Advertisement

ಕಲ್ಯಾಣಪುರ: ಷಡಾಧಾರ (ನಿಧಿಕುಂಭ)ಸ್ಥಾಪನೆ

01:30 AM Jul 13, 2017 | Team Udayavani |

ಬ್ರಹ್ಮಾವರ, ಜು.12: ಶಿಲಾಮಯ ದೇಗುಲ ನೂರಾರು ವರ್ಷಕ್ಕೊಮ್ಮೆ ಪುನಃನಿರ್ಮಾಣಗೊಳ್ಳುವುದರಿಂದ ಜೀರ್ಣೋದ್ಧಾರ ನಮಗೆ ದೊರಕಿದ ಯೋಗ. ಭಕ್ತಿ ಹಾಗೂ ನಿಷ್ಕಲ್ಮಶ ಮನಸ್ಸಿನಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ಹೇಳಿದರು.

Advertisement

ಅವರು ಬುಧವಾರ ಕಲ್ಯಾಣಪುರ ಸಂತೆಕಟ್ಟೆ ಶ್ರೀ ಆದಿಶಕ್ತಿ ಮತ್ತು ಶ್ರೀ ವೀರಭದ್ರ ದೇವರ ನೂತನ ಗರ್ಭಗುಡಿಯ ಷಡಾಧಾರ ಸ್ಥಾಪನೆ ಹಾಗೂ ಶ್ರೀ ಬ್ರಹ್ಮಲಿಂಗ ದೇವರ ನೂತನ ಗುಡಿಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ದೇವಾಲಯ, ವಿದ್ಯಾಲಯ ಜನರ ಸಂಸ್ಕೃತಿಯನ್ನು ಸೂಚಿಸುತ್ತದೆ. ಭಾರತದಲ್ಲಿ ಇಂತಹ ಸಂಸ್ಕೃತಿ ಸುದೃಢವಾಗಿ ಉಳಿದಿದೆ. ಸಂಘಟಿತ ಆರಾಧನೆಗೆ ಫಲ ಹೆಚ್ಚು ಎಂದರು.

ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪುತ್ತೂರು ಹಯವದನ ತಂತ್ರಿಗಳು ಷಡಾಧಾರ ಸ್ಥಾಪನೆ ನೆರವೇರಿಸಿದರು.
ವಿಧ್ವಾನ್‌ ಗುಂಡಿಬೈಲು ಸುಬ್ರಹ್ಮಣ್ಯ ಭಟ್‌ ಷಡಾಧಾರ ಸ್ಥಾಪನೆಯ ಪ್ರಕ್ರಿಯೆಗಳನ್ನು ತಿಳಿಸಿದರು. ಈ ಸಂದರ್ಭ ಕ್ಷೇತ್ರದ ಅರ್ಚಕ ರಾಮಕೃಷ್ಣನ್‌ ಉಪಾಧ್ಯಾಯ, ಆಡಳಿತ ಮಂಡಳಿ ಉಪಾಧ್ಯಕ್ಷ ಜ್ಯೋತಿಪ್ರಸಾದ್‌ ಶೆಟ್ಟಿಗಾರ್‌ ಕಿನ್ನಿಮುಲ್ಕಿ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಾಜೇಶ್‌ ಪಿ., ಕಾರ್ಯಾಧ್ಯಕ್ಷ ಸಿ.ಪ್ರಭಾಕರ್‌, ಪ್ರ.ಕಾರ್ಯದರ್ಶಿ ಸಂತೋಷ್‌ ಸಗ್ರಿ, ಪದ್ಮಶಾಲಿ ಯುವ ವೇದಿಕೆ ಅಧ್ಯಕ್ಷ ಅಜಿತ್‌ ಅಂಬಲಪಾಡಿ, ಆದಿಶಕ್ತಿ ಪದ್ಮಶಾಲಿ ಮಹಿಳಾ ವೇದಿಕೆ ಅಧ್ಯಕ್ಷೆ ವೇದಾವತಿ ಕುಕ್ಕಿಕಟ್ಟೆ, ಭಜನಾ ಮಂಡಳಿ ಅಧ್ಯಕ್ಷ ದಯಾನಂದ ಶೆಟ್ಟಿಗಾರ್‌ ಮತ್ತಿತರರು ಉಪಸ್ಥಿತರಿದ್ದರು.

ಸರೋಜಿನಿ ವಿಠಲ್‌ ಶೆಟ್ಟಿಗಾರ್‌ ಸಂದೇಶ ಪತ್ರ ವಾಚಿಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ರಾಮದಾಸ್‌ ಶೆಟ್ಟಿಗಾರ್‌ ಕಾರ್ಯಕ್ರಮ ನಿರೂಪಿಸಿ, ಯೋಜನಾ ಪ್ರಮುಖ್‌ ಭಾಸ್ಕರ ಶೆಟ್ಟಿಗಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next