Advertisement

ವನಜಾ ಕರುಣಾಕರ ಶೆಟ್ಟಿ ಅವರಿಗೆ “ಕಲ್ಯಾಣ ಕಸ್ತೂರಿ’ಪ್ರಶಸ್ತಿ ಪ್ರದಾನ

05:41 PM Nov 29, 2019 | Team Udayavani |

ಕಲ್ಯಾಣ್‌, ನ. 28: : ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌ ಇದರ 18ನೇ ವಾರ್ಷಿಕೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವ ಆಚರಣೆಯು ನ. 24ರಂದು ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ದಿನಪೂರ್ತಿ ಕಲ್ಯಾಣ್‌ ಪಶ್ಚಿಮದ ಬೈಲ್‌ಬಜಾರ್‌ ಜೋರ್‌ ಪ್ಲಾಜಾ ಕಾಂಪ್ಲೆಕ್ಸ್‌ನ ಶ್ರೀಮತಿಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ನಡೆಯಿತು.

Advertisement

ಜಾಸ್ಮಿನ್‌ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಡಾ| ಸುರೇಂದ್ರ ವಿ. ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಹಿರಿಯ ರಂಗಕರ್ಮಿ ಕಮಲಾಕ್ಷ ಸರಾಫ್‌, ಸಾಹಿತಿ ಡಾ| ಸುಮಾ ದ್ವಾರಕಾನಾಥ್‌, ಸಮಾಜ ಸೇವಕಿ ವನಜಾ ಕರುಣಾಕರ ಶೆಟ್ಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲುಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು”ಕಲ್ಯಾಣ ಕಸ್ತೂರಿ’ ಪ್ರಶಸ್ತಿಯೊಂದಿಗೆ ಸಮ್ಮಾನಿಸಲಾಯಿತು. ಸಂಸ್ಥೆಯ ಕಾರ್ಯ ಕ್ರಮ ಆಯೋಜನ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ ಮೂಡು ಶೆಡ್ಡೆ ಕಲ್ಯಾಣ್‌ ಅವರನ್ನು ವಿಶೇಷವಾಗಿ ಸಮ್ಮಾನಿಸಲಾಯಿತು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ರಂಗಭೂಮಿ ಕಲಾವಿದ ಕಮಲಾಕ್ಷ ಸರಾಫ್‌ ಅವರು, ಕನ್ನಡ ನಾಡು-ನುಡಿ ಚಂದ, ಕನ್ನಡಿಗರ ಮನ ಚಂದ. ಕಲೆಇದು ಪರಮಾತ್ಮದ ಅಮೂಲ್ಯ ಕೊಡು ಗೆಯಾಗಿದ್ದು, ನಾವು ಯುವ ಪ್ರತಿಭೆ ಗಳನ್ನು ಪ್ರೋತ್ಸಾಹಿಸಬೇಕು. ಕಲ್ಯಾಣ್‌ ಕನ್ನಡ ಸಾಂಸ್ಕೃತಿಕ ಕೇಂದ್ರ ನೀಡಿದ ಸಮ್ಮಾನವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ ಎಂದರು. ಮತ್ತೋರ್ವ ಸಮ್ಮಾನಿತೆ ಡಾ| ಸುಮಾ ದ್ವಾರಕಾನಾಥ್‌ ಅವರು ಮಾತನಾಡಿ, ಈ ಹೃದಯಸ್ಪರ್ಶಿ ಸಮಾರಂಭವನ್ನು ನೋಡಿ, ಮನ ತುಂಬಿ ಬಂದಿದೆ. ನನ್ನ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅಳಿಲು ಸೇವೆಯನ್ನು ಗುರುತಿಸಿನೀಡಿದ ಈ ಸಮ್ಮಾನ ನನಗೆ ಸಾಹಿತ್ಯ ಕೃಷಿ ಮಾಡಲು ಪ್ರೇರಣೆ ನೀಡಲಿದೆ ಎಂದರು.

ಕಲ್ಯಾಣ ಕಸ್ತೂರಿ ಪ್ರಶಸ್ತಿಗೆ ಭಾಜನರಾದ ವನಜಾ ಕರುಣಾಕರ ಶೆಟ್ಟಿ ನಾನು ಸಮಾಜಕ್ಕಾಗಿ ಏನನ್ನಾದರೂ ಅಳಿಲು ಸೇವೆ ಮಾಡಿದ್ದರೆ ಅದು ನನ್ನ ಪತಿ ದಿ| ಕರುಣಾಕರ ಶೆಟ್ಟಿ ಅವರ ಪ್ರೇರಣೆಯೇ ಕಾರಣವಾಗಿದ್ದು, ಈ ಪ್ರಶಸ್ತಿಯನ್ನು ನನ್ನ ಪತಿದೇವರಿಗೆ ಅರ್ಪಿಸುತ್ತಿದ್ದೇನೆ ಎಂದು ನುಡಿದು ಕೃತಜ್ಞತೆ ಸಲ್ಲಿಸಿದರು.

ವಿಶೇಷ ಸಮ್ಮಾನ ಸ್ವೀಕರಿಸಿದ ಸಂಸ್ಥೆಯ ಕಾರ್ಯಕ್ರಮ ಸಮಿತಿಯ ಆಯೋಜನಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ ಮೂಡು ಶೆಡ್ಡೆ ಅವರು ಮಾತನಾಡಿ, ಕೇಂದ್ರದ ಬೆಳವಣಿಗೆಯಲ್ಲಿ ಬಂಟರ ಸಂಘದಪಾತ್ರ ಮಹತ್ವದ್ದಾಗಿದ್ದು, ಸಂಸ್ಥೆಯ ನೂತನ ಸ್ವಂತ ಕಚೇರಿ ನಿರ್ಮಾಣಕ್ಕೆ ಸಹಕರಿಸುವ ಭರವಸೆ ನೀಡಿದರು.

Advertisement

ವೇದಿಕೆಯಲ್ಲಿ ಅತಿಥಿಗಳಾಗಿ ಕನ್ನಡ ಸಂಘದ ಮಹಿಳಾ ವಿಭಾಗದ ಕಾರ್ಯಾ ಧ್ಯಕ್ಷೆ ಡಾ| ರಜನಿ ಪೈ, ಬಂಟರ ಸಂಘ

ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಜಯರಾಮ್‌ ಶೆಟ್ಟಿ, ಬಂಟರ ಸಂಘ ಭಿವಂಡಿ-ಬದ್ಲಾಪುರ ಪ್ರಾದೇ ಶಿಕ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್‌ ಎನ್‌. ಶೆಟ್ಟಿ, ಬಂಟರ ಸಂಘ ಅಂಧೇರಿ- ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಾ ಧ್ಯಕ್ಷ ಡಾ| ಆರ್‌. ಕೆ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಪ್ರಕಾಶ್‌ ಹೆಗ್ಡೆ, ಉಪಾಧ್ಯಕ್ಷ ಮಲ್ಲಪ್ಪಬಿ. ಬಿರಾದಾರ್‌, ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ವೈ. ಶೆಟ್ಟಿ, ಜತೆಕಾರ್ಯದರ್ಶಿ ಕುಂಠಿನಿ ಪ್ರಕಾಶ್‌ಹೆಗ್ಡೆ, ಗೌರವ ಕೋಶಾಧಿಕರಿ ಪ್ರಕಾಶ್‌ ಎಸ್‌. ನಾಯ್ಕ, ಗೌರವ ಕೋಶಾಧಿಕಾರಿ ಪ್ರಕಾಶ್‌ ಎಸ್‌. ನಾಯ್ಕ, ಜತೆ ಕೋಶಾಧಿಕಾರಿ ಮಹಾಲಿಂಗ ಆರ್‌. ಹೊಸಕೋಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಬಿ. ಶೆಟ್ಟಿ ವಿವಿಧ ಉಪಸಮಿತಿಗಳ ಕಾರ್ಯಾಧ್ಯಕ್ಷರಾದ ಸುಬ್ಬಯ್ಯ ಎ. ಶೆಟ್ಟಿ, ಪುಟ್ಟಪ್ಪ ಟಿ. ಹಾನಗಲ್‌, ಬಸವ ಪ್ರಭು ಎಂ. ಜಟ್ಟಿ, ಚನ್ನವೀರಪ್ಪ ಎನ್‌. ಅಡಿಗಣ್ಣನವರ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಭಾರತಿ ಬಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಗಿರಿಜಾ ವಿ. ಸೊಗಲದ, ಕಾರ್ಯದರ್ಶಿ ವಿಜಯಲಕ್ಷ್ಮೀ ಎಸ್‌. ಹುನ್ಸಿಕಟ್ಟೆ,ಕೋಶಾಧಿಕಾರಿ ಸುಜಾತಾ ಎಸ್‌.ಶೆಟ್ಟಿ, ಜತೆ ಕಾರ್ಯದರ್ಶಿ ಉಮಾ ಎಸ್‌.ಹುನ್ಸಿಮಾರ್‌, ಜತೆ ಕೋಶಾಧಿಕಾರಿಕುಮುದಾ ಡಿ. ಶೆಟ್ಟಿ ಉಪಸ್ಥಿತರಿದ್ದರು. ಶಾಲಿನಿ ಸಂತೋಷ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಕಾಶ್‌ ಕುಂಠಿನಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next