Advertisement
ಹಿಂದೂ ರಾಷ್ಟ್ರೀಯವಾದದ ಅಲೆ ಯಡಿ ನಮ್ಮ ದೇಶದಲ್ಲಿ ಮೂಡಿಬಂದ ಅತೀ ದೊಡ್ಡ ನೇತಾರರಲ್ಲಿ ಒಬ್ಬರು ಕಲ್ಯಾಣ್ ಸಿಂಗ್. ಹಿರಿಯರಾಗಿ ತುಂಬಿದ ಕೊಡದಂತಿದ್ದರೂ ರಾಜಕಾರಣದಲ್ಲಿ ಮಾಗಿದ ಹಣ್ಣಿನಂತಿದ್ದರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಬೆಳೆಸಿಕೊಂಡ ದೇಶಭಕ್ತಿಯ ಕಸುವು ಅವರ ಮೈಮನ ಗಳಿಂದ ಸಡಿಲಗೊಂಡಿರಲಿಲ್ಲ.
Related Articles
Advertisement
ಹಿಂದುಳಿದ ವರ್ಗಗಳ ಕಣ್ಮಣಿ :
ಲೋಧಿ ಸಮುದಾಯಕ್ಕೆ ಸೇರಿದ ಕಲ್ಯಾಣ್ ಸಿಂಗ್, ತಮ್ಮ ಸಮುದಾಯದ ಅಭಿವೃದ್ಧಿ ವಿಚಾರದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಂಡವರಲ್ಲ. ಇದೇ ಕಾರಣಕ್ಕಾಗಿ ಬಿಜೆಪಿಯಲ್ಲಿ ಕೆಲವು ಉನ್ನತ ಸಮುದಾಯಗಳಿಗೆ ಸೇರಿದ ನಾಯಕರ ಅಸಮಾಧಾನ ಕಟ್ಟಿಕೊಂಡ ಅವರು, ಪಕ್ಷವನ್ನೂ ಬಿಟ್ಟು ಹೋಗಿದ್ದರು. 2004ರಲ್ಲಿ ಪುನಃ ಬಿಜೆಪಿಗೆ ವಾಪಸಾಗಿದ್ದ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದಲ್ಲಿ ಕೂರಿಸಲಾಗಿತ್ತು. 2004ರಲ್ಲಿ ಬುಲಂದರ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. 2009ರಲ್ಲಿ ಮತ್ತೆ ಪಕ್ಷ ತೊರೆದರು. 2014ರಲ್ಲಿ ಪಕ್ಷಕ್ಕೆ ವಾಪ ಸಾದರು. ಆಗ ಪುನಃ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದರು.
ಪಕ್ಷಕ್ಕೆ ಅವರ ಸೇವೆಯನ್ನು ಸ್ಮರಿಸಿ, ಬಿಜೆಪಿ ಅವರಿಗೆ ರಾಜಸ್ಥಾನ ರಾಜ್ಯಪಾಲರ ನ್ನಾಗಿ (2014)ನೇಮಿಸಿತು. ಅನಂತರ ಹಿಮಾಚಲ ಪ್ರದೇಶದ ರಾಜ್ಯಪಾಲರ ಹೊಣೆಯನ್ನು ಹೆಚ್ಚುವರಿಯಾಗಿ ನೀಡಲಾ ಗಿತ್ತು. ರಾಜ್ಯಪಾಲರಾಗಿ 5 ವರ್ಷ ಪೂರೈಸಿ, ಪುನಃ ಸಕ್ರಿಯ ರಾಜಕಾರಣಕ್ಕೆ ಹಿಂದಿರು ಗಿದ ಅವರು, ಬಿಜೆಪಿಯನ್ನು ಮತ್ತಷ್ಟು ಪ್ರಬಲಗೊಳಿಸಲು ಪ್ರಯತ್ನಿಸಿದ್ದರು.
ಕಡೆಯ ಉಸಿರಿನವರೆಗೂ ರಾಮ ಮಂದಿರ ಸಾಕಾರಕ್ಕಾಗಿ ಹಾತೊರೆಯುತ್ತಿದ್ದ ಅವರು, ಅದೇ ಕಾರಣಕ್ಕಾಗಿಯೇ ಹಿಂದು ತ್ವದ ಶಾಶ್ವತ ತಾರೆಯಾಗಿ ಅಭಿಮಾನಿಗಳ ಹೃದಯದಲ್ಲಿ ನೆಲೆಸಲಿದ್ದಾರೆ.
ನನ್ನ ನೋವನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ. ಕಲ್ಯಾಣ್ ಸಿಂಗ್ ಅವರು ಹಿರಿಯ ಮುತ್ಸದ್ದಿ, ಬೇರುಮಟ್ಟದ ನಾಯಕ, ಶ್ರೇಷ್ಠ ವ್ಯಕ್ತಿ. ಭಾರತದ ಸಾಂಸ್ಕೃತಿಕ ಪುನರುತ್ಥಾನಕ್ಕೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ. ಸಮಾಜದ ತುಳಿತಕ್ಕೊಳಗಾದ ವರ್ಗದ ಕೋಟ್ಯಂತರ ಜನರಿಗೆ ಧ್ವನಿಯಾದವರು. ಈ ದುಃಖದ ಸಮಯದಲ್ಲಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಬಯಸುತ್ತೇನೆ.– ನರೇಂದ್ರ ಮೋದಿ, ಪ್ರಧಾನಿ