ನವದೆಹಲಿ: ಸೋನಿಯಾ ಗಾಂಧಿ ಸದ್ಯ ಕಾಂಗ್ರೆಸ್‌ನ ಮಧ್ಯಂತರ ಅಧ್ಯಕ್ಷೆ. ಪೂರ್ಣಾವಧಿ ಅಧ್ಯಕ್ಷರ ನೇಮಕಕ್ಕೆ ಒತ್ತಾಯ ಕೇಳಿಬಂದಿದ್ದರೂ, ಈ ನಿಟ್ಟಿನಲ್ಲಿ ಒಮ್ಮತಕ್ಕೆ ಬರಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ.
ಭಾನುವಾರದ ಬೆಳವಣಿಗೆ ಪ್ರಕಾರ ಉತ್ತರ ಭಾರತದ ರಾಜ್ಯವೊಂದರ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಲಿದ್ದಾರಂತೆ.
ಮಧ್ಯಪ್ರದೇಶದ ಮಾಜಿ ಸಿಎಂಗಳಾದ ದಿಗ್ವಿಜಯ ಸಿಂಗ್ ಮತ್ತು ಕಮಲ್‌ನಾಥ್, ಹರ್ಯಾಣದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ, ರಾಜ್ಯಸಭೆಯ ಮಾಜಿ ಸದಸ್ಯ ಗುಲಾಂ ನಬಿ ಆಜಾದ್ ಹೆಸರುಗಳು ದಿಲ್ಲಿ ಪಡಸಾಲೆಯಲ್ಲಿ ಓಡಾಡುತ್ತಿವೆ.
ಇದನ್ನೂ ಓದಿ:ನನ್ನ ಜಿಲ್ಲೆಗೂ ಒಲಿಂಪಿಕ್ ಕೀರ್ತಿ: ಸಭಾಧ್ಯಕ್ಷ ಕಾಗೇರಿ
ಆದರೆ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಹೆಸರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿರುವ ಸಾಧ್ಯತೆಯಿದೆ. ಹೀಗಾಗಿ, ಅವರೇ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗುವ ಸಾಧ್ಯತೆ ಹೆಚ್ಚಾಗಿದೆ.
ಎಡಪಕ್ಷಗಳು ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಜತೆಗೆ ಅವರ ಬಾಂಧವ್ಯ ಚೆನ್ನಾಗಿದೆ. ಜತೆಗೆ ಸಂಸದರಾಗಿಯೂ ಅಪಾರ ಅನುಭವ ಹೊಂದಿರುವುದು ಅವರಿಗೆ ಧನಾತ್ಮಕವಾಗಿದೆ.