ಹೊಸದಿಲ್ಲಿ: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಕ್ರಮವಾಗಿ ಕಾಂಗ್ರೆಸ್ ಹಿರಿಯ ನಾಯಕರಾದ ಕಮಲ್‌ನಾಥ್, ಅಶೋಕ್ ಗೆಹ್ಲೋಟ್ ಹಾಗೂ ಭೂಪೇಶ್ ಬಘೇಲ್ ಸೋಮವಾರ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಮಧ್ಯಪ್ರದೇಶದ 18ನೇ ಸಿಎಂ ಆಗಿ ಪದಗ್ರಹಣ ಮಾಡಿದ ಎರಡೇ ಗಂಟೆಗಳಲ್ಲಿ ಕಮಲ್‌ನಾಥ್ ಅವರು, ರೈತರ ಸಾಲ ಮನ್ನಾ ಕಡತಕ್ಕೆ ಸಹಿ ಹಾಕುವ ಮೂಲಕ ಚುನಾ ವಣಾಪೂರ್ವ ಆಶ್ವಾಸನೆಯನ್ನು ಪೂರೈಸಿದ್ದಾರೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ 10 ದಿನಗಳ ಒಳಗಾಗಿ ಸಾಲ ಮನ್ನಾ ಮಾಡುತ್ತೇವೆ ಎಂದು ಪ್ರಚಾರದ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿ ದ್ದರು. ರೈತರ 2 ಲಕ್ಷ ರೂ.ವರೆಗಿನ ಅಲ್ಪಾವಧಿ ಕೃಷಿಸಾಲ ಮನ್ನಾ ಮಾಡಲಾಗಿದೆ.
ಸಫಾ ಧರಿಸಿದ ಪೈಲಟ್: ರಾಜಸ್ಥಾನದಲ್ಲಿ ಸಿಎಂ ಆಗಿ ಗೆಹೊÉàಟ್ ಪ್ರಮಾಣ ಸ್ವೀಕರಿಸಿದರೆ, ಉಪಮುಖ್ಯಮಂತ್ರಿಯಾಗಿ ಸಚಿನ್ ಪೈಲಟ್ ನೇಮಕಗೊಂಡಿದ್ದಾರೆ. ಪಕ್ಷ ಅಧಿಕಾರಕ್ಕೆ ಬರುವವರೆಗೂ ಸಾಂಪ್ರದಾಯಿಕ ಪೇಟಾ (ಸಫಾ) ಧರಿಸುವುದಿಲ್ಲ ಎಂದು 4 ವರ್ಷಗಳ ಹಿಂದೆ ಶಪಥ ಮಾಡಿದ್ದ ಪೈಲಟ್, ಸೋಮವಾರ ಕೆಂಪು ಬಣ್ಣದ ಪೇಟಾ ಧರಿಸಿ ಮಿಂಚಿದರು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ವಸುಂಧರಾ ರಾಜೇ ಹಾಜರಿದ್ದರು.
ವಿಪಕ್ಷಗಳ ನಾಯಕರು ಭಾಗಿ: ಮೂರೂ ರಾಜ್ಯಗಳ ಪ್ರಮಾಣ ವಚನ ಕಾರ್ಯ ಕ್ರಮದಲ್ಲಿ ಎನ್‌ಸಿಪಿಯ ಶರದ್ ಪವಾರ್, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಎನ್‌ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಆರ್‌ಜೆಡಿಯ ತೇಜಸ್ವಿ ಯಾದವ್, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಕರ್ನಾಟಕ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ವಿಪಕ್ಷಗಳ ಅನೇಕ ನಾಯಕರು ಪಾಲ್ಗೊಳ್ಳುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು. ಆದರೆ, ಎಸ್‌ಪಿ ನಾಯಕ ಅಖೀಲೇಶ್, ಬಿಎಸ್‌ಪಿ ನಾಯಕಿ ಮಾಯಾ ವತಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಮಮತಾ ಅವರು ತಮ್ಮ ಪರವಾಗಿ ಪಕ್ಷದ ಪ್ರತಿನಿಧಿಗಳನ್ನು ಕಳುಹಿಸಿದ್ದರು. ಇದೇ ವೇಳೆ, ಲೋಕಸಭೆ ಚುನಾವಣೆ ಬಳಿಕವೇ ಮುಂದಿನ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡುವುದಾಗಿ ಕಾಂಗ್ರೆಸ್ ಪಕ್ಷವೇ ಸ್ಪಷ್ಟಪಡಿಸಿರುವ ಕಾರಣ, ಸದ್ಯಕ್ಕೆ ಆ ಬಗ್ಗೆ ಚರ್ಚೆ ಬೇಡ ಎಂದು ಎನ್‌ಸಿಪಿ ಹೇಳಿದೆ. ಇನ್ನೊಂ ದೆಡೆ, ಅವಧಿಗೆ ಮೊದಲೇ ಪಿಎಂ ಅಭ್ಯರ್ಥಿಯನ್ನು ಘೋಷಿಸಿದರೆ ಪ್ರತಿಪಕ್ಷಗಳಲ್ಲೇ ಒಡಕು ಮೂಡಲಿದೆ ಎಂದು ಟಿಎಂಸಿ ಎಚ್ಚರಿಸಿದೆ.