Advertisement

ಕಾವೇರಿ ಬಗ್ಗೆ ಕಮಲ್‌ ಹಾಸನ್‌ ಚರ್ಚೆ

06:00 AM May 20, 2018 | Team Udayavani |

ಚೆನ್ನೈ: ಕಾವೇರಿ ಸ್ಕೀಮ್‌ನ ಕರಡು ನಿಯಮಗಳಿಗೆ ಸುಪ್ರೀಂಕೋರ್ಟ್‌ ಸಮ್ಮತಿ ಸೂಚಿಸಿದ ಮಾರನೇ ದಿನವೇ ತಮಿಳುನಾಡಿನಲ್ಲಿ ಚಟುವಟಿಕೆಗಳು ಬಿರುಸಾಗಿವೆ. ರಾಜಕಾರಣಿಯಾಗಿ ಬದಲಾಗಿರುವ ಕಮಲ್‌ಹಾಸನ್‌ರ ಮಕ್ಕಳ್‌ ನೀಧಿ ಮಯ್ಯಮ್‌ (ಎಂಎನ್‌ಎಂ) ಶನಿವಾರ ವಿವಿಧ ರಾಜಕೀಯ ಪಕ್ಷಗಳು ಮತ್ತು ರೈತರ ಸಂಘಟನೆಗಳ ಜತೆಗೆ ಮಾತುಕತೆ ನಡೆಸಿದರು. ಪ್ರತಿಪಕ್ಷ ಡಿಎಂಕೆ ಮತ್ತು ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ ಈ ಪ್ರಕ್ರಿಯೆಗಳಿಂದ ದೂರ ಉಳಿದಿದ್ದಾರೆ. ಸಭೆಯಲ್ಲಿ ಕಾವೇರಿ ನದಿ ಮುಖಜ ಭೂಮಿ ಪ್ರದೇಶವನ್ನು ಸಂರಕ್ಷಿತ ಕೃಷಿ ವಲಯ ಎಂದು ಘೋಷಿಸಬೇಕು ಎಂಬುದು ಸೇರಿದಂತೆ ಪ್ರಮುಖ ವಿಚಾರಗಳನ್ನು ಚರ್ಚಿಸಲಾಗಿದೆ.

Advertisement

ಆರ್‌.ಕೆ.ನಗರ ಕ್ಷೇತ್ರದ ಶಾಸಕ ಟಿ.ಟಿ.ವಿ.ದಿನಕರನ್‌, ಡಾ.ಎಸ್‌.ರಾಮದಾಸ್‌ ಅವರ ಪಟ್ಟಾಳಿ ಮಕ್ಕಳ್‌ ಕಚ್ಚಿ (ಪಿಎಂಕೆ) ಮಾತುಕತೆಯಲ್ಲಿ ಪಾಲ್ಗೊಂಡಿದ್ದವು. ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್‌ ಗೈರು ಹಾಜರಾದ ಬಗ್ಗೆ ಪ್ರತಿಕ್ರಿಯೆ ನೀಡಿದ ಕಮಲ್‌ಹಾಸನ್‌ “ಶನಿವಾರದ ಕಾರ್ಯಕ್ರಮಗಳ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ಅವರಿಗೆ ಗೊತ್ತಿದ್ದರೆ ಆಗಮಿಸಿರುತ್ತಿದ್ದರು’ ಎಂದು ಹೇಳಿದ್ದಾರೆ. 

ರಜನಿಕಾಂತ್‌ ಕಾರ್ಯಕ್ರಮದಿಂದ ದೂರು ಉಳಿದಿರುವ ಬಗ್ಗೆ ಮಾತನಾಡಿದ ಕಮಲ್‌ಹಾಸನ್‌ “ಅವರಿಗೆ ಆಹ್ವಾನ ನೀಡಿದಾಗ, ನೀವು ಈಗಾಗಲೇ ಹೊಸ ರಾಜಕೀಯ ಪಕ್ಷ ಆರಂಭಿಸಿಯಾಗಿದೆ. ನಾನು ಆರಂಭಿಸಬೇಕಷ್ಟೆ. ಹೀಗಾಗಿ ನಾನು ಹೇಗೆ ಬರಲಿ ಎಂದು ಪ್ರಶ್ನೆ ಮಾಡಿದರು. ಅದು ಅವರ ಅಭಿಪ್ರಾಯವಾಗಿದ್ದರೂ, ಕಾವೇರಿ ವಿಚಾರವಾದ್ದರಿಂದ ರಜನಿ ಬರಬಹುದಿತ್ತು’ ಎಂದಷ್ಟೇ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next