುದಕ್ಕೆ ಅಡ್ಡಿ ಇರುವುದಿಲ್ಲ. ನಮ್ಮ ಮಾತೃ ಸಂಘಟನೆ ರಾಷ್ಟ್ರ ಭಕ್ತರ ಸಂಘಟನೆ.
ಶಿವರಾಜ್‌ ಸಿಂಗ್‌ ಚೌಹಾಣ್‌, ಮ.ಪ್ರ.ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next