ಇದೇ ಸಂದರ್ಭದಲ್ಲಿ ಉಪನ್ಯಾಸಕರನ್ನು ಹಾಗೂ ಅನ್ನಪ್ರಸಾದದ ಸೇವಾರ್ಥಿಗಳಾದ ಸುಮಂಗಳಾ ನಾರಾ ದಂಪತಿಯನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಪುಣೆಯ ವಿಚಾರವಾದಿ ಡಾ| ಶಶಿಕಾಂತ್ ಪಟ್ಟಣ, ಇನ್ನೋರ್ವ ಉಪನ್ಯಾಸಕ ಶಿವಪ್ಪ ಪೂಜಾರಿ, ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಪ್ರಕಾಶ್ ಹೆಗ್ಡೆ, ಸಂಸ್ಥೆಯ ಗೌರವಾಧ್ಯಕ್ಷ ಮಂಜುನಾಥ ರೈ, ಉಪಾಧ್ಯಕ್ಷ ಎಂ. ಬಿ. ಬಿರಾದಾರ್, ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ವೈ. ಶೆಟ್ಟಿ, ಜತೆ ಕಾರ್ಯದರ್ಶಿ ಕುಂಠಿನಿ ಪ್ರಕಾಶ್ ಹೆಗ್ಡೆ, ಕೋಶಾಧಿಕಾರಿ ಪ್ರಕಾಶ್ ನಾೖಕ್, ಜತೆ ಕೋಶಾಧಿಕಾರಿ ಎಂ. ಆರ್. ಹೊಸಕೋಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ಭಾರತಿ ಬಿ. ಶೆಟ್ಟಿ ಉಪಸ್ಥಿತರಿದ್ದರು.
Advertisement
ಸಂಸ್ಥೆಯ ಗೌರವ ಪ್ರಧಾನ ಕೋಶಾಧಿಕಾರಿ ಪ್ರಕಾಶ್ ನಾೖಕ್ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಗಿರಿಜಾ ವೀರಣ್ಣ ಸೊಗಲದ, ಮೀನಾಕ್ಷೀ ಚೆನ್ನವೀರ ಅಡಿಗಣ್ಣನವರ್ ಮತ್ತು ವನಜಾಕ್ಷೀ ಚಂದ್ರಶೇಖರ ಜಿಗಳೂರು ಅವರು ಪ್ರಾರ್ಥನೆಗೈದರು. ಜೊತೆ ಕಾರ್ಯದರ್ಶಿ ಕುಂಠಿನಿ ಪ್ರಕಾಶ್ ಹೆಗ್ಡೆ ವಂದಿಸಿದರು.