Advertisement

ಇಂಡಿಯನ್‌-2 ಚಿತ್ರೀಕರಣ ವೇಳೆ ಕ್ರೇನ್ ಅವಘಡ: ಕಮಲ್‌ ಹಾಸನ್‌ ವಿಚಾರಣೆ

10:08 AM Mar 04, 2020 | sudhir |

ಚೆನ್ನೈ: ಕಳೆದ ತಿಂಗಳು ಇಂಡಿಯನ್‌-2 ಚಿತ್ರೀಕರಣ ವೇಳೆ ಮೂವರನ್ನು ಬಲಿ ಪಡೆದ ಪ್ರಕರಣ ಸಂಬಂಧ ನಟ ಕಮಲ್‌ ಹಾಸನ್‌ ಅವರನ್ನು ವಿಚಾರಣೆ ನಡೆಸಲಾಯಿತು. ಕೇಂದ್ರೀಯ ಅಪರಾಧ ದಳದ ಪೊಲೀಸರ ಮುಂದೆ ಹಾಜರಾದ ಅವರನ್ನು ಮೂರು ಗಂಟೆಗಳ ಕಾಲ ಘಟನೆ ಕುರಿತು ಮಾಹಿತಿ ಪಡೆಯಲಾಗಿದೆ. ಫೆ.19ರಂದು ಇಂಡಿಯನ್‌-2 ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಕ್ರೇನ್‌ ಕೆಳಗೆ ಇಳಿಸುವಾಗ ಸಹಾಯಕ ನಿರ್ದೇಶಕ ಕೃಷ್ಣ, ಕಲೆ ಸಹಾಯಕ ಚಂದ್ರನ್‌ ಹಾಗೂ ಪ್ರೊಡಕ್ಷನ್‌ ಅಸಿಸ್ಟೆಂಟ್‌ ಮಧು ಸಾವನ್ನಪ್ಪಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next