ತಮಿಳುನಾಡು : ತಮಿಳುನಾಡಿನಲ್ಲಿ ಚುನಾವಣೆಯ ಹಿನ್ನಲೆಯಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಪ್ರಚಾರ ಸಭೆಗಳು ಬಿಡುವಿಲ್ಲದೆ ಸಾಗುತ್ತಿದೆ. ಚುನಾವಣೆಯ ಹಿನ್ನಲೆಯಲ್ಲಿ ಅಭಿವೃದ್ಧಿಯ ಜಪ ತಮಿಳುನಾಡಿನಲ್ಲಿ ಆಗುತ್ತಿದೆ. ಈ ನಡುವೆ ಕಮಲಹಾಸನ್ ಪ್ರಧಾನಿ ಮೋದಿಯವರನ್ನು ವ್ಯಂಗ್ಯ ಮಾಡಿದ್ದಾರೆ.
“ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೋದಿ ತೋರುತ್ತಿರುವ ತಮಿಳು ಭಾಷಾ ಪ್ರೀತಿಯ ಬಗ್ಗೆ ‘ಮಕ್ಕಳ್ ನೀದಿ ಮಯ್ಯಂ’ ಪಕ್ಷದ ಮುಖಂಡ ಕಮಲ್ ಹಾಸನ್ ವ್ಯಂಗ್ಯವಾಡಿದ್ದಾರೆ.
‘ತಮಿಳು ಕಲಿಯದಿರುವುದು ನನ್ನನ್ನು ಬಹುದಿನಗಳಿಂದ ಕಾಡುತ್ತಿರುವ ವಿಷಯ’ ಎಂದು ಇತ್ತೀಚೆಗೆ ಮೋದಿ ಮನ್ ಕಿ ಬಾತ್ ನಲ್ಲಿ ಹೇಳಿಕೊಂಡಿದ್ದರು.
ತಮಿಳರು ದಡ್ಡರಲ್ಲ. ಚುನಾವಣೆಯ ದಿನಾಂಕ ಘೋಷಿಸಿದ ಬಳಿಕ ಮೋದಿ ತೋರುತ್ತಿರುವ ತಮಿಳು ಭಾಷಾ ಪ್ರೀತಿ ಯಾವ ಉದ್ದೇಶದ್ದು ಎನ್ನುವುದು ತಮಿಳರಿಗೆ ಗೊತ್ತಿದೆ’ ಎಂದು ಕಮಲ್ ಹೇಳಿದ್ದಾರೆ.
‘ನಮ್ಮ ಭಾಷೆಯಲ್ಲಿ ಒಂದೆರೆಡು ತಿರುಕ್ಕುರಲಿನ ಸಾಲುಗಳು ತಪ್ಪಾಗಿ ಹೇಳಿದರೆ ಅದು ಮತಗಳಾಗಿ ಬದಲಾಗುತ್ತದೆ ಎಂಬ ನಂಬಿಕೆ ಇದ್ದರೆ ಅದು ಭ್ರಮೆ. ನಾವೆಂದಿಗೂ ಮತ ಚಲಾಯಿಸಲ್ಲ. ನಿಮ್ಮ ಕಪಟತನದ ಬಗ್ಗೆ ಇನ್ನಷ್ಟು ಅರಿತುಕೊಳ್ಳಲು ಅದು ಸಹಾಯಕವಾಗುತ್ತದೆ’ತಮಿಳು ಮತ್ತು ಇಲ್ಲಿನ ಜನರ ಮತಗಳು ಮಾರಾಟಕ್ಕಿಲ್ಲ ಎಂದಿದ್ದಾರೆ.
ಓದಿ : ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಬಿಸಿಲ ತಾಪ; 42ಡಿಗ್ರಿ ಗಡಿ ದಾಟಲಿದೆ ತಾಪ