Advertisement

Chennai: ಕೆಲಸ ಕಳೆದುಕೊಂಡಿದ್ದ ಮಹಿಳಾ ಬಸ್‌ ಚಾಲಕಿಗೆ ಕಾರ್‌ ಗಿಫ್ಟ್‌ ಕೊಟ್ಟ ಕಮಲ್‌ ಹಾಸನ್‌

09:11 PM Jul 01, 2023 | Team Udayavani |

ಚೆನ್ನೈ: DMK ಸಂಸದೆ ಕನಿಮೊಳಿ ಅವರು ತಮಿಳುನಾಡಿನ ಕೊಯಂಬತ್ತೂರ್‌ಗೆ ಭೇಟಿ ನೀಡಿದ್ದ ವೇಳೆ ಉಂಟಾಗಿದ್ದ ವಿವಾದಕ್ಕೆ ಸಂಬಂಧಿಸಿ ತಮ್ಮ ಕೆಲಸವನ್ನು ಕಳೆದುಕೊಂಡಿದ್ದ ಕೊಯಂಬತ್ತೂರಿನ ಮಹಿಳಾ ಬಸ್‌ ಚಾಲಕಿ ಶರ್ಮಿಳಾ ಅವರಿಗೆ ನಟ, MNM ಪಕ್ಷದ ನಾಯಕ ಕಮಲ್‌ ಹಾಸನ್‌ ಅವರು ಕಾರೊಂದನ್ನು ಗಿಫ್ಟ್‌ ಆಗಿ ನೀಡಿದ್ದಾರೆ. ಅಲ್ಲದೇ, ಇಷ್ಟು ದಿನ ಉದ್ಯೋಗಿಯಾಗಿದ್ದ ಶರ್ಮಿಳಾ ಇನ್ನು ಹಲವಾರು ಜನರಿಗೆ ಉದ್ಯೋಗವನ್ನು ನೀಡುವವಳಾಗಲಿ ಎಂದು ಹಾರೈಸಿದ್ದಾರೆ.

Advertisement

ಘಟನೆಯ ಹಿನ್ನಲೆ:

ಇತ್ತೀಚೆಗೆ ಡಿಎಂಕೆ ಸಂಸದೆ ಕನಿಮೋಳಿ ಅವರು ಇತ್ತೀಚೆಗೆ ಕೊಯಂಬತ್ತೂರ್‌ಗೆ ಭೇಟಿ ನೀಡಿದ್ದ ವೇಳೆ ಅವರು ಏರಿದ ಖಾಸಗಿ ಬಸ್‌ಗೆ ʻನಗರದ ಮೊದಲ ಮಹಿಳಾ ಬಸ್‌ ಚಾಲಕಿʼ ಖ್ಯಾತಿಯ ಶರ್ಮಿಳಾ ಅವರೇ ಚಾಲಕಿಯಾಗಿದ್ದರು. ಈ ವೇಳೆ ಬಸ್‌ನ ಕಂಡಕ್ಟರ್‌ ಕನಿಮೋಳಿ ಅವರಿಗೆ ಟಿಕೆಟ್‌ ನೀಡಿದ್ದರು. ಕಂಡಕ್ಟರ್‌ ವರ್ತನೆಗೆ ಡ್ರೈವರ್‌ ಶರ್ಮಿಳಾ ಆಕ್ಷೇಪ ವ್ಯಕ್ತಪಡಿಸಿ ಆಡಳಿತ ಮಂಡಳಿಗೆ ದೂರು ನೀಡಿದ್ದರು.

ಇದಕ್ಕೆ ವಿರುದ್ಧವಾಗಿ ಕಂಡಕ್ಟರ್‌ ಕೂಡಾ ಶರ್ಮಿಳಾ ಮೇಲೆ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಸೆಲೆಬ್ರಿಟಿಗಳನ್ನು ಬಸ್‌ನಲ್ಲಿ ಪ್ರಯಾಣ  ಮಾಡಲು ಆಹ್ವಾನಿಸಿ ಇತರೆ ಪ್ರಯಾಣಿಕರಿಗೆ ಅನನುಕೂಲತೆ ಸೃಷ್ಟಿಸುತ್ತಿದ್ದಾರೆ ಎಂದು ದೂರಿದ್ದರು. ಇಬ್ಬರ ವಾದವನ್ನೂ ಆಲಿಸಿದ ಆಡಳಿತ ಮಂಡಳಿ ಶರ್ಮಿಳಾರನ್ನು ಕೆಲಸದಿಂದ ವಜಾ ಮಾಡಿತ್ತು. ಈ ವಿಚಾರ ಬಹಳಷ್ಟು ಚರ್ಚೆಯನ್ನೂ ಹುಟ್ಟು ಹಾಕಿತ್ತು.

ಈ ಸಂಗತಿ ನಟ, ಮಕ್ಕಳ್‌ ನೀಧಿ ಮಯಮ್‌ ಪಕ್ಷದ ಅಧ್ಯಕ್ಷ ಕಮಲ್‌ ಹಾಸನ್‌ ಅವರ ಕಿವಿಗೂ ಬಿದ್ದಿದೆ. ಅವರು ಕೆಲಸ ಕಳೆದುಕೊಂಡಿದ್ದ ಶರ್ಮಿಳಾ ಅವರಿಗೆ 3 ಲಕ್ಷ ರೂ.ಗಳ ಚೆಕ್‌ ಹಸ್ತಾಂತರಿಸಿದ್ದೂ ಅಲ್ಲದೆ ಸ್ವಂತವಾಗಿ ಉದ್ಯಮ ಆರಂಭಿಸಲು 7 ಸೀಟರ್‌ಗಳ ಮಲ್ಟಿ ಯುಟಿಲಿಟಿ ವಾಹನವನ್ನು ನೀಡುವುದಾಗಿ ಹೇಳಿದ್ದಾರೆ. ಅಲ್ಲದೇ, ಇಷ್ಟು ದಿನ ಉದ್ಯೋಗಿಯಾಗಿದ್ದ ಶರ್ಮಿಳಾ ಇನ್ನು ಹಲವಾರು ಜನರಿಗೆ ಉದ್ಯೋಗವನ್ನು ನೀಡುವವಳಾಗಲಿ ಎಂದು ಹಾರೈಸಿದ್ದಾರೆ.

Advertisement

ಇದನ್ನೂ ಓದಿ: STOCK EXCHANGE ಬಗ್ಗೆ ಕುತೂಹಲಕರ ಮಾಹಿತಿಗಳು ಇಲ್ಲಿವೆ ನೋಡಿ…

Advertisement

Udayavani is now on Telegram. Click here to join our channel and stay updated with the latest news.

Next