Advertisement

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

05:54 PM Sep 21, 2024 | Team Udayavani |

ಚೆನ್ನೈ: ಕಮಲ್‌ ಹಾಸನ್ (Kamal Haasan)‌ – ಮಣಿರತ್ನಂ (Mani Ratnam) 36 ವರ್ಷದ ಬಳಿಕ ಜೊತೆಯಾಗುತ್ತಿರುವ ʼಥಗ್‌ ಲೈಫ್‌ʼ (Thug Life) ಸೆಟ್ಟೇರಿದ ಸಮಯದಿಂದ ಇದುವರೆಗೆ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ.

Advertisement

ʼವಿಕ್ರಮ್‌ʼ ಹಿಟ್‌ ಬಳಿಕ ಕಮಲ್‌ ಹಾಸನ್‌ ʼಇಂಡಿಯನ್‌ -2′ (Indian-2) ಅಷ್ಟಾಗಿ ಕಮಾಲ್‌ ಮಾಡಿಲ್ಲ. ಆದರೆ ಅವರ ಮುಂದಿನ ಸಿನಿಮಾ ʼಥಗ್‌ ಲೈಫ್‌ʼ ದೊಡ್ಡ ಹಿಟ್‌ ಆಗುವ ಸಾಲಿನಲ್ಲಿದೆ. ಈ ಸಿನಿಮಾದ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.

ಇದನ್ನೂ ಓದಿ: Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

ಈಗಾಗಲೇ ತನ್ನ ಪಾತ್ರವರ್ಗದ ವಿಚಾರದಿಂದ ಸದ್ದು ಮಾಡುತ್ತಿರುವ ʼಥಗ್‌ ಲೈಫ್‌ʼ ಈಗ ಬೃಹತ್‌ ಮೊತ್ತಕ್ಕೆ ಓಟಿಟಿ ರೈಟ್ಸ್‌ ಸೇಲ್‌ ಆಗಿದೆ ಎನ್ನುವ ವಿಚಾರ ಸುದ್ದಿ ಆಗುತ್ತಿದೆ.

Advertisement

ಇತ್ತೀಚೆಗೆ ದಳಪತಿ ವಿಜಯ್ (Thalapathy Vijay) ಅವರ ʼದಿ ಗೋಟ್‌ʼ (The Goat Movie) , ಅಜಿತ್ ಕುಮಾರ್ (Ajith Kumar) ಅವರ ʼಗುಡ್ ಬ್ಯಾಡ್ ಆಗ್ಲಿʼ (Good Bad Ugly) ಸಿನಿಮಾದ ಓಟಿಟಿ ಹಕ್ಕನ್ನು ದುಬಾರಿ ಬೆಲೆಗೆ ಖರೀದಿಸಿದ ನೆಟ್‌ ಫ್ಲಿಕ್ಸ್‌ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್‌ ನ್ನು 149.7 ಕೋಟಿ ರೂ.ಗೆ ಖರೀದಿಸಿದೆ ಎಂದು ʼಡೆಕ್ಕನ್ ಹೆರಾಲ್ಡ್ʼ ವರದಿ ಮಾಡಿದೆ.

ವರದಿ ಪ್ರಕಾರ ಈ ಒಪ್ಪಂದವು ತಮಿಳಿನ ಪ್ರಮುಖ ಚಲನಚಿತ್ರ ವಿತರಕರಿಂದ ನಡೆದಿದೆ ಎಂದು ಹೇಳಲಾಗಿದೆ.

ಸಿಂಬು, ತ್ರಿಶಾ ಕೃಷ್ಣನ್, ಅಶೋಕ್ ಸೆಲ್ವನ್, ಅಲಿ ಫಜಲ್, ಪಂಕಜ್ ತ್ರಿಪಾಠಿ, ಜೋಜು ಜಾರ್ಜ್, ನಾಸರ್, ಅಭಿರಾಮಿ ಗೋಪಿಕುಮಾರ್, ಐಶ್ವರ್ಯ ಲಕ್ಷ್ಮಿ, ಜಿಶು ಸೆಂಗುಪ್ತ, ಸನ್ಯಾ ಮಲ್ಹೋತ್ರಾ ಮುಂತಾದವರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

2025ರ ಆರಂಭದಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.

 

Advertisement

Udayavani is now on Telegram. Click here to join our channel and stay updated with the latest news.

Next